ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಕಟ್ಟಡ ನಕ್ಷೆಗೆ ಶುಲ್ಕ ನಿಗದಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ಕಟ್ಟಡ ನಕ್ಷೆ ಮಂಜೂರು ಮಾಡಲು ಶುಲ್ಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.ಜಿಬಿಜಿಎಯಂತೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಆಯಾ ನಗರ ಪಾಲಿಕೆಗಳೇ ಅನುಮತಿ ನೀಡುತ್ತವೆ. ನಕ್ಷೆ ಅನುಮೋದನೆ, ಪರಿಷ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ಕಟ್ಟಡ ನಕ್ಷೆ ಮಂಜೂರು ಮಾಡಲು ಶುಲ್ಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.ಜಿಬಿಜಿಎಯಂತೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಆಯಾ ನಗರ ಪಾಲಿಕೆಗಳೇ ಅನುಮತಿ ನೀಡುತ್ತವೆ. ನಕ್ಷೆ ಅನುಮೋದನೆ, ಪರಿಷ್ಕೃತ ನಕ್ಷೆ ಅನುಮೋದನೆ, ಪ್ಲಿಂತ್ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಕ್ಕೆ ನಗರ ಪಾಲಿಕೆಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.ಕಟ್ಟಡ ನಕ್ಷೆ ಮಂಜೂರಾತಿಗೆ ವಿವಿಧ ರೀತಿಯ ಶುಲ್ಕಗಳನ್ನು ಮಾರ್ಗಸೂಚಿ ದರದ ಅನ್ವಯ ನಿಗದಿಪಡಿಸಲಾಗಿದೆ. ಸ್ವತ್ತಿನ ಮಾರ್ಗಸೂಚಿ ದರ ಒಂದು ಚದರ ಮೀಟರ್ಗೆ ₹50 ಸಾವಿರಕ್ಕಿಂತ ಕಡಿಮೆ ಇದ್ದರೆ ಅದನ್ನು ₹50 ಸಾವಿರ ಎಂದೇ ಪರಿಗಣಿಸಿ ಶುಲ್ಕ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.ಏಕ ನಿವೇಶನ ನಕ್ಷೆ/ ಪರಿಷ್ಕೃತ ಏಕ ನಿವೇಶನ ನಕ್ಷೆ ಮಂಜೂರಾತಿಯನ್ನು 2021ರಲ್ಲಿ ಹೊರಡಿಸಲಾಗಿರುವ ಆದೇಶದಂತೆಯೇ ನಿರ್ವಹಿಸಲಾಗುತ್ತದೆ ಎಂದು ತಿಳಿಸಲಾಗಿದೆ.ಚದರ ಮೀಟರ್ಗೆ ಸುಮಾರು ₹50 ಸಾವಿರ ಮಾರ್ಗಸೂಚಿ ದರವಿರುವ 30 x 40 ಅಡಿ ನಿವೇಶನದಲ್ಲಿ ಸ್ಟಿಲ್ಟ್+ 3 ಅಂತಸ್ತಿನ ಕಟ್ಟಡದ ನಕ್ಷೆ ಅನುಮೋದನೆಗೆ ಕಾರ್ಮಿಕ ಸೆಸ್, ರಸ್ತೆ ಅಗೆತ ಶುಲ್ಕ ಹಾಗೂ ಇತರೆ ಎಲ್ಲ ರೀತಿಯ ಸೆಸ್–ಶುಲ್ಕಗಳು ಸೇರಿದಂತೆ ₹1.87 ಲಕ್ಷ ವೆಚ್ಚವಾಗುತ್ತದೆ.