ಬರ ಪರಿಶೀಲನೆ ಮಧ್ಯೆ ಕಾಲಭೈರವನ ದರ್ಶನ ಪಡೆದ ಸಿಎಂ
ಚಿತ್ರದುರ್ಗ: ತೀವ್ರ ಬರದ ಛಾಯೆ ಆವರಿಸಿರುವ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಭವರೋಗವೈದ್ಯ ವದ್ದಿಕೆರೆಯ ಶ್ರೀ ಕಾಲಭೈರವೇಶ್ವರಸ್ವಾಮಿ ಯಾನೆ ಸಿದ್ದೇಶ್ವರನ (Siddeshwara Temple) ದರ್ಶನ ಪಡೆದರು. ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಪಾಂಡುರಂಗ ರೆಡ್ಡಿ ಎಂಬ ರೈತನ ಜಮೀನಿಗೆ ಭೇಟಿ ನೀಡಿದ್ದ ಸಿಎಂ, ಮಳೆಯಿಲ

ಚಿತ್ರದುರ್ಗ: ತೀವ್ರ ಬರದ ಛಾಯೆ ಆವರಿಸಿರುವ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಭವರೋಗವೈದ್ಯ ವದ್ದಿಕೆರೆಯ ಶ್ರೀ ಕಾಲಭೈರವೇಶ್ವರಸ್ವಾಮಿ ಯಾನೆ ಸಿದ್ದೇಶ್ವರನ (Siddeshwara Temple) ದರ್ಶನ ಪಡೆದರು. ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಪಾಂಡುರಂಗ ರೆಡ್ಡಿ ಎಂಬ ರೈತನ ಜಮೀನಿಗೆ ಭೇಟಿ ನೀಡಿದ್ದ ಸಿಎಂ, ಮಳೆಯಿಲ್ಲದೇ ಹೂವಾಗುವ ಮುನ್ನವೇ ಬಾಡಿ ಬೆಂಡಾಗಿದ್ದ ಸೂರ್ಯಕಾಂತಿ ಬೆಳೆ ವೀಕ್ಷಿಸಿದರು. ಈ ವೇಳೆ ಮಾಜಿ ಶಾಸಕಿ ಪೂರ್ಣಿಮಾ ಕೂಡ ಇದ್ದರು. ಸಿದ್ದೇಶ್ವರ ಸ್ವಾಮಿಯ ಪವಾಡ ಹಾಗೂ ಬತ್ತದ ಬಾವಿಯ ಬಗ್ಗೆ ಸಿಎಂಗೆ ತಿಳಿಸಿದರು. ಅಲ್ಲದೇ, ಈ ಐತಿಹಾಸಿಕ ಹಿನ್ನೆಲೆಯ ಸಿದ್ದೇಶ್ವರ ಸ್ವಾಮಿಯ ದೇಗುಲ ಜೀರ್ಣೋದ್ಧಾರ ಮಾಡುವಂತೆ ಮನವಿ ಸಲ್ಲಿಸಿದರು. ಇದನ್ನೂ ಓದಿ: 3 ತಿಂಗಳು ಆದ ಮೇಲೆ ಈ ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎದ್ದಿದೆ: ಪ್ರಿಯಾಂಕ್ ಖರ್ಗೆ ಈ ಹಿಂದೆ ಸಚಿವರಾಗಿದ್ದ ಡಿ.ಸುಧಾಕರ ಕೂಡ ಈ ದೇಗುಲ ಜೀರ್ಣೋದ್ಧಾರಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ಅಲ್ಲದೇ, 25 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಆದರೂ, ಹಲವು ವರ್ಷಗಳಿಂದ ಈ ದೇಗುಲದ ಜೀರ್ಣೋದ್ಧಾರ ನೆನೆಗುದಿಗೆ ಬಿದ್ದಿದೆ. ಹೀಗಾಗಿ, ದೇಗುಲ ಶಿಥಿಲಾವಸ್ಥೆಗೆ ತಲುಪಿದೆ ಎಂದು ಸಿಎಂಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿರುವ ಸಿಎಂ, ಕೂಡಲೇ ಕಡತವನ್ನು ಮಂಡಿಸುವಂತೆ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಬರ ಪರಿಶೀಲನೆಯನ್ನು ಮುಂದುವರೆಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಬರದಿಂದ ಕಂಗಾಲಾಗಿರುವ ರೈತ ಪಾಂಡುರಂಗರೆಡ್ಡಿ ಅವರ ಜಮೀನಿನಲ್ಲಿ ಸೂರ್ಯಕಾಂತಿ ಹೂವು ಬಿಡದೇ ಬಾಡಿರುವುದನ್ನು ಪರಿಶೀಲಿಸಿದರು. ಈ ವೇಳೆ ರೈತರಿಗೆ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ಸಿಎಂಗೆ ರೈತ ಪಾಡುರಂಗರೆಡ್ಡಿ ಮನವಿ ಮಾಡಿದರು. ಇದನ್ನೂ ಓದಿ: ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವು: ಸಿದ್ದರಾಮಯ್ಯ ಹಿರಿಯೂರು ನಗರದಿಂದ ಆರಂಭವಾದ ಸಿಎಂ ಬರ ಪರಿಶೀಲನೆ, ಯರಬಳ್ಳಿ, ವದ್ದಿಕೆರೆ, ಐಮಂಗಲ ಹಾಗೂ ಮರಡಿಹಳ್ಳಿ ಗ್ರಾಮಗಳಲ್ಲಿ ನಡೆಯಬೇಕಿತ್ತು. ಆದರೆ, ಬೆಂಗಳೂರು ವಿಭಾಗಮಟ್ಟದ ಬರ ಕುರಿತ ಸಭೆಗೆ ತಡವಾದ ಹಿನ್ನಲೆಯಲ್ಲಿ ಬರ ಪರಿಶೀಲನೆಯನ್ನು ಕೇವಲ ಒಂದೇ ಜಮೀನಿಗೆ ಸೀಮಿತಗೊಳಿಸಿ ಅರ್ಧಗಂಟೆಯಲ್ಲಿ ಬರ ಪರಿಶೀಲನೆ ಮಕ್ತಾಯಗೊಳಿಸಿದರು. ತರಾತುರಿಯಲ್ಲಿ ಚಿತ್ರದುರ್ಗದ ಅನುಭವ ಮಂಟಪದತ್ತ ಸಿಎಂ ಹೆಜ್ಜೆ ಹಾಕಿದರು. ಈ ವೇಳೆ ಡಿಸಿಎಂ ಪರಮೇಶ್ವರ್, ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕ ಟಿ.ರಘುಮೂರ್ತಿ ಇದ್ದರು.