ನನಗೆ ಟೈಪಾಯ್ಡ್ ಇದೆಯಾದರೂ ಪ್ರಧಾನ್ ರಾಜೀನಾಮೆಗಾಗಿ ಹೋರಾಟ ಮುಂದುವರಿಸುವೆ: ದೀಪ್ಕೆ
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸ್ಥಾಪಕ ಅಭಿಜಿತ್ ದೀಪ್ಕೆ ಟೈಪಾಯ್ಡ್ಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನನಗೆ ಟೈಫಾಯಿಡ್ ಇರುವುದು ದೃಢಪಟ್ಟಿದೆ, ಆದರೆ ಧರ್ಮೇಂದ್ರ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸ್ಥಾಪಕ ಅಭಿಜಿತ್ ದೀಪ್ಕೆ ಟೈಪಾಯ್ಡ್ಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನನಗೆ ಟೈಫಾಯಿಡ್ ಇರುವುದು ದೃಢಪಟ್ಟಿದೆ, ಆದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯುತ್ತದೆ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ, ‘ನಿಮಗೆಲ್ಲರಿಗೂ ತಿಳಿದಿರುವಂತೆ, ಕಳೆದ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿಯಿರಲಿಲ್ಲ. ಈಗ ರಕ್ತ ಪರೀಕ್ಷೆಯ ವರದಿಗಳು ಬಂದಿದ್ದು, ನನಗೆ ಟೈಪಾಯ್ಡ್ ಇರುವುದು ದೃಢಪಟ್ಟಿದೆ. ಚಿಕಿತ್ಸೆ ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಐವಿ (IV) ಡ್ರಿಪ್ಗಳನ್ನು ನೀಡಲಾಗುತ್ತಿದೆ. ದೇಶದಾದ್ಯಂತ ಪ್ರತಿಭಟನೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಿದ್ದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಬೆಂಬಲಿಗರಿಗೆ ಧನ್ಯವಾದ. ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ಮುಂದುವರಿಸಿದರೆ, ಖಂಡಿತವಾಗಿಯೂ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಗುತ್ತದೆ ಎಂಬ ದೃಢ ನಂಬಿಕೆ ನನಗಿದೆ’ ಎಂದು ಹೇಳಿದ್ದಾರೆ. Have been diagnosed with typhoid, but the fight will go on until Dharmendra Pradhan resigns! pic.twitter.com/8iHSZdF6K7— Abhijeet Dipke (@abhijeet_dipke) July 25, 2026 26ನೇ ದಿನಕ್ಕೆ ಉಪವಾಸ ಕೈಬಿಟ್ಟ ವಾಂಗ್ಚೂಕ್ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು 26 ದಿನಗಳ ನಂತರ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ದೀಪ್ಕೆ, ‘ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಮ್ಮ ಪ್ರತಿಭಟನೆ ನಡೆಯಲಿದೆ. ಸೊನಮ್ ಅವರು ಸತ್ಯಾಗ್ರಹ ಅಂತ್ಯಗೊಳಿಸಿದ್ದಕ್ಕೆ ಸಂತೋಷವಾಗಿದೆ. ಅವರ ಜೀವ ದೇಶಕ್ಕೆ ಅತ್ಯಮೂಲ್ಯವಾದದ್ದು ಎಂದಿದ್ದಾರೆ. ಜೆನ್–ಝೀಗಳ ಪ್ರತಿಭಟನೆಗೆ ‘ಬೂಮರ್ಸ್’ಗಳ ಬೆಂಬಲಸಿಜೆಪಿ ಪ್ರತಿಭಟನೆ: ಜುಲೈ 27ರಂದು ‘ಸುಪ್ರೀಂ’ನಲ್ಲಿ ವಿಚಾರಣೆಏನುಬೇಕಾದರೂ ಮಾಡಿದೆಹಲಿ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ತಪಾಸಣೆ ಮಾಡಿದ್ದಾರೆ, ಇನ್ನೊಂದೆಡೆ ಆಹಾರ ಪದಾರ್ಥ ಜಂತರ್ ಮಂತರ್ಗೆ ಬರದಂತೆ ತಡೆದಿದ್ದಾರೆ ಎನ್ನುವ ಸಂದೇಶದ ಫೋಟೊಗಳನ್ನು ಹಂಚಿಕೊಂಡಿರುವ ದೀಪ್ಕೆ ನೀವು ಏನು ಬೇಕಾದರೂ ಮಾಡಿ. ಜಂತರ್ ಮಂತರ್ಗೆ ಬರುವ ಜನರನ್ನು ತಡೆಯಲು ನಿಮಗೆ ಸಾಧ್ಯವಿಲ್ಲ’ ಎಂದಿದ್ದಾರೆ.‘ಜನರು ಊಟ ಮಾಡುವುದನ್ನು ತಡೆಯಲು ನಿಮಗೆ ಸಾಧ್ಯವಿಲ್ಲ. ಜನರು ನಮಗೆ ಸಹಾಯ ಮಾಡುವುದನ್ನು ತಡೆಯಲು ನಿಮಗೆ ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರಧಾನ್ ಅವರ ರಾಜೀನಾಮೆಯನ್ನು ತಡೆಯಲು ನಿಮಗೆ ಸಾಧ್ಯವಿಲ್ಲ, ಅವರು ಸ್ಥಾನದಿಂದ ಇಳಿಯುತ್ತಾರೆ’ ಎಂದು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ. Dear @DelhiPolice,Do whatever you want to. You cannot stop people from coming to Jantar Mantar. You cannot stop people from having food. You cannot stop people from helping us.Most importantly, you cannot stop Pradhan’s resignation. He is going. pic.twitter.com/mxJuPOws0J— Ashutosh Ranka (@AshutoshRanka) July 25, 2026