ಸಿದ್ಧರ ಗ್ರಾಮದ ನರಸಿಂಹ ದೇವಸ್ಥಾನದಲ್ಲಿ ನಾಳೆ ಅಖಂಡ ನಾಮ ಸಂಕೀರ್ತನೆ
ಕಾರವಾರ: ತಾಲ್ಲೂಕಿನ ಸಿದ್ಧರ ಗ್ರಾಮದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಜುಲೈ 25ರಂದು ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ‘ಅಖಂಡ ನಾಮ ಸಂಕೀರ್ತನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಒಂದು ದಿನದ ಅಹೋರಾತ್ರಿ ನಿರಂತರ ಭಜನೆ ಮತ್ತು ನಾಮ ಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗುವ ಈ ಅಖಂಡ ನಾಮ ಸಂಕೀರ್ತನೆಯು ಮರುದಿನ ಬೆಳಿಗ್ಗೆ 6 ಗಂಟೆಯವರೆಗ

ಕಾರವಾರ: ತಾಲ್ಲೂಕಿನ ಸಿದ್ಧರ ಗ್ರಾಮದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಜುಲೈ 25ರಂದು ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ‘ಅಖಂಡ ನಾಮ ಸಂಕೀರ್ತನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಒಂದು ದಿನದ ಅಹೋರಾತ್ರಿ ನಿರಂತರ ಭಜನೆ ಮತ್ತು ನಾಮ ಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗುವ ಈ ಅಖಂಡ ನಾಮ ಸಂಕೀರ್ತನೆಯು ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು, ದೈವಭಕ್ತರು ಹಾಗೂ ಸುತ್ತಮುತ್ತಲ ಭಜನಾ ಮಂಡಳಿಗಳ ಸದಸ್ಯರು ಭಾಗವಹಿಸಬಹುದು ಎಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260724-20-2047346952
Read the complete story at Prajavani