ಏಷ್ಯನ್ ಗೇಮ್ಸ್ ಕ್ರಿಕೆಟ್ ‘ಡ್ರಾ’: ನೇರ ಕ್ವಾರ್ಟರ್ಫೈನಲ್ಗೆ ಭಾರತ, ಪಾಕಿಸ್ತಾನ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಪುರುಷರ ಮತ್ತು ಮಹಿಳಾ ತಂಡಗಳಿಗೆ ಈ ವರ್ಷದ ಏಷ್ಯನ್ ಗೇಮ್ಸ್ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಸ್ಪರ್ಧೆಗಳಲ್ಲಿ ನೇರವಾಗಿ ಕ್ವಾರ್ಟರ್ಫೈನಲ್ಗೆ ಪ್ರವೇಶ ನೀಡಲಾಗಿದೆ. ಭಾರತ ಎರಡೂ ವಿಭಾಗಗಳಲ್ಲಿ ಹಾಲಿ ಚಾಂಪಿಯನ್ ಆಗಿದೆ.ಟಿ20 ಮಾದರಿಯಲ್ಲಿ ನಡೆಯುವ ಈ ಸ್ಪರ್ಧೆಗಳ ಡ್ರಾ ಶುಕ್ರವಾರ ನಡೆಯಿತು. ಭಾರತ ಮಹಿಳೆಯರ ತಂಡವು, ಜಪಾನ್ ವಿರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಪುರುಷರ ಮತ್ತು ಮಹಿಳಾ ತಂಡಗಳಿಗೆ ಈ ವರ್ಷದ ಏಷ್ಯನ್ ಗೇಮ್ಸ್ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಸ್ಪರ್ಧೆಗಳಲ್ಲಿ ನೇರವಾಗಿ ಕ್ವಾರ್ಟರ್ಫೈನಲ್ಗೆ ಪ್ರವೇಶ ನೀಡಲಾಗಿದೆ. ಭಾರತ ಎರಡೂ ವಿಭಾಗಗಳಲ್ಲಿ ಹಾಲಿ ಚಾಂಪಿಯನ್ ಆಗಿದೆ.ಟಿ20 ಮಾದರಿಯಲ್ಲಿ ನಡೆಯುವ ಈ ಸ್ಪರ್ಧೆಗಳ ಡ್ರಾ ಶುಕ್ರವಾರ ನಡೆಯಿತು. ಭಾರತ ಮಹಿಳೆಯರ ತಂಡವು, ಜಪಾನ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಿದೆ. ಪುರುಷರ ವಿಭಾಗದಲ್ಲಿ ಭಾರತದ ಎದುರಾಳಿ ಯಾರೆಂಬುದು ಪೂರ್ವಭಾವಿ ಹಂತದ ನಂತರ ನಿರ್ಧಾರವಾಗಲಿದೆ. ಭಾರತ ಮಹಿಳಾ ತಂಡವು ಸೆಮಿಫೈನಲ್ ತಲುಪಿದಲ್ಲಿ ಬಾಂಗ್ಲಾದೇಶ ಅಥವಾ ಚೀನಾ ಎದುರಾಳಿಯಾಗಲಿದೆ. ಪುರುಷರ ವಿಭಾಗದ ಕ್ರಿಕೆಟ್ ಸ್ಪರ್ಧೆಗಳು ಸೆಪ್ಟೆಂಬರ್ 24ರಂದು ಆರಂಭವಾಗಲಿದ್ದು, ಅಕ್ಟೋಬರ್ 1ರಂದು ಕೊನೆಗೊಳ್ಳಲಿದೆ. ಪುರುಷರ ತಂಡಕ್ಕೆ ಸೆಮಿಫೈನಲ್ನಲ್ಲಿ ಪಾಕಿಸ್ತಾನ ಸಂಭವನೀಯ ಎದುರಾಳಿಯಾಗಬಹುದು.ಮಹಿಳಾ ಕ್ರಿಕೆಟ್ ಸೆ. 17 ರಿಂದ 22 ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಎದುರಾಗುವ ಸಂಭವ ಅಲ್ಲಗೆಳೆಯುವಂತಿಲ್ಲ.ಪುರುಷರ ವಿಭಾಗದಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ಪೂರ್ವಭಾವಿ ಹಂತದಲ್ಲಿ ಅಫ್ಗಾನಿಸ್ತಾನ, ಜಪಾನ್, ನೇಪಾಳ ಎ ಗುಂಪಿನಲ್ಲಿ, ಹಾಂಗ್ಕಾಂಗ್, ಚೀನಾ, ಮಲೇಷ್ಯಾ ಮತ್ತು ಒಮಾನ್ ಬಿ ಗುಂಪಿನಲ್ಲಿವೆ.ಪುರುಷರ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಿದ್ದಾರೆ., ಮಹಿಳೆಯರ ತಂಡದ ಸಾರಥ್ಯವನ್ನು ಹರ್ಮನ್ಪ್ರೀತ್ ಕೌರ್ ವಹಿಸಲಿದ್ದಾರೆ.ನಾಲ್ಕನೇ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ ಆಡಲಾಗುತ್ತಿದೆ. 2010ರ ಗ್ವಾಂಗ್ಝೌ, 2014ರ ಇಂಚಿಯಾನ್ ಮತ್ತು 2023ರ ಹಾಂಗ್ಝೌ್ ಕ್ರೀಡೆಗಳಲ್ಲಿ ಕ್ರಿಕೆಟ್ ಸ್ಪರ್ಧೆಗಳು ನಡೆದಿದ್ದವು.