ಬೀಳಗಿ| ನಿರಂತರ ಒತ್ತಡಯುಕ್ತ ನೀರು ಸರಬರಾಜು: ಅವಧಿ ಮುಗಿದರೂ, ಕಾಮಗಾರಿ ಅಪೂರ್ಣ
ಬೀಳಗಿ: ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ವಿತರಣಾ ವ್ಯವಸ್ಥೆ ಒದಗಿಸುವ ಯೋಜನೆಯು 2022 ರಂದು ಪ್ರಾರಂಭವಾಗಿದ್ದು ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ಗಡುವು ನಿಗದಿಪಡಿಸಲಾಗಿತ್ತು. ಆದರೆ 48 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಕಾಮಗಾರಿ ವಿಳಂಬಕ್ಕೆ ಕಾರಣವೇನು ಎನ್ನುವುದು ತಿಳಿಯುತ್ತಿಲ್ಲ.ಪಟ್ಟಣದ ಜನಸಂಖ್ಯೆಯು 2011ರ ಜನಗಣತಿಯಂತೆ 17,792

ಬೀಳಗಿ: ಪಟ್ಟಣಕ್ಕೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ವಿತರಣಾ ವ್ಯವಸ್ಥೆ ಒದಗಿಸುವ ಯೋಜನೆಯು 2022 ರಂದು ಪ್ರಾರಂಭವಾಗಿದ್ದು ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳು ಗಡುವು ನಿಗದಿಪಡಿಸಲಾಗಿತ್ತು. ಆದರೆ 48 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಕಾಮಗಾರಿ ವಿಳಂಬಕ್ಕೆ ಕಾರಣವೇನು ಎನ್ನುವುದು ತಿಳಿಯುತ್ತಿಲ್ಲ.ಪಟ್ಟಣದ ಜನಸಂಖ್ಯೆಯು 2011ರ ಜನಗಣತಿಯಂತೆ 17,792 ಇದ್ದು ಪ್ರಸ್ತುತ 22,857 ಜನರನ್ನು ಹೊಂದಿದೆ. 2031ನೇ ಸಾಲಿಗೆ ಅಂದಾಜಿಸಲಾದ 42,000 ಜನಸಂಖ್ಯೆಗೆ ದಿನಂಪ್ರತಿ ತಲಾ 70 ಲೀಟರ್ನಂತೆ ಪರಿಗಣಿಸಿ ವಿನ್ಯಾಸಿಸಲಾಗಿದೆ. ಈ ಯೋಜನೆಗೆ ₹64 ಕೋಟಿ ಹಣ ನಿಗದಿಪಡಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ನೀರಾವರಿ ಪ್ರಯೋಜನೆ ದೊರೆಯುದಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.ಈಗಾಗಲೇ ಈ ಯೋಜನೆಯು ಶೇ 90ರಷ್ಟು ಪೂರ್ಣಗೊಂಡಿದ್ದು ಆ.15ರ ಒಳಗೆ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು. ಹೊಲಗಳಲ್ಲಿ ಪೈಪ್ಲೈನ್ ತರುವ ಸಂದರ್ಭದಲ್ಲಿ ಕೆಲವೊಂದು ಸ್ಥಳಗಳಲ್ಲಿ ರೈತರಿಂದ ಸಣ್ಣಪುಟ್ಟ ತೊಂದರೆಗಳಾದ ಸಂದರ್ಭದಲ್ಲಿ ಸರಿಪಡಿಸಿ ಮುಂದೆ ತರುವಲ್ಲಿ ತಡವಾಗಿದ್ದು,ಶೀಘ್ರ ಸಾರ್ವಜನಿಕರ ಬಳಕೆಗೆ ಒದಗಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುರಾಜ ಬಂಗಿನವರ ‘ಪ್ರಜಾವಾಣಿ’ಗೆ ತಿಳಿಸಿದರು.ದೇವಿಂದ್ರ ಧನಪಾಲ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಬೀಳಗಿನೀರು ಸರಬರಾಜು ವಿತರಣಾ ವ್ಯವಸ್ಥೆಗೆ ಈಗಾಗಲೇ ಪ್ರಾಯೋಗಿಕ ಚಾಲನೆ ನೀಡಿದ್ದು ಕೆಲವೆಡೆ ತೊಂದರೆಯಾಗಿದೆ. ಅವುಗಳನ್ನು ಸರಿಪಡಿಸಿ ಬರುವ ಆಗಸ್ಟ್ನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಲಾಗುವುದು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260725-19-702253552