‘ಪುಷ್ಯ’ ಕೈಕೊಟ್ಟರೆ ಕೂಲಿಯೇ ಆಸರೆ: ವಲಸೆ ತೆರಳಲು ಸಿದ್ಧರಾಗುತ್ತಿರುವ ರೈತರು
ಚಿತ್ರದುರ್ಗ: ‘ಆಗಸ್ಟ್ ತಿಂಗಳಿಡೀ ಶೇಂಗಾ, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಪುಷ್ಯ ಮಳೆ ಕೈಕೊಟ್ಟರೆ ಬಿತ್ತನೆ ಮಾಡಿ ಫಲವೇನು? ತಡವಾಗಿ ಬಿತ್ತನೆ ಮಾಡುವ ಬದಲು ಬೇರೆಡೆಗೆ ಹೋಗಿ ಕೂಲಿ ಮಾಡುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಜಿಲ್ಲೆಯ ಕೆಲವು ಸಣ್ಣ ಹಿಡುವಳಿದಾರರು ಹೇಳುತ್ತಿದ್ದಾರೆ.ಕೋಟೆ

ಚಿತ್ರದುರ್ಗ: ‘ಆಗಸ್ಟ್ ತಿಂಗಳಿಡೀ ಶೇಂಗಾ, ಮೆಕ್ಕೆಜೋಳ, ತೊಗರಿ ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಪುಷ್ಯ ಮಳೆ ಕೈಕೊಟ್ಟರೆ ಬಿತ್ತನೆ ಮಾಡಿ ಫಲವೇನು? ತಡವಾಗಿ ಬಿತ್ತನೆ ಮಾಡುವ ಬದಲು ಬೇರೆಡೆಗೆ ಹೋಗಿ ಕೂಲಿ ಮಾಡುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಜಿಲ್ಲೆಯ ಕೆಲವು ಸಣ್ಣ ಹಿಡುವಳಿದಾರರು ಹೇಳುತ್ತಿದ್ದಾರೆ.ಕೋಟೆನಾಡಿನ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಬಹುಪಾಲು ರೈತರಿಗೆ ಶೇಂಗಾ, ಮೆಕ್ಕೆಜೋಳ, ತೊಗರಿಯೇ ಆಧಾರವಾಗಿವೆ. ಹಿರೇಪುಷ್ಯ, ಚಿಕ್ಕಪುಷ್ಯ ಮಳೆ ಸುರಿದರೆ ಮಾತ್ರ ಬಿತ್ತನೆ ಮಾಡಬೇಕು ಎಂಬುದು ಅವರ ಬಲವಾದ ನಂಬಿಕೆ. ತಡವಾದರೆ ಅವರು ಬಿತ್ತನೆಯನ್ನೇ ತ್ಯಜಿಸುತ್ತಾರೆ. ಮುಂದೆ ಕೂಲಿ ಅರಸುತ್ತಾ ನಗರಗಳಿಗೆ ವಲಸೆ ಹೋಗುತ್ತಾರೆ.ಸದ್ಯ ಹಿರೇಪುಷ್ಯ ಮುಗಿದು, ಚಿಕ್ಕಪುಷ್ಯ ಮಳೆ ಆರಂಭವಾಗಿದ್ದು, ಆ. 3ರವರೆಗೂ ಮುಂದುವರಿಯಲಿದೆ. ಕೋಟೆನಾಡಿನಲ್ಲಿ ಶೇ 56ರಷ್ಟು ಮಳೆ ಕೊರತೆಯಾಗಿದ್ದು, ಬಹುತೇಕ ಕೃಷಿ ಭೂಮಿ ಬಿತ್ತನೆಗೆ ಸಿದ್ಧವೇ ಆಗಿಲ್ಲ. ‘ಈಗ ಹದಮಳೆಯಾಗಿ, ಭೂಮಿ ಹಸನುಗೊಳಿಸಿ, ಬಿತ್ತನೆ ಮಾಡುವುದು ಯಾವಾಗ?’ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.ನಗರದಿಂದ ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳತ್ತ ಹೊರಟರೆ ಕೃಷಿ ಭೂಮಿಗಳು ಬಟಾಬಯಲಿನಂತೆ ಕಾಣುತ್ತವೆ. ಉಳುಮೆಯಾಗದ ಜಮೀನಿನಲ್ಲಿ ಇನ್ನೂ ಮೇಲಕ್ಕೇಳದ ಹುಲ್ಲನ್ನು ಆಡು, ಕುರಿ, ದನಗಳು ಮೇಯುತ್ತಿರುವುದು ಸಾಮಾನ್ಯವಾಗಿದೆ. ಬೇರೆ ದಾರಿ ಕಾಣದ ರೈತರು ಕೂಲಿ ಅರಸಿ ಊರು ಬಿಡಲು ಸಿದ್ಧರಾಗುತ್ತಿದ್ದಾರೆ. ‘ಮಳೆ ಬಂದರೆ ಬಿತ್ತನೆ, ಇಲ್ಲವೆಂದರೆ ಕೂಲಿ’ ಎನ್ನುವ ಮಾತು ಬರ ಎದುರಿಸುವ ಅವರ ಸಿದ್ಧತೆಯನ್ನು ಅನಾವರಣಗೊಳಿಸಿದೆ.‘ಒಂದು ಕಡೆ ಮಳೆ ಇಲ್ಲ, ಮುಂದೆ ಮಳೆ ಬಂದರೂ ಬಿತ್ತನೆ ಮಾಡೋಣ ಎಂದರೆ, ಬಿತ್ತನೆ ಬೀಜದ ಬೆಲೆಯನ್ನು ಏರಿಕೆ ಮಾಡಲಾಗಿದೆ. ಪ್ರತಿ ಕ್ವಿಂಟಲ್ ಶೇಂಗಾ ಬೀಜಕ್ಕೆ ಸರ್ಕಾರ ₹ 12,000 ದರ ನಿಗದಿ ಮಾಡಿದೆ. ನಮ್ಮಿಂದ ಕೇವಲ ₹ 6,000ಕ್ಕೆ ಖರೀದಿ ಮಾಡಿ ಈಗ ಬಿತ್ತನೆ ಹೆಸರಿನಲ್ಲಿ ದ್ವಿಗುಣ ಬೆಲೆಗೆ ಮಾರುತ್ತಿದ್ದಾರೆ. ಇನ್ನು, ರಸಗೊಬ್ಬರ ಖರೀದಿಗೆ ಆ್ಯಪ್ನಲ್ಲಿ ಅರ್ಜಿ ಸಲ್ಲಿಸಬೇಕಂತೆ. ಇಂಥ ಗೊಂದಲಗಳಿಂದಾಗಿ ನಾವು ಈ ಬಾರಿ ಬೆಳೆಯ ಭರವಸೆಯನ್ನೇ ಕಳೆದುಕೊಂಡಿದ್ದೇವೆ’ ಎಂದು ಮೊಳಕಾಲ್ಮುರು ತಾಲ್ಲೂಕು ಸೂರಮ್ಮನಹಳ್ಳಿ ಗ್ರಾಮದ ರೈತ ಜಿ.ಪಾಲಯ್ಯ ‘ಪ್ರಜಾವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ 3.40 ಲಕ್ಷ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇದ್ದರೂ ಈವರೆಗೆ ಶೇ 17.55ರಷ್ಟು (59,000 ಹೆಕ್ಟೇರ್) ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯಾದ್ಯಂತ ಬರ ಆವರಿಸಿಕೊಳ್ಳುತ್ತಿರುವ ಕಾರಣ ಜಾನುವಾರು ಸಾಕಣೆಗೂ ಸಂಕಷ್ಟ ಎದುರಾಗಿದೆ. ಮೇವಿನ ಕೊರತೆ ಕಾರಣಕ್ಕೆ ರೈತರು ಈಗಾಗಲೇ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.ಮಲೆನಾಡಿನ ಸೆರಗಿನಲ್ಲಿರುವ ಹೊಳಲ್ಕೆರೆ ತಾಲ್ಲೂಕು, ಹೊಸದುರ್ಗ ಭಾಗದ ಕೆಲ ಪ್ರದೇಶಗಳಲ್ಲೂ ಈ ಬಾರಿ ಬರದ ಛಾಯೆ ಆವರಿಸಿದೆ. ಈ ಭಾಗದ ರೈತರು ಈಗಾಗಲೇ ಅಡಿಕೆ ಬೆಳೆದಿದ್ದು, ಕೊಳವೆಬಾವಿಗಳು ವಿಫಲವಾಗಿರುವ ಕಾರಣ ಅಡಿಕೆ ಗಿಡಗಳ ನಾಶದ ಭೀತಿ ಎದುರಿಸುತ್ತಿದ್ದಾರೆ.‘ಅರೆಮಲೆನಾಡಿನ ಐತಿಹಾಸಿಕ ಗಾದ್ರಿ ಗುಡ್ಡದ ತಪ್ಪಲಿನಲ್ಲಿ ಬರವೇ ಬರುವುದಿಲ್ಲ ಎಂಬ ನಂಬಿಕೆ ನೂರಾರು ವರ್ಷಗಳಿಂದ ಇತ್ತು. ಈಗ ನಂಬಿಕೆ ಸುಳ್ಳಾಗಿದ್ದು, ಗುಡ್ಡದ ತಪ್ಪಲಿನ ಭೂಮಿಯೇ ನೀರಿಲ್ಲದೆ ಒಣಗುತ್ತಿದೆ’ ಎಂದು ರೈತ ಬೋರಯ್ಯ ಹೇಳಿದರು.ಮೊಳಕಾಲ್ಮುರು ತಾಲ್ಲೂಕು ಚಿಕ್ಕೋಬನಹಳ್ಳಿ ಗ್ರಾಮದ ಬಳಿ ರೈತರು ಜಮೀನು ಸಿದ್ಧ ಮಾಡಿಕೊಂಡು ಮಳೆಗಾಗಿ ಕಾಯುತ್ತಿರುವುದುಕೊಳವೆಬಾವಿ ವಿಫಲವಾಗಿರುವ ಕಾರಣ ಚಿತ್ರದುರ್ಗ ತಾಲ್ಲೂಕು ಪಾಲವ್ವನಹಳ್ಳಿ ಗ್ರಾಮದ ರೈತ ರಂಗನಾಥ್ ದಾಳಿಂಬೆ ಗಿಡ ಕಿತ್ತು ಹಾಕಿರುವುದುಜಗಳೂರು ಪರಿಸ್ಥಿತಿಯೂ ಭಿನ್ನವಾಗಿಲ್ಲ ಚಿತ್ರದುರ್ಗದ ಮೊಳಕಾಲ್ಮುರು ಚಳ್ಳಕೆರೆ ತಾಲ್ಲೂಕುಗಳೊಂದಿಗೆ ಗಡಿ ಹಂಚಿಕೊಂಡಿರುವ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸ್ಥಿತಿಯೂ ಭಿನ್ನವಾಗಿಲ್ಲ. ಮುಂಗಾರು ಆರಂಭದಲ್ಲಿ ಕೆಲ ರೈತರು ಮೆಕ್ಕೆಜೋಳ ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಪೈರು ಮೇಲೇಳದ ಕಾರಣ ರೈತರು ಕೈಸುಟ್ಟುಕೊಳ್ಳಬೇಕಾಯಿತು. ತಾಲ್ಲೂಕಿನಾದ್ಯಂತ ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಹೀಗಾಗಿ ರೈತ ಸಮುದಾಯದಲ್ಲಿ ತಲ್ಲಣ ಮೂಡಿದೆ. ಕಸಬಾ ಹೋಬಳಿ ಸೊಕ್ಕೆ ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ತೀವ್ರವಾಗಿದೆ. ತಾಲ್ಲೂಕಿನಲ್ಲಿ 56000 ಹೆಕ್ಟೇರ್ ಪ್ರದೇಶದ ಪೈಕಿ ಇದುವರೆಗೆ ಕೇವಲ 9305 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.ದಾಳಿಂಬೆ ಗಿಡ ಕಿತ್ತುಹಾಕಿದರು ಚಿತ್ರದುರ್ಗ ಹಿರಿಯೂರು ತಾಲ್ಲೂಕಿನ ಧರ್ಮಪುರ ಭಾಗದಲ್ಲಿ ಅನೇಕ ರೈತರು ದಾಳಿಂಬೆ ಬೆಳೆಯುತ್ತಾರೆ. ಕೊಳವೆಬಾವಿಗಳು ವಿಫಲವಾಗುತ್ತಿರುವ ಕಾರಣ ಅವರು ಗಿಡಗಳನ್ನೇ ಕಿತ್ತು ಹಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದಾಳಿಂಬೆಗೆ ಉತ್ತಮ ಬೆಲೆ ಇದ್ದರೂ ಗಿಡ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‘6 ಕೊಳವೆಬಾವಿಗಳಲ್ಲಿ ಒಂದರ ಹಿಂದೆ ಒಂದರಂತೆ ನೀರು ನಿಂತುಹೋಗಿದೆ. 5 ಎಕರೆ ಜಾಗದಲ್ಲಿದ್ದ ದಾಳಿಂಬೆ ಉಳಿಸಿಕೊಳ್ಳಲು ಸಾಧ್ಯವಾಗದೇ ಅನಿವಾರ್ಯವಾಗಿ ಗಿಡ ಕಿತ್ತುಹಾಕಿದ್ದೇನೆ’ ಎಂದು ಪಾಲವ್ವನಹಳ್ಳಿ ಗ್ರಾಮದ ರೈತ ಜಿ.ಎಚ್.ರಂಗನಾಥ್ ಹೇಳಿದರು.ಮುಖ್ಯಮಂತ್ರಿ ಬೆಳೆ ವೀಕ್ಷಣೆ ನಾಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜುಲೈ 25ರಂದು ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಸಭೆಯಲ್ಲಿ 9 ಜಿಲ್ಲೆಗಳ ಸಚಿವರು ಶಾಸಕರು ಅಧಿಕಾರಿ ವರ್ಗ ಭಾಗವಹಿಸಲಿದೆ. ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿಯವರು ಬರಗಾಲದ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಲಿದ್ದಾರೆ.–ಬಿ.ಮಂಜುನಾಥ, ಕೃಷಿ ಜಂಟಿ ನಿರ್ದೇಶಕರೈತರು ಈಗ ಸಿರಿಧಾನ್ಯ ರಾಗಿ ಹುರುಳಿ ಮುಂತಾದ ಪರ್ಯಾಯ ಬೆಳೆ ಬೆಳೆಯಲು ಗಮನ ಹರಿಸಬೇಕು. ಇಲಾಖೆಯಿಂದಲೂ ಸೂಚನೆ ನೀಡಲಾಗುವುದು