ಮಳೆಗಾಲದಲ್ಲಿ ಸ್ವರ್ಗದಂತೆ ಕಾಣುತ್ತೆ ಈ ಊರು: ಮಾನ್ಸೂನ್ ರಾಜಧಾನಿ ಬಗ್ಗೆ ತಿಳಿಯಿರಿ
ಮಳೆಗಾಲದ ತುಂತುರು ಸಿಂಚನದಲ್ಲಿ ನೆನೆಯುತ್ತ, ಪ್ರವಾಸ ಮಾಡುವುದು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಬೈಕ್ ರೈಡ್ ಮಾಡುತ್ತಾ ಹಚ್ಚಹಸಿರಿನ ಪ್ರಕೃತಿಯ ನಡುವೆ ಸಾಗುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಮುಂಗಾರು ಅವಧಿಯಲ್ಲಿ ಈಶಾನ್ಯ ಭಾರತದ ಒಂದು ಹಳ್ಳಿಯೊಂದರಲ್ಲಿ ದೇಶದ ಯಾವ ಭಾಗದಲ್ಲಿಯೂ ಬೀಳದಷ್ಟು ಮಳೆಯಾಗುತ್ತದೆ. ಆ ಮಳೆಯ ಹಳ್ಳಿಯೇ ಮೌಸಿನ್ ರಾ

ಮಳೆಗಾಲದ ತುಂತುರು ಸಿಂಚನದಲ್ಲಿ ನೆನೆಯುತ್ತ, ಪ್ರವಾಸ ಮಾಡುವುದು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಬೈಕ್ ರೈಡ್ ಮಾಡುತ್ತಾ ಹಚ್ಚಹಸಿರಿನ ಪ್ರಕೃತಿಯ ನಡುವೆ ಸಾಗುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಮುಂಗಾರು ಅವಧಿಯಲ್ಲಿ ಈಶಾನ್ಯ ಭಾರತದ ಒಂದು ಹಳ್ಳಿಯೊಂದರಲ್ಲಿ ದೇಶದ ಯಾವ ಭಾಗದಲ್ಲಿಯೂ ಬೀಳದಷ್ಟು ಮಳೆಯಾಗುತ್ತದೆ. ಆ ಮಳೆಯ ಹಳ್ಳಿಯೇ ಮೌಸಿನ್ ರಾಮ್. ಹೌದು, ಮೇಘಾಲಯದ ಮಂಜಿನಿಂದ ಆವೃತವಾದ ಹಾಗೂ ಖಾಸಿ ಬೆಟ್ಟಗಳ ನಡುವೆ ಇರುವ ಮೌಸಿನ್ ರಾಮ್ ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಲ್ಲಿಯೇ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಜತೆಗೆ ಪ್ರಪಂಚದ ಅತ್ಯಂತ ತೇವಯುತ ಪ್ರದೇಶ ಎಂದು ಗುರುತಿಸಿಕೊಂಡಿದೆ. ಇಸ್ರೇಲ್ ಪ್ರವಾಸ ಕಥನ: ಅಲ್ಲಿ ಅಲ್ಲಾ ಇದ್ದಾನೆ, ಯೇಸು ಇದ್ದಾನೆ. . .ಮಳೆ, ಭೂಕುಸಿತ ಎನ್ನುವ ಭಯ ಬೇಡ; ಈ ಜಾಗಗಳಿಗೆ ಆರಾಮವಾಗಿ ಪ್ರವಾಸ ಹೋಗಬಹುದುಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನಈ ಹಳ್ಳಿ ಮಳೆಗಾಲದ ವೇಳೆ ಭೂಮಿಯ ಮೇಲಿನ ಸ್ವರ್ಗದಂತೆ ಭಾಸವಾಗುತ್ತದೆ. ಭಾರತದ ಮಾನ್ಸೂನ್ ರಾಜಧಾನಿ ಎಂತಲೂ ಕರೆಯುವ ಈ ಸ್ಥಳದ ವಿಶೇಷ ಹಾಗೂ ಇಲ್ಲಿಗೆ ಪ್ರವಾಸ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳ ತಪ್ಪಲಿನಲ್ಲಿ ಮೌಸಿನ್ ರಾಮ್ ಇದೆ. ಬಂಗಾಳ ಕೊಲ್ಲಿಯಿಂದ ಬರುವ ತೇವಾಂಶ ಭರಿತ ಮಾನ್ಸೂನ್ ಮಾರುತಗಳು ಇಲ್ಲಿ ಅಧಿಕ ಮಳೆ ಬೀಳಲು ಕೊಡುಗೆ ನೀಡುತ್ತವೆ. ಜೂನ್ ಹಾಗೂ ಸೆಪ್ಟೆಂಬರ್ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಇಲ್ಲಿ ಸುರಿಯುತ್ತದೆ. ಚಿರಾಪುಂಜಿಮೌಸಿನ್ ರಾಮ್ನಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿ ಚಿರಾಪುಂಜಿ ಇದೆ. ಚಿರಾಪುಂಜಿಯು ಈ ಹಿಂದೆ ಅತ್ಯಂತ ತೇವವಾದ ಅಥವಾ ಮಳೆ ಬೀಳುವ ಸ್ಥಳವೆಂದು ಗುರುತಿಸಲ್ಪಟ್ಟಿತ್ತು. ಇಂದು ಮೌಸಿನ್ ರಾಮ್ ಅತ್ಯಧಿಕ ವಾರ್ಷಿಕ ಮಳೆಯನ್ನು ಪಡೆದಯುವ ಪ್ರದೇಶವಾಗಿದೆ.ಈ ಎರಡು ತಾಣಗಳು ಮೇಘಾಲಯದ ಅತ್ಯಂತ ಜನಪ್ರಿಯವಾದ ತಾಣಗಳಾಗಿವೆ. ಇಲ್ಲಿನ ಮನಮೋಹಕವಾದ ಜಲಪಾತಗಳು, ಗುಹೆಗಳು ಮತ್ತು ಮಂಜಿನಿಂದ ಆವೃತವಾದ ಕಣಿವೆಗಳಿದ್ದು, ಏಕಾಂತದಲ್ಲಿ ಕಾಲ ಕಳೆಯಲು ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.ಮೌಸಿನ್ ರಾಮ್ನ ಪ್ರಮುಖ ತಾಣಗಳುಮೌಜಿಂಬುಯಿನ್ ಗುಹೆಯಲ್ಲಿ ಸುಣ್ಣದ ಕಲ್ಲಿನಿಂದ ನಿರ್ಮಾಣವಾದ ಶಿವಲಿಂಗದ ಆಕಾರದಲ್ಲಿರುವ ಸ್ಟಾಲಗ್ಮೈಟ್ ರಚನೆಯಿದೆ. ಖ್ರೆಂಗ್ ಖ್ರೆಂಗ್ ವ್ಯೂ ಪಾಯಿಂಟ್ ನೋಡಬಹುದು. ಚಿರಾಪುಂಜಿ ಬಳಿಯ ಸೆವೆನ್ ಸಿಸ್ಟರ್ಸ್ ಜಲಪಾತ, ಖಾಸಿ ಬೆಟ್ಟಗಳು ಹಾಗೂ ಸೇತುವೆಗಳು, ಮಂಜಿನಿಂದ ಆವೃತವಾದ ಕಣಿವೆಯ ಜೊತೆಗೆ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಗಳನ್ನು ನೋಡಬಹುದು.ಮೌಸಿನ್ ರಾಮ್ಗೆ ಪ್ರವಾಸ ಹೋಗಲು ಜೂನ್ನಿಂದ ಸೆಪ್ಟೆಂಬರ್ ನಡುವಿನ ಕಾಲ ಉತ್ತಮವಾಗಿದೆ. ಈ ಅವಧಿಯಲ್ಲಿ ಈ ಗ್ರಾಮವು ಹೆಚ್ಚಿನ ಮಳೆಯನ್ನು ಪಡೆದುಕೊಳ್ಳುತ್ತದೆ. ತಿಳಿಯಾದ ನೀಲಿ ಆಕಾಶ ಸವಿಯಲು ಇಷ್ಟ ಪಡುವವರು ಅಕ್ಟೋಬರ್ನಿಂದ ಫೆಬ್ರುವರಿ ನಡುವೆ ಭೇಟಿ ನೀಡಬಹುದು. ಮೌಸಿನ್ ರಾಮ್ಗೆ ತಲುಪುವುದು ಹೇಗೆ?ಶಿಲ್ಲಾಂಗ್ ವಿಮಾನ ನಿಲ್ದಾಣದಿಂದ ಮೌಸಿನ್ ರಾಮ್ ಸುಮಾರು 60 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು. ರೈಲಿನ ಮೂಲಕ ಪ್ರಯಾಣಿಸುವವರು ಗುವಾಹಟಿ ರೈಲು ನಿಲ್ದಾಣದಿಂದ ಬಸ್ ಮೂಲಕ ತಲುಪಬಹುದು.