ಬೈರಸಂದ್ರದಲ್ಲಿ ಗಂಗರ ಕಾಲದ ಹುಲಿಬೇಟೆ ವೀರಗಲ್ಲು ಪತ್ತೆ – ಕ್ರಿ.ಶ 850ರ ಕಾಲಮಾನದ ಶಾಸನ ರಕ್ಷಣೆಗೆ ಒತ್ತಾಯ
ನೆಲಮಂಗಲ: ಗಂಗರ ಆಳ್ವಿಕೆಯ (Ganga Era) ಕಾಲಘಟ್ಟವಾದ ಕ್ರಿ.ಶ 850ರ ಸುಮಾರಿಗೆ ಸೇರಿರುವ ಅಪರೂಪದ ಶಾಸನ ಸಹಿತ ಹುಲಿಬೇಟೆ ವೀರಗಲ್ಲು ಬೈರಸಂದ್ರ ಗ್ರಾಮದಲ್ಲಿ ಪತ್ತೆಯಾಗಿದೆ. ತಾಲೂಕಿನ ಬೈರಸಂದ್ರ ಗ್ರಾಮದ ರಂಗಸ್ವಾಮಯ್ಯನವರ ಜಮೀನಿನಲ್ಲಿ ಉಳುಮೆ ಮಾಡುವಾಗ ವೀರಗಲ್ಲು ಸಿಕ್ಕಿದೆ, ತಕ್ಷಣ ಅದನ್ನು ರಕ್ಷಣೆ ಮಾಡಿ, ಪತ್ರಕರ್ತರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಅವರಿಂದ ಮಾ

ನೆಲಮಂಗಲ: ಗಂಗರ ಆಳ್ವಿಕೆಯ (Ganga Era) ಕಾಲಘಟ್ಟವಾದ ಕ್ರಿ.ಶ 850ರ ಸುಮಾರಿಗೆ ಸೇರಿರುವ ಅಪರೂಪದ ಶಾಸನ ಸಹಿತ ಹುಲಿಬೇಟೆ ವೀರಗಲ್ಲು ಬೈರಸಂದ್ರ ಗ್ರಾಮದಲ್ಲಿ ಪತ್ತೆಯಾಗಿದೆ. ತಾಲೂಕಿನ ಬೈರಸಂದ್ರ ಗ್ರಾಮದ ರಂಗಸ್ವಾಮಯ್ಯನವರ ಜಮೀನಿನಲ್ಲಿ ಉಳುಮೆ ಮಾಡುವಾಗ ವೀರಗಲ್ಲು ಸಿಕ್ಕಿದೆ, ತಕ್ಷಣ ಅದನ್ನು ರಕ್ಷಣೆ ಮಾಡಿ, ಪತ್ರಕರ್ತರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಅವರಿಂದ ಮಾಹಿತಿ ಪಡದ ಇತಿಹಾಸತಜ್ಞರಾದ ಗೋಪಾಲ್ರಾವ್ ಮಗ ಬಾಲಸುಬ್ರಹಣ್ಯ, ವೇದಾವತಿ ಹಾಗೂ ಕೆ.ಧನ್ಪಾಲ್, ನರೇಂದ್ರ ಅವರು, ತಕ್ಷಣ ಸ್ಥಳಕ್ಕೆ ಬಂದು ಹುಲಿಬೇಟೆ ವೀರಗಲ್ಲು ಎಂಬುದಾಗಿ ದೃಢಪಡಿಸಿದ್ದಾರೆ. ಕ್ರಿ.ಶ 850ರ ಕಾಲಘಟ್ಟಕ್ಕೆ ಸೇರುವ ಅಪರೂಪದ ಶಾಸನ ಸಹಿತ ವೀರಗಲ್ಲು ಎಂಬುದಾಗಿ ತಿಳಿಸಿದ್ದಾರೆ. ಈ ಶಾಸನವನ್ನು ಗೋಪಾಲ್ರಾವ್ ಕಿರಿಯ ಮಗ ಕಾರ್ತಿಕೇಯ, ಸೊಸೆ ಡಾ.ವೇದಾವತಿ, ಇತಿಹಾಸ ತಜ್ಞರಾದ ಪಿ.ವಿ ಕೃಷ್ಣಮೂರ್ತಿ, ಕೆ.ಆರ ನರಸಿಂಹನ್ ಓದಿ ತಿಳಿಸಿದ್ದಾರೆ. ಕನ್ನಡ ಶಾಸನದಲ್ಲಿ ಏನಿದೆ? ತ್ತಂಣೀಯರಟ್ಟಮ್ಮರೊಡೆಯನ ಮಗನಾದ ಸಿವಮರೆನಾದಿ ಎಂಬುವನು ಮಣ್ಣೆನಾಡಿನ ನಾಡಗೌಡನಾಗಿದ್ದ ಮಾರಮ್ಮನ್ ಎಂಬುವನ ಸೇವಕನಾಗಿದ್ದು ಸಿವಮರೆನಾದಿಯು ಹುಲಿಯೊಂದಿಗೆ ಹೋರಾಡುವ ಸಮಯದಲ್ಲಿ ವೀರಮರಣ ಹೊಂದಿದ್ದಾನೆ. ಇದನ್ನ ಗಂಗರ ಕಾಲದ ಕನ್ನಡದ ಅಕ್ಷರಗಳಲ್ಲಿ ಶಾಸನ ಬರೆಯಲಾಗಿದೆ. ಹುಲಿಯ ಚಿತ್ರ: ವೀರಕಲ್ಲಿನಲ್ಲಿ ಕನ್ನಡದ ಶಾಸನದ ಜೊತೆ ಹುಲಿಯೊಂದಿಗೆ ಸೆಣಸಾಡುತ್ತಿರುವ ವೀರನ ಚಿತ್ರವಿದ್ದು ಆತನ ಒಂದು ಕೈನಲ್ಲಿ ಹುಲಿ, ಮತ್ತೊಂದು ಕೈನಲ್ಲಿ ಕತ್ತಿಯನ್ನು ಹಿಡಿದಿದ್ದಾನೆ. ಆತ ವೀರಮರಣ ಹೊಂದಿದ ನಂತರ ದೇವಲೋಕದ ಅಪ್ಸರೆಯರು ಕರೆದುಕೊಂಡು ಹೋಗುವ ಚಿತ್ರವಿದೆ. ಗಂಗರು ಹೋರಾಟ ಮಾಡಿರುವ ಪ್ರಾಂತ್ಯಗಳಲ್ಲಿ ಶಾಸನ ಸಹಿತ ಪುರಾತನ ಹುಲಿಬೇಟೆ ವೀರಗಲ್ಲು ಇದಾಗಿದ್ದು ಇದನ್ನು ರಕ್ಷಣೆ ಮಾಡಲು ಗ್ರಾಮಸ್ಥರು, ಇತಿಹಾಸಕ್ತರು ಒತ್ತಾಯ ಮಾಡಿದ್ದಾರೆ. ಇಷ್ಟು ಹಳೆಯ ಇತಿಹಾಸವಿರುವುದು ನಮಗೆ ನೋಡಿ ಅಚ್ಚರಿಯಾಗಿದೆ. ಅಧಿಕಾರಿಗಳು ಇದನ್ನು ರಕ್ಷಣೆ ಮಾಡಬೇಕು ಎಂದು ರಂಗಸ್ವಾಮಯ್ಯ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.