ವೈವಾಹಿಕ ವಿವಾದ | ಅತ್ತೆ–ಮಾವಂದಿರನ್ನು ಎಳೆದು ತರುವ ಪ್ರವೃತ್ತಿ; ಕೋರ್ಟ್ ಕಳವಳ
ನವದೆಹಲಿ: ವೈವಾಹಿಕ ಕಲಹ ಪ್ರಕರಣದಲ್ಲಿ ಅತ್ತೆ–ಮಾವಂದಿರನ್ನು ಎಳೆದು ತರುತ್ತಿರುವ, ಮಕ್ಕಳನ್ನು ಪರಸ್ಪರ ನಿಂದಿಸಲು ಬಳಸಿಕೊಳ್ಳುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದಾಖಲೆಗಳಲ್ಲಿರುವ ವಿಷಯಗಳನ್ನು ಪರಿಶೀಲಿಸದೆ, ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್ ನಡೆಯನ್ನು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲ ಹಾಗೂ ಕೆ.ವಿನೋದ್

ನವದೆಹಲಿ: ವೈವಾಹಿಕ ಕಲಹ ಪ್ರಕರಣದಲ್ಲಿ ಅತ್ತೆ–ಮಾವಂದಿರನ್ನು ಎಳೆದು ತರುತ್ತಿರುವ, ಮಕ್ಕಳನ್ನು ಪರಸ್ಪರ ನಿಂದಿಸಲು ಬಳಸಿಕೊಳ್ಳುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದಾಖಲೆಗಳಲ್ಲಿರುವ ವಿಷಯಗಳನ್ನು ಪರಿಶೀಲಿಸದೆ, ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್ ನಡೆಯನ್ನು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲ ಹಾಗೂ ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು ಟೀಕಿಸಿತು.‘ದಾಂಪತ್ಯದಲ್ಲಿ ಉಂಟಾಗುವ ಕಲಹದಲ್ಲಿ ಅತ್ತೆ–ಮಾವಂದಿರನ್ನು ಎಳೆದು ತರುವುದು, ಮಕ್ಕಳನ್ನು ಪರಸ್ಪರ ದೂಷಣೆಗೆ ಬಳಸಿಕೊಳ್ಳುವುದು ವಾಡಿಕೆಯಲ್ಲ. ವಿಚ್ಛೇದಿತ ತಾಯಿಯೇ, ತಂದೆಯ ಅತ್ತಿಗೆಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವುದು ನೋಡಿ ಆಘಾತಕ್ಕೊಳಗಾಗಿದ್ದೇವೆ’ ಎಂದು ಜುಲೈ 23ರಂದು ನೀಡಿದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ‘ವಿಚ್ಛೇದಿತ ತಂದೆಯೂ ಬಾಲಕನ ಅವಳಿ ಸಹೋದರಿಯರ ವಿರುದ್ಧ ಗಂಭೀರ ಆರೋಪ ಹೊರಿಸಿ, ಎಫ್ಐಆರ್ ದಾಖಲಿಸಿದ್ದಾರೆ ಎಂದು ನ್ಯಾಯಾಲಯವು ತಿಳಿಸಿದೆ.‘ಎಲ್ಲ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠವು, ತಂದೆಯ ಅತ್ತೆಯ ವಿರುದ್ಧ ಪುಣೆ ಜಿಲ್ಲೆಯ ಖಾಡ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪೋಕ್ಸೊ ಕಾಯ್ದೆಯಡಿಯ ಪ್ರಕರಣವನ್ನು ರದ್ದುಪಡಿಸಿದೆ. ಎಫ್ಐಆರ್ ಪ್ರಕಾರ, ಮುಂದಿನ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.