ಹಿಮಾಚಲ ಪ್ರದೇಶ: ವಾಹನದ ಮೇಲೆ ಬಂಡೆ ಬಿದ್ದು 13 ಮಂದಿ ಸಾವು
ಶಿಮ್ಲಾ: ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಪ್ರದೇಶದಲ್ಲಿ ಚಲಿಸುತ್ತಿದ್ದ ಟ್ಯಾಕ್ಸಿ ಮೇಲೆ ಬಂಡೆಗಲ್ಲು ಬಿದ್ದು, ಆರು ತಿಂಗಳ ಮಗು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.15 ಮಂದಿ ಪ್ರಯಾಣಿಕರು ಎಸ್ಯುವಿನಲ್ಲಿ ಕುಲುವಿನಿಂದ ಕಿಲ್ಲಾರ್ನತ್ತ ತೆರಳುತ್ತಿದ್ದರು. ಕಡು ನಲ್ಲಾ ಸಮೀಪ ಚಲಿಸುತ್ತಿದ್ದ ವೇಳೆ ವಾಹನದ ಮ

ಶಿಮ್ಲಾ: ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಪ್ರದೇಶದಲ್ಲಿ ಚಲಿಸುತ್ತಿದ್ದ ಟ್ಯಾಕ್ಸಿ ಮೇಲೆ ಬಂಡೆಗಲ್ಲು ಬಿದ್ದು, ಆರು ತಿಂಗಳ ಮಗು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.15 ಮಂದಿ ಪ್ರಯಾಣಿಕರು ಎಸ್ಯುವಿನಲ್ಲಿ ಕುಲುವಿನಿಂದ ಕಿಲ್ಲಾರ್ನತ್ತ ತೆರಳುತ್ತಿದ್ದರು. ಕಡು ನಲ್ಲಾ ಸಮೀಪ ಚಲಿಸುತ್ತಿದ್ದ ವೇಳೆ ವಾಹನದ ಮೇಲೆ ದೊಡ್ಡದಾದ ಬಂಡೆಗಲ್ಲು ಉರುಳಿಬಿದ್ದಿದ್ದು, ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ನಂತರ ಗಾಡಿಯ ಹಿಂಭಾಗಕ್ಕೆ ಬೆಂಕಿ ಹತ್ತಿಕೊಂಡಿತು. ಇಬ್ಬರು ಬದುಕಿ ಉಳಿದಿದ್ದಾರೆ.ದಾರಿಹೋಕರು ಹಾಗೂ ಸೇನಾ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ವಾಹನವು ಸಂಪೂರ್ಣವಾಗಿ ಚಪ್ಪಟೆಯಾಗಿ ಬೆಂಕಿ ಹೊತ್ತಿಕೊಂಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ.‘ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಲಾಹೌಲ್ ಮತ್ತು ಸ್ಪಿತಿ ಜಿಲ್ಲಾಧಿಕಾರಿ ಕಿರಣ್ ಬದಾನಾ ಖಚಿತಪಡಿಸಿದ್ದಾರೆ.