ದೆಹಲಿ ನೀಟ್ ಪ್ರತಿಭಟನೆಯಲ್ಲಿದ್ದಾರಾ ಕ್ರಿಮಿನಲ್ಸ್? – ಅಪರಾಧ ಹಿನ್ನೆಲೆಯುಳ್ಳ 2,500 ಮಂದಿ ಭಾಗಿ
– ʻಜಿರಳೆʼಗಳ ದಾರಿ ತಪ್ಪಿಸುವ ಯತ್ನ ನಡೀತಾ? ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಅಕ್ರಮಗಳ (NEET Scam,) ವಿರುದ್ಧದ ಪ್ರತಿಭಟನೆ ದಾರಿ ತಪ್ಪಿಸುವ ಯತ್ನ ನಡೀತಾ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಪುರಾವೆ ಎನ್ನುವಂತೆ ಪೊಲೀಸರ ತನಿಖೆಯಲ್ಲಿ (Delhi Police Investigation) ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ. ಪ್ರತಿಭಟನೆಯಲ್ಲಿ ಪಾಲ್ಗೊ

– ʻಜಿರಳೆʼಗಳ ದಾರಿ ತಪ್ಪಿಸುವ ಯತ್ನ ನಡೀತಾ? ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಅಕ್ರಮಗಳ (NEET Scam,) ವಿರುದ್ಧದ ಪ್ರತಿಭಟನೆ ದಾರಿ ತಪ್ಪಿಸುವ ಯತ್ನ ನಡೀತಾ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಪುರಾವೆ ಎನ್ನುವಂತೆ ಪೊಲೀಸರ ತನಿಖೆಯಲ್ಲಿ (Delhi Police Investigation) ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 2,500 ಕ್ಕೂ ಹೆಚ್ಚು ಜನರನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ 2,500 ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಜುಲೈ 20ರ ಹಿಂಸಾಚಾರದ ನಂತರ ʻಸಂಸತ್ ಚಲೋʼ ಮೆರವಣಿಗೆ ವೇಳೆ ನಡೆದ ಹಿಂಸಾಚಾರದಲ್ಲಿ ಅಪರಾಧ ಹಿನ್ನೆಲೆ ಇರೋರು ಭಾಗಿಯಾಗಿರೋದು ತಿಳಿದುಬಂದಿದೆ. ಜಂತರ್ ಮಂತರ್ ಪ್ರತಿಭಟನಾ ಸ್ಥಳದ ಸುತ್ತಲಿನ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಈ ಕ್ರಿಮಿಗಳ ಚಲನವಲನ ಸೆರೆಯಾಗಿದೆ. ಕಳೆದ ಮೂರು ದಿನಗಳಲ್ಲಿ 2,500ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗುರುತು ಪತ್ತೆಯಾದವರ ಪೈಕಿ ಸಾಹಿಲ್ ಸೈಫಿ, ಮನೋಜ್ ಕುಮಾರ್, ರೂಬಲ್ ಸೇರಿದಂತೆ ಹಲವರ ವಿರುದ್ಧ ಆರೋಪಗಳಿವೆ. ಮುಖಚರ್ಯೆ ಗುರುತಿಸುವ ತಂತ್ರಜ್ಷಾನ ಬಳಸಿ ಪೊಲೀಸರಿಂದ ಪರಿಶೀಲನೆ ಮುಂದುವರಿದಿದೆ. ಪೊಲೀಸರನ್ನೇ ಗುರಿಯಾಗಿಸಿ ದಾಳಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಚಾಕು ಮತ್ತು ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದ ಬಗ್ಗೆ ಪೊಲೀಸರು ಆರೋಪಿಸಿದ್ರು. ಇದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷಿಯಾಗಿವೆ. ಪೊಲೀಸರನ್ನೇ ಗುರಿಯಾಗಿಸಿ ಕಿಡಿಗೇಡಿಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿ ದಂಗೆ ಎಬ್ಬಿಸಲು ಯತ್ನಿಸಿದ್ದಾರೆ. ಮಾಸ್ಕ್ ಧರಿಸಿ ಪೊಲೀಸ್ ಬ್ಯಾರಿಕೇಡ್ ತಳ್ಳಿ ರಂಪಾಟ ಮಾಡಿದ್ದಾರೆ. ಪ್ರತಿಭಟನೆಯ ಹಾದಿ ತಪ್ಪಿಸಲು ಯತ್ನಿಸಿರೋದಕ್ಕೆ ಸಿಸಿಟಿವಿ ದೃಶ್ಯಗಳು ಪುಷ್ಠಿಕೊಡುತ್ತಿವೆ.