ಹಾಕಿ ಟೂರ್ನಮೆಂಟ್ಗೆ ರಾಹುಲ್ ದ್ರಾವಿಡ್ ಚಾಲನೆ: ಆಟಗಾರರಿಗೆ ಮಹತ್ವದ ಸಲಹೆ
ಬೆಂಗಳೂರು: ಭಾರತೀಯ ಕ್ರಿಕೆಟ್ನ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಶುಕ್ರವಾರ ಬೆಂಗಳೂರಿನ ಪ್ರತಿಷ್ಠಿತ 'ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್' (ಎಸ್ಜೆಸಿಸಿ)ನಲ್ಲಿ ಆಯೋಜಿಸಿದ್ದ ಹಾಕಿ ಟೂರ್ನಮೆಂಟ್ಗೆ ಚಾಲನೆ ನೀಡಿದರು.ಕಾಲೇಜಿನ ಕಾಮರ್ಸ್ ಪದವಿ ವಿಭಾಗದ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಕೋಲ್ಗೇಟ್ ಟೋಟಲ್ ಅಂತರ ಕಾಲೇಜು 5ಎ ಸೈಡ್ ಹಾಕಿ ಟ

ಬೆಂಗಳೂರು: ಭಾರತೀಯ ಕ್ರಿಕೆಟ್ನ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಶುಕ್ರವಾರ ಬೆಂಗಳೂರಿನ ಪ್ರತಿಷ್ಠಿತ 'ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್' (ಎಸ್ಜೆಸಿಸಿ)ನಲ್ಲಿ ಆಯೋಜಿಸಿದ್ದ ಹಾಕಿ ಟೂರ್ನಮೆಂಟ್ಗೆ ಚಾಲನೆ ನೀಡಿದರು.ಕಾಲೇಜಿನ ಕಾಮರ್ಸ್ ಪದವಿ ವಿಭಾಗದ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಕೋಲ್ಗೇಟ್ ಟೋಟಲ್ ಅಂತರ ಕಾಲೇಜು 5ಎ ಸೈಡ್ ಹಾಕಿ ಟೂರ್ನಿಯನ್ನು ಆಯೋಜಿಸಲಾಗಿದೆ.ಜುಲೈ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯನ್ನು 'ಯೆಸ್ ಫಾರ್ ಹಾಕಿ' ಸಂಸ್ಥೆಯ ಸಹಯೋಗದೊಂದಿಗೆ ಎಸ್ಜೆಸಿಸಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದೆ. ಈ ಟೂರ್ನಿಯಲ್ಲಿ ಬಾಲಕರ ಲೀಗ್ ಕಮ್ ನಾಕ್ಔಟ್ ವಿಭಾಗದಲ್ಲಿ ಬೆಂಗಳೂರಿನ 12 ಪ್ರಮುಖ ಕಾಲೇಜು ತಂಡಗಳು ಸೆಣಸಾಡುತ್ತಿದ್ದರೆ, ಬಾಲಕಿಯರ ರೌಂಡ್ ರಾಬಿನ್ ವಿಭಾಗದಲ್ಲಿ 5 ತಂಡಗಳು ಕಣಕ್ಕಿಳಿದಿವೆ. ಎರಡೂ ವಿಭಾಗಗಳಲ್ಲಿ ಜಯಗಳಿಸುವ ತಂಡಗಳಿಗೆ 'ಕೋಲ್ಗೇಟ್ ಟೋಟಲ್ ಇಂಟರ್ ಕಾಲೇಜಿಯೇಟ್ ಪ್ಲಾಟಿನಂ ರೋಲಿಂಗ್ ಟ್ರೋಫಿ 2026' ಅನ್ನು ನೀಡಿ ಗೌರವಿಸಲಾಗುತ್ತದೆ.ಕ್ರೀಡಾಪಟುಗಳಿಗೆ ದಂತ ಆರೋಗ್ಯದ ಮಹತ್ವ ತಿಳಿಸಿದ ರಾಹುಲ್ ದ್ರಾವಿಡ್ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ರಾಹುಲ್ ದ್ರಾವಿಡ್, ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಕ್ರೀಡೆ ಮತ್ತು ಕೋಲ್ಗೇಟ್ ಟೋಟಲ್ ಎರಡರ ಸಿದ್ಧಾಂತವಾಗಿರುವ ಶಿಸ್ತು ಮತ್ತು ಶ್ರೇಷ್ಠತೆಯ ಮೌಲ್ಯಗಳ ಬಗ್ಗೆ ಅವರು ಮಾತನಾಡಿದರು.ಕೋಲ್ಗೇಟ್ ಟೋಟಲ್ನ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ದ್ರಾವಿಡ್, ‘ಯಾವುದೇ ಕ್ರೀಡೆಯಾಗಲಿ, ಅಲ್ಲಿ ಶಿಸ್ತು ಬಹಳ ಮುಖ್ಯ. ವೇಗವಾಗಿ ಸಾಗುವ ಹಾಕಿ ಪಂದ್ಯಗಳಲ್ಲಿ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ರಿಕವರಿ ಗೆಲುವನ್ನು ನಿರ್ಧರಿಸುತ್ತದೆ. ಹಾಗಾಗಿ, ಆಧುನಿಕ ಕ್ರೀಡಾಪಟುಗಳಿಗೆ ದಂತ ಆರೋಗ್ಯ ಅತ್ಯಗತ್ಯ. ಬಾಯಿಯ ಸೂಕ್ಷ್ಮಾಣುಗಳು ದೇಹವನ್ನು ಪ್ರವೇಶಿಸಿ ಹೇಗೆ ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ಅದು ಕ್ರೀಡಾಪಟುವಿನ ಶಕ್ತಿ ಹಾಗೂ ರಿಕವರಿಯ ಮೇಲೆ ಹೇಗೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನವೇ ಸಾಬೀತುಪಡಿಸಿದೆ’ ಹಾಗಾಗಿ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಿ’ ಎಂದು ಸಲಹೆ ನೀಡಿದರು.