ಕ್ಯಾನ್ಸರ್ ಪೀಡಿತ ತಾಯಿಗಾಗಿ ತಾರಸಿಯಲ್ಲಿ ದಾಳಿಂಬೆ ತೋಟ: ತಿನ್ನಲು ಅಮ್ಮ ಇರಲಿಲ್ಲ
ಅಮ್ಮನಿಗೆ ಕ್ಯಾನ್ಸರ್ ಆಗಿತ್ತು.. ಚಿಕಿತ್ಸೆ ನಡೆಯುತ್ತಿದ್ದಾಗ ದಾಳಿಂಬೆ ಕೊಡುವಂತೆ ವೈದ್ಯರು ಸೂಚಿಸಿದ್ದರು. ಮಾರುಕಟ್ಟೆಯಲ್ಲೆಲ್ಲಾ ಹುಡುಕಿದರೂ ರಾಸಾಯನಿಕ ಇಲ್ಲದ, ಕಡಿಮೆ ಬೆಲೆಗೆ ಹಣ್ಣು ಸಿಗಲಿಲ್ಲ.. ಇದರಿಂದ ನಿರಾಶನಾಗದ ಮಗ ಮನೆಯ ತಾರಸಿ ಮೇಲೆಯೇ ರಾಸಾಯನಿಕ ಹಾಕದೇ ದಾಳಿಂಬೆ ಬೆಳೆಯೋಕೆ ಶುರುಮಾಡಿದ.. ಆದರೆ, ಸಮಯದ ಆಟವೇ ಬೇರೆಯಾಗಿತ್ತು.. ಆ ದಾಳಿಂಬೆ ಹಣ್ಣುಗಳನ್ಬು

ಅಮ್ಮನಿಗೆ ಕ್ಯಾನ್ಸರ್ ಆಗಿತ್ತು.. ಚಿಕಿತ್ಸೆ ನಡೆಯುತ್ತಿದ್ದಾಗ ದಾಳಿಂಬೆ ಕೊಡುವಂತೆ ವೈದ್ಯರು ಸೂಚಿಸಿದ್ದರು. ಮಾರುಕಟ್ಟೆಯಲ್ಲೆಲ್ಲಾ ಹುಡುಕಿದರೂ ರಾಸಾಯನಿಕ ಇಲ್ಲದ, ಕಡಿಮೆ ಬೆಲೆಗೆ ಹಣ್ಣು ಸಿಗಲಿಲ್ಲ.. ಇದರಿಂದ ನಿರಾಶನಾಗದ ಮಗ ಮನೆಯ ತಾರಸಿ ಮೇಲೆಯೇ ರಾಸಾಯನಿಕ ಹಾಕದೇ ದಾಳಿಂಬೆ ಬೆಳೆಯೋಕೆ ಶುರುಮಾಡಿದ.. ಆದರೆ, ಸಮಯದ ಆಟವೇ ಬೇರೆಯಾಗಿತ್ತು.. ಆ ದಾಳಿಂಬೆ ಹಣ್ಣುಗಳನ್ಬು ತಿನ್ನಲು ಅಮ್ಮನೇ ಉಳಿಯಲಿಲ್ಲ.ತಾಯಿ ಮೃತಪಟ್ಟ ಬಳಿಕವೂ ನಿಲ್ಲಲಿಲ್ಲ ಕಾಯಕ2025ರಲ್ಲಿ ತಾಯಿ ಇಹಲೋಕ ತ್ಯಜಿಸಿದರು. ಆದರೆ, ತನ್ನ ಕಾಯಕವನ್ನು ನಿಲ್ಲಿಸದ ಮಗ ಅಮ್ಮನ ನೆನಪಿನಲ್ಲೇ ಜನರಿಗೆ ಕೆಮಿಕಲ್ ರಹಿತ ಹಣ್ಣು ತಿನ್ನಿಸಲು ನಿರ್ಧರಿಸಿದ. ತಾರಸಿ ತೋಟವನ್ನು ವಿಸ್ತರಿಸಿದ ಆತ 26 ತಳಿಯ 60 ಗಿಡಗಳನ್ನು ನೆಟ್ಟು ಯಶಸ್ವಿಯಾಗಿ ಬೆಳೆಸಿದ್ದಾನೆ. ಈತನ ತಾರಸಿಯಲ್ಲಿ ಬೆಳೆದ ಹಣ್ಣುಗಳಿಗೆ ಬೇಡಿಕೆಯೂ ಹೆಚ್ಚಿದೆ. ಭಾರತ ಮೂಲದ ಸೂಪರ್ ಭಗ್ವಾ, ಮೃದುಲಾ ಮತ್ತು ಗುಜರಾತ್ ಕೆಲವು ತಳಿಗಳ ದಾಳಿಂಬೆ ಗಿಡಗಳು ಇಲ್ಲಿವೆ ಎಂದು ಬಿಎಸ್ಎಸ್ ನ್ಯೂಸ್ ವರದಿ ಮಾಡಿದೆ.ಅಂದಹಾಗೆ, ಈ ಯಶಸ್ವಿ ಕೃಷಿಕ ಅಲಮಿನ್ ಬಾಂಗ್ಲಾದೇಶದ ಟಂಗೈಲ್ನವರು. ಕ್ಯಾನ್ಸರ್ ಹೆಮ್ಮಾರಿಯಿಂದ ಮೃತಪಟ್ಟ ತಾಯಿ ಲವ್ಲಿ ಬೇಗಂ ನೆನಪಿನಲ್ಲಿ ಈ ತಾರಸಿ ತೋಟ ಮಾಡಿದ್ದಾರೆ. ವರ್ಷಕ್ಕೆರಡು ಬೆಳೆಥಾಯ್ಲೆಂಡಿನ ಥಾಯ್ ದಾಳಿಂಬೆ, ಆಸ್ಟ್ರೇಲಿಯಾದ ಬಿಗ್ ಥಾಯ್, ರಿಮೊನ್ ಹಾಗೂ ಮೆಕ್ಸಿಕೊ, ಪಾಕಿಸ್ತಾನದ ದಾಳಿಂಬೆ ತಳಿಗಳೂ ಈತನ ತೋಟದಲ್ಲಿವೆ. ವರ್ಷಕ್ಕೆರಡು ಬಾರಿ ಮಳೆಗಾಲ ಮತ್ತು ಚಳಿಗಾಲದಲ್ಲಿ ದಾಳಿಂಬೆ ಫಸಲು ಬರುಯತ್ತಿದೆ. ಅಲಮಿನ್ ಅವರ ಈ ತಾರಸಿ ತೋಟವು ಬಾಂಗ್ಲಾದೇಶದಲ್ಲಿ ನಗರ ಕೃಷಿಗೆ ಮಾದರಿಯಾಗಿದೆ. ಅಲ್ಲದೇ, ತಾಜಾ ಹಣ್ಣು ಮತ್ತು ಕಸಿ ಮಾಡಿದ ಗಿಡಗಳನ್ನು ಮಾರಾಟ ಮಾಡುವ ಮೂಲಕ ಅಲಮಿನ್ ಅವರು ಖರ್ಚು ಕಳೆದು ವಾರ್ಷಿಕವಾಗಿ 10 ಲಕ್ಷ ತಕ(ಬಾಂಗ್ಲಾದೇಶ ಕರೆನ್ಸಿ) ಆದಾಯ ಗಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಪಟಖಾಗುರಿಯ ಹಳ್ಳಿಯಲ್ಲಿರುವ ಅವರ ಅವರ ಮನೆಯ ಬಳಿ ತೆರಳಿದರೆ ಕೆಂಪು ಬಣ್ಣದ ಹಣ್ಣುಗಳಿಂದ ತುಂಬಿದ ಜೋತುಬಿದ್ದ ರೆಂಬೆಗಳು, ಹಚ್ಚ ಹಸಿರಿನ ಗಿಡಗಳು, ಪ್ರತಿಯೊಂದರಲ್ಲೂ 25 ರಿಂದ 30 ಹಣ್ಣುಗಳು ಕಣ್ಣಿಗೆ ಬೀಳುತ್ತವೆ.ಯೂಟ್ಯೂಬ್ ವಿಡಿಯೊದಿಂದ ಉಪಾಯ2023ರ ಕಠಿಣ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ತಾಯಿಗೆ ಕ್ಯಾನ್ಸರ್ ಆಗಿದ್ದರಿಂದ ದಾಳಿಂಬೆ ನೀಡಲು ವೈದ್ಯರು ಸೀಚಿಸಿದ್ದರು. ಕೆ.ಜಿಗೆ 500 ರಿಂದ 600 ತಕ ಇದ್ದ ಹಣ್ಣನ್ನು ಖರೀದಿಸಲು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ ನನಗೆ ಶಕ್ತಿ ಇರಲಿಲ್ಲ. ಸಾಲ ಮಾಡಿ ತಂದರೂ ಅವು ರಾಸಾಯನಿಕ ಇರುವ ಹಣ್ಣುಗಳೆಂದು ಗೊತ್ತಾಯಿತು. ಬಳಿಕ ತಾನೇ ದಾಳಿಂಬೆ ಬೆಳೆಯುವ ಕೆಲಸಕ್ಕೆ ಹೈಹಾಕಿದೆ. ಮೊದಲಿಗೆ ಹಿತ್ತಲಲ್ಲಿ ದಾಳಿಂಬೆ ಗಿಡಗಳನ್ನು ನೆಟ್ಟೆ. ಬಳಿಕ, ಯೂಟ್ಯೂಬ್ ವಿಡಿಯೊ ನೋಡಿ ತಾರಸಿಯಲ್ಲಿ ಬೆಳೆಯುವ ಉಪಾಯ ಹೊಳೆಯಿತು ಎಂದಿದ್ದಾರೆ.ಮೊದಲಿಗೆ ಕೆಲ ಸ್ಥಳೀಯ ತಳಿಯ ಗಿಡಗಳನ್ನು ಪ್ಲಾಸ್ಟಿಕ್ ಡ್ರಮ್ನಲ್ಲಿ ಬೆಳೆದ ಅವರು ಬಳಿಕ ತರಹೇವಾತಿ ತಳಿಯ ದಾಳಿಂಬೆ ಗಿಡಗಳನ್ನು ಬೆಳೆಸಿ ಯಶಸ್ಸು ಕಂಡಿದ್ದಾರೆ. ನಿರಂತರ ಆರೈಕೆ ಮೂಲಕ ಉತ್ತಮ ಫಸಲು ಪಡೆಯುತ್ತಿದ್ದಾರೆ. ಮನೆಯ ತಾರಸಿ ಮತ್ತು ಸುತ್ತಮುತ್ತ 2000 ಕಸಿ ಗಿಡಗಳನ್ನು ಅಭಿವೃದ್ಧಿ ಮಾಡಿರುವ ಅವರು, ಗಿಡವೊಂದಕ್ಕೆ 200 ತಕದಿಂದ 2000 ತಕವರೆಗೆ ಮಾರಾಟ ಮಾಡುತ್ತಿದ್ದಾರೆ. ದಾಳಿಂಬೆ ಜೊತೆಗೆ ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣಿನ ಗಿಡಗಳನ್ನೂ ಪೋಷಿಸಿದ್ದಾರೆ.ಅಮ್ಮನ ಆರೈಕೆಗಾಗಿ ಕೆಲಸ ಬಿಟ್ಟೆ. ಆದರೆ, ಕೆಲವೇ ದಿನಗಳಲ್ಲಿ ಅವರು ಮೃತಪಟ್ಟರು. ಅವರ ಸಾವಿನ ಬಳಿಕವೂ ಧೃತಿಗೆಡದೇ ಕೆಲಸ ಮುಂದುವರಿಸಿದೆ ಎನ್ನುತ್ತಾರೆ ಅಲಮಿನ್.ಬಾಂಗ್ಲಾದೇಶದ ಕೃಷಿ ಇಲಾಖೆಯ ಅಧಿಕಾರಿಗಳು ಅಲಮಿನ್ ಕೆಲಸ ಮೆಚ್ಚಿಕೊಂಡಿದ್ದು, ಅವರು ಅಭಿವೃದ್ಧಿಪಡಿಸಿದ ಕಸಿಗಿಡಗಳು ದೇಶದ ವಿವಿಧೆಡೆಗೆ ಸರಬರಾಜಾಗುತ್ತಿವೆ. ಮಳೆ ಕೊರತೆಗೆ ಕಂಗಾಲಾದ ರೈತರು: ದಾಳಿಂಬೆ, ಬಾಳೆ ತೆರವುಗೊಳಿಸುತ್ತಿರುವ ಬೆಳೆಗಾರಮಳೆ ಕೊರತೆಗೆ ಕಂಗಾಲಾದ ರೈತರು: ದಾಳಿಂಬೆ, ಬಾಳೆ ತೆರವುಗೊಳಿಸುತ್ತಿರುವ ಬೆಳೆಗಾರ