ಕೊನೆಗೂ ಸರ್ಕಾರ ತಲೆಬಾಗಲೇಬೇಕಾಯಿತು – ನೀಟ್ ಪರೀಕ್ಷೆಯಲ್ಲಿ ಸರ್ಕಾರ ಅಗತ್ಯ ಬದಲಾವಣೆ ತರಬೇಕು: ಕೇಜ್ರಿವಾಲ್ ಒತ್ತಾಯ
ನವದೆಹಲಿ: ಕೊನೆಗೂ ಸರ್ಕಾರ ತಲೆಬಾಗಲೇಬೇಕಾಯಿತು. ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು. ಇನ್ಮುಂದೆ ನೀಟ್ ಪರೀಕ್ಷೆಯಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ (X) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವ

ನವದೆಹಲಿ: ಕೊನೆಗೂ ಸರ್ಕಾರ ತಲೆಬಾಗಲೇಬೇಕಾಯಿತು. ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು. ಇನ್ಮುಂದೆ ನೀಟ್ ಪರೀಕ್ಷೆಯಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ (X) ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸ್ವಾಗತಿಸಿದ್ದಾರೆ. ದೇಶದ ಜನತೆ, ಅದರಲ್ಲೂ ವಿಶೇಷವಾಗಿ ಯುವಕರು ಮತ್ತು Gen Z ಯುವಪೀಳಿಗೆಯ ಹೋರಾಟದ ಮುಂದೆ ಕೇಂದ್ರ ಸರ್ಕಾರ ತಲೆಬಾಗಿಬೇಕಾದ ಪರಿಸ್ಥಿತಿ ಎದುರಾಯಿತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪ್ರಜಾಪ್ರಭುತ್ವದ ಗೆಲುವು. ಇದರಿಂದ ಸಂವಿಧಾನದ ಮೌಲ್ಯಗಳ ಮೇಲೆ ಜನರ ನಂಬಿಕೆ ಗಟ್ಟಿಯಾಗುತ್ತದೆ. ಆದರೂ ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳನ್ನು ಸಂಪೂರ್ಣವಾಗಿ ತಡೆಯಲು `ನೀಟ್’ ಪರೀಕ್ಷಾ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 2018ರಲ್ಲಿ ಎಂಜೆ ಅಕ್ಬರ್ ಬಳಿಕ ಇದೇ ಮೊದಲು – ಪ್ರತಿಭಟನೆ ಬಿಸಿಗೆ ಕೇಂದ್ರ ಸಚಿವರ ರಾಜೀನಾಮೆ Congratulations to the entire country on Dharmendra Pradhan’s resignation. Big win for democracy. pic.twitter.com/whzjhwSjOs — Arvind Kejriwal (@ArvindKejriwal) July 25, 2026 ಯುವಕರು ಮತ್ತು Gen Z ಯುವಪೀಳಿಗೆಗೆ ಅಭಿನಂದನೆಗಳು. ನಿಮ್ಮ ಪ್ರಯತ್ನದಿಂದ ಧರ್ಮೇಂದ್ರ ಪ್ರಧಾನ್ ಈಗ ರಾಜೀನಾಮೆ ನೀಡಿದ್ದಾರೆ. ಜನರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದಂತಾಗಿ, ಸರ್ಕಾರದ ಮುಂದೆ ಬೇಡುವ ಪರಿಸ್ಥಿತಿ ಬಂದಿತ್ತು. ಆದರೆ ಕೊನೆಗೂ ಸರ್ಕಾರ ತಲೆಬಾಗಿಬೇಕಾಯಿತು. ದೇಶದಲ್ಲಿ ಮತ್ತೆ ಪರೀಕ್ಷೆಗಳು ಸೋರಿಕೆಯಾಗದಂತೆ ನೀಟ್ ವ್ಯವಸ್ಥೆಯಲ್ಲಿ ಸರ್ಕಾರ ಅಗತ್ಯ ಬದಲಾವಣೆಗಳನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಎಎಪಿ ಹಿರಿಯ ನಾಯಕ ಗೋಪಾಲ್ ರೈ ಕೂಡ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿದ್ದು, ಬಿಹಾರ ಮತ್ತು ಗುಜರಾತ್ನಲ್ಲಿ ಬಂಧಿಸಲ್ಪಟ್ಟಿರುವ ಎಲ್ಲ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನೀಟ್ ಪತ್ರಿಕೆ ಸೋರಿಕೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆ ಪ್ರಧಾನ್ ರಾಜೀನಾಮೆ ನೀಡಿದ್ದು, ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ತಮಗೆ ಬೇಸರ ತಂದಿದೆ ಎಂದಿದ್ದಾರೆ.ಇದನ್ನೂ ಓದಿ: ‘ಇನ್ನೂ ಹೋರಾಟ ಮುಗಿದಿಲ್ಲ’ – ಪ್ರಧಾನ್ ರಾಜೀನಾಮೆ ಬಳಿಕ ಇನ್ನೂ 3 ಬೇಡಿಕೆ ಈಡೇರಿಸುವಂತೆ ಸಿಜೆಪಿ ಒತ್ತಾಯ