ಅಂಚೆ ಇಲಾಖೆ ಜೊತೆ ಫ್ಲಿಪ್ಕಾರ್ಟ್ ಪಾಲುದಾರಿಕೆ
ನವದೆಹಲಿ: ಅಂಚೆ ಇಲಾಖೆ ಮೂಲಕ ಗ್ರಾಹಕರಿಗೆ ಸರಕುಗಳನ್ನು ತಲುಪಿಸಲು ಇಲಾಖೆಯ ಜೊತೆ ಇ–ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ.ಈ ಪಾಲುದಾರಿಕೆಯಿಂದ ಅಂಚೆ ಇಲಾಖೆಯ ಬೃಹತ್ ಜಾಲ ಬಳಸಿಕೊಂಡು ನಗರ, ಅರೆ–ನಗರ, ದುರ್ಗಮ ಪ್ರದೇಶಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.ಮೊದಲೇ ಹಣ

ನವದೆಹಲಿ: ಅಂಚೆ ಇಲಾಖೆ ಮೂಲಕ ಗ್ರಾಹಕರಿಗೆ ಸರಕುಗಳನ್ನು ತಲುಪಿಸಲು ಇಲಾಖೆಯ ಜೊತೆ ಇ–ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಪಾಲುದಾರಿಕೆ ಮಾಡಿಕೊಂಡಿದೆ.ಈ ಪಾಲುದಾರಿಕೆಯಿಂದ ಅಂಚೆ ಇಲಾಖೆಯ ಬೃಹತ್ ಜಾಲ ಬಳಸಿಕೊಂಡು ನಗರ, ಅರೆ–ನಗರ, ದುರ್ಗಮ ಪ್ರದೇಶಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.ಮೊದಲೇ ಹಣ ಪಾವತಿಸಿದ ಮತ್ತು ಕ್ಯಾಶ್ ಆನ್ ಡೆಲಿವರಿ ಸೇವೆ ಲಭ್ಯವಿದೆ. ಒಟಿಪಿ ಆಧಾರಿತ ದೃಢೀಕರಣ ಮತ್ತು ಸರಕುಗಳ ಟ್ರ್ಯಾಕಿಂಗ್ ಮಾಡಬಹುದಾಗಿದೆ ಎಂದು ತಿಳಿಸಿದೆ. ಡಿಸೆಂಬರ್ನಲ್ಲಿ, ಇಲಾಖೆಯು ಅಮೆಜಾನ್ ಇಂಡಿಯಾದೊಂದಿಗೆ ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿತ್ತು.
Read the complete story at Prajavani