ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ – 15 ಲಕ್ಷ ಮೌಲ್ಯದ ಮದ್ಯ ಮಣ್ಣುಪಾಲು
ಹಾಸನ: ಇಲ್ಲಿನ ದೊಡ್ಡಪುರ ಗ್ರಾಮದ ಬಳಿ ಬಿಯರ್ (Beer) ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ (Hassan) ನಗರದ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ತುಂಬಿದ ಲಾರಿ ತೆರಳುತ್ತಿತ್ತು. ದೊಡ್ಡಪುರ ಗ್ರಾಮದ ಬಳಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ

ಹಾಸನ: ಇಲ್ಲಿನ ದೊಡ್ಡಪುರ ಗ್ರಾಮದ ಬಳಿ ಬಿಯರ್ (Beer) ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ (Hassan) ನಗರದ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ತುಂಬಿದ ಲಾರಿ ತೆರಳುತ್ತಿತ್ತು. ದೊಡ್ಡಪುರ ಗ್ರಾಮದ ಬಳಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ. ಇದನ್ನೂ ಓದಿ: ಖೋಟಾ ನೋಟು ಚಲಾವಣೆಗೆ ಯತ್ನ – ಇಬ್ಬರು ಅರೆಸ್ಟ್ ಲೆಜೆಂಡ್, ರಾಯಲ್, ಪವರ್ ಕೂಲ್, ಸನ್ನಿ ಬೀಚಸ್ ಕಂಪನಿಯ ಬಿಯರ್ಗಳು ಬಾಟೆಲ್ಗಳು , ಟಿನ್ಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡಿವೆ. ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕ್ಯಾಂಟರ್, ಬೈಕ್ ಮಧ್ಯೆ ಭೀಕರ ಅಪಘಾತ – ದೇವಾಲಯಕ್ಕೆ ತೆರಳುತ್ತಿದ್ದ ಇಬ್ಬರು ಸ್ನೇಹಿತರು ದುರ್ಮರಣ
Read the complete story at Public TV Kannada