ಸಿಜೆಪಿ ಪ್ರತಿಭಟನೆ: ಅರ್ಜಿ ಸಲ್ಲಿಕೆಯಾಗಿಲ್ಲ ಎಂದ ಸಿಜೆಐ
ನವದೆಹಲಿ: ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮಾಧ್ಯಮಗಳ ವರದಿಯು ಅತ್ಯಂತ ಬೇಜವಾಬ್ದಾರಿಯುತವಾಗಿದೆ. ಅದು ಕೇವಲ ಪ್ರಾತಿನಿಧಿಕವಾಗಿದೆಯೇ ಹೊರತು, ಅರ್ಜಿಯಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ.‘

ನವದೆಹಲಿ: ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತು ತುರ್ತು ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮಾಧ್ಯಮಗಳ ವರದಿಯು ಅತ್ಯಂತ ಬೇಜವಾಬ್ದಾರಿಯುತವಾಗಿದೆ. ಅದು ಕೇವಲ ಪ್ರಾತಿನಿಧಿಕವಾಗಿದೆಯೇ ಹೊರತು, ಅರ್ಜಿಯಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ.‘ಇದುವರೆಗೂ ಅಂತಹ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.‘ಕಳೆದೆರಡು ದಿನಗಳಿಂದ ತಪ್ಪು ಹೇಳಿಕೆಗಳು ಹರಿದಾಡುತ್ತಿದ್ದು, ಅರ್ಜಿ ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳು ಸಂಪೂರ್ಣವಾಗಿ ತನ್ನ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಂಡಿದೆ. ಮುಖ್ಯ ನ್ಯಾಯಮೂರ್ತಿಗಳು ಪಟ್ಟಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ತಪ್ಪು ವರದಿ ಮಾಡಲಾಗಿದೆ’ ಎಂದು ಸಿಜೆಐ ಹೇಳಿದ್ದಾರೆ.ನಮ್ಮ ಪ್ರಕರಣಗಳನ್ನು ಶುಕ್ರವಾರವೇ ತುರ್ತಾಗಿ ಪಟ್ಟಿ ಮಾಡುವಂತೆ ಕೆಲವು ವಕೀಲರ ಒತ್ತಾಯಿಸಿದರು.ಈ ವೇಳೆ ಸಿಜೆಪಿಯ ಕುರಿತು ಉಲ್ಲೇಖಿಸಿದ ಅವರು, ‘ಬೆಳಿಗ್ಗೆ 10 ಗಂಟೆಯವರೆಗೂ ಒಂದೇ ಒಂದು ಪುಟ ಕೂಡ ಅರ್ಜಿ ದಾಖಲಾಗಿಲ್ಲ. ಒಬ್ಬರು ಪ್ರತಿನಿಧಿಯನ್ನು ಕಳುಹಿಸಲಾಗಿದೆ. ಮಿಶ್ರಾ ಅಥವಾ ಮತ್ತ್ಯಾರೋ ಇರಬೇಕು. ಪ್ರಾತಿನಿಧ್ಯವನ್ನು ರಿಟ್ ಅರ್ಜಿಯಾಗಿ ಪರಿಗಣಿಸಬಹುದೇ? ಕೆಲವರು ಬೇಜವಾಬ್ದಾರಿಯುತವಾಗಿ ವರದಿ ಮಾಡುತ್ತಿದ್ದಾರೆ’ ಎಂದು ಸೂರ್ಯಕಾಂತ್ ವಿವರಿಸಿದ್ದಾರೆ.ಜುಲೈ 20ರಂದು ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದು, ಈ ಕುರಿತು ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಕೋರಿ ವಕೀಲರೊಬ್ಬರು ಬುಧವಾರ ಕೋರಿದ್ದರು.‘ಪೊಲೀಸರು ದೌರ್ಜನ್ಯ ನಡೆಸಿದ್ದಕ್ಕೆ ನನ್ನ ಬಳಿ ವಿಡಿಯೊಗಳಿವೆ. ಇದನ್ನು ಗುರುವಾರವೇ ಪಟ್ಟಿ ಮಾಡಿದರೆ, ವಿದ್ಯಾರ್ಥಿಗಳು ಇರಲಿದ್ದಾರೆ’ ಎಂದು ಹೇಳಿದ್ದರು.ವಕೀಲರ ಮನವಿಯನ್ನು ತಿರಸ್ಕರಿಸಿದ ಸಿಜೆಐ, ಈ ಹಂತದಲ್ಲಿ ದೃಶ್ಯಾವಳಿಯನ್ನು ಪರಿಶೀಲಿಸಲು ಪೀಠವು ಒಲವು ಹೊಂದಿಲ್ಲ. ದೃಶ್ಯಾವಳಿಗಳ ಕುರಿತು ನಾವು ಆಸಕ್ತಿ ಹೊಂದಿಲ್ಲ. ಅದಕ್ಕೆ ಸಮಯವೂ ಇಲ್ಲ. ನಾವು ಆ ದೃಶ್ಯಗಳನ್ನು ವೀಕ್ಷಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.