ಭೋಜಶಾಲಾ: ಮಧ್ಯಂತರ ಅರ್ಜಿ ಜುಲೈ 29ಕ್ಕೆ ವಿಚಾರಣೆ
ನವದೆಹಲಿ: ಮುಸ್ಲಿಮರಿಗೆ ನಮಾಜ್ ಮಾಡಲು ಮಧ್ಯಪ್ರದೇಶ ಸರ್ಕಾರವು ನೀಡಿರುವ ಪರ್ಯಾಯ ಸ್ಥಳವು ಧಾರ್ನ ಭೋಜಶಾಲಾ ಸಂಕೀರ್ಣಕ್ಕಿಂತ ತುಂಬಾ ದೂರದಲ್ಲಿದೆ ಎಂದು ಆರೋಪಿಸಿ ಮುಸ್ಲಿಮರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಜುಲೈ 29ರಂದು ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.ಸರ್ಕಾರ ಗುರುತಿಸಿರುವ ಸ್ಥಳವು ಭೋಜಶಾಲಾ ಸಂಕೀರ್ಣಕ್ಕಿಂತ 1.3

ನವದೆಹಲಿ: ಮುಸ್ಲಿಮರಿಗೆ ನಮಾಜ್ ಮಾಡಲು ಮಧ್ಯಪ್ರದೇಶ ಸರ್ಕಾರವು ನೀಡಿರುವ ಪರ್ಯಾಯ ಸ್ಥಳವು ಧಾರ್ನ ಭೋಜಶಾಲಾ ಸಂಕೀರ್ಣಕ್ಕಿಂತ ತುಂಬಾ ದೂರದಲ್ಲಿದೆ ಎಂದು ಆರೋಪಿಸಿ ಮುಸ್ಲಿಮರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಜುಲೈ 29ರಂದು ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.ಸರ್ಕಾರ ಗುರುತಿಸಿರುವ ಸ್ಥಳವು ಭೋಜಶಾಲಾ ಸಂಕೀರ್ಣಕ್ಕಿಂತ 1.3 ಕಿ.ಮೀ. ದೂರದಲ್ಲಿದೆ. ಹಾಗಾಗಿ ಸಂಕೀರ್ಣದ ಬಳಿಯೇ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕು ಎಂದು ಮುಸ್ಲಿಮರು ಕೋರಿದ್ದಾರೆ.ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಬುಧವಾರ ತಿಳಿಸಿದ್ದರು. ಪಟ್ಟಿಯಲ್ಲಿ ಈ ಅರ್ಜಿಯು ಕಾಣದಿದ್ದ ಕಾರಣ ವಿಚಾರಣೆಯ ಅಂತ್ಯದ ವೇಳೆಗೆ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು ಅರ್ಜಿಯ ಬಗ್ಗೆ ಪ್ರಸ್ತಾಪಿಸಿದರು.
Read the complete story at Prajavani