ತಡರಾತ್ರಿ ಮತ್ತೊಂದು ವಿಡಿಯೊ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ನವದೆಹಲಿ: ಸೆಲ್ಫಿ ವಿಡಿಯೊ ಮೂಲಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕ್ರಮ ಕೈಗೊಳ್ಳುವುದಾಗಿ ಮತ್ತು ಇತರ ವಿಷಯಗಳನ್ನು ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ತಡರಾತ್ರಿ ಮತ್ತೊಂದು ರೀಲ್ಸ್ ಪೋಸ್ಟ್ ಮಾಡುವ ಮೂಲಕ ಥ್ಯಾಂಕ್ಸ್ ಫ್ರೆಂಡ್ಸ್ ಎಂದು ಯುವಜನರಿಗೆ ಧನ್ಯವಾದ ಹೇಳಿದ್ದಾರೆ.ನನ್ನ ವಿಡಿಯೊ ಸಂದೇಶ ನೋಡಿ ಸಲಹೆ ಸೂಚನೆಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವ
ನವದೆಹಲಿ: ಸೆಲ್ಫಿ ವಿಡಿಯೊ ಮೂಲಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕ್ರಮ ಕೈಗೊಳ್ಳುವುದಾಗಿ ಮತ್ತು ಇತರ ವಿಷಯಗಳನ್ನು ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ, ತಡರಾತ್ರಿ ಮತ್ತೊಂದು ರೀಲ್ಸ್ ಪೋಸ್ಟ್ ಮಾಡುವ ಮೂಲಕ ಥ್ಯಾಂಕ್ಸ್ ಫ್ರೆಂಡ್ಸ್ ಎಂದು ಯುವಜನರಿಗೆ ಧನ್ಯವಾದ ಹೇಳಿದ್ದಾರೆ.ನನ್ನ ವಿಡಿಯೊ ಸಂದೇಶ ನೋಡಿ ಸಲಹೆ ಸೂಚನೆಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ರೀಲ್ನಲ್ಲಿ ತಿಳಿಸಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರೆ ಪರೀಕ್ಷಾ ಅಕ್ರಮಗಳ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದ್ದು, ಅದರ ನಡುವೆಯೇ ಮೋದಿ ಇನ್ಸ್ಟಾಗ್ರಾಮ್ ಮೂಲಕವೇ ವಿಡಿಯೊಗಳನ್ನುಪೋಸ್ಟ್ ಮಾಡುವ ಮೂಲಕವೇ ಯುವಜನರನ್ನು ತಲುಪುವ ಯತ್ನ ನಡೆಸಿದ್ದಾರೆ.ಅಡಿಬರಹದಲ್ಲಿ ತಮ್ಮ ಹಿಂದಿನ ಸಂದೇಶದ ವಿಡಿಯೊಗೆ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಮೋದಿ ಅಭಿನಂದಿಸಿದ್ದಾರೆ. ನಿನ್ನೆಯ ನನ್ನ ವಿಡಿಯೊ ವೀಕ್ಷಿಸಿದ ಯುವಜನರಿಗೆ ಥ್ಯಾಂಕ್ಸ್ ಎಂದಿರುವ ಅವರು, ಅತ್ಯಂತ ಒಳನೋಟವುಳ್ಳ ಸಲಹೆಗಳನ್ನು ಕಳುಹಿಸಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ಧಾರೆ.'ಸ್ನೇಹಿತರೇ, ಧನ್ಯವಾದಗಳು. ನಿನ್ನೆ ತಡರಾತ್ರಿ ನಿಮ್ಮನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವಿಡಿಯೊಗೆ ನೀವು ನೀಡಿದ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸಲಹೆಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಅದನ್ನು ವೀಕ್ಷಿಸಿದ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಎಲ್ಲರಿಗೂ ಧನ್ಯವಾದಗಳು’ ಎಂದು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರಧಾನಿ ಮೋದಿಯವರು ನೀಡಿದ್ದ ಸಂದೇಶಈ ಹೊಸ 'ರೀಲ್' ಜುಲೈ 23 ರಂದು ಮೋದಿ ಪೋಸ್ಟ್ ಮಾಡಿದ್ದ ಹಿಂದಿನ ವಿಡಿಯೋದ ಮುಂದುವರಿದ ಭಾಗವಾಗಿದೆ. ಆ ಹಿಂದಿನ ವಿಡಿಯೊದಲ್ಲಿ ಅವರು ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ಕುರಿತು ಮಾತನಾಡಿದ್ದರು.ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದರು. ‘ಸಂಸತ್ನಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿದೆ. ಬೇರೆ ಬೇರೆ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಹಾಗೂ ಪ್ರಕರಣಗಳನ್ನು ಬೇಗನೆ ಮುಗಿಸುವ ಮಸೂದೆಗಳನ್ನು ಮಂಡಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಮಸೂದೆಗಳನ್ನು ಮಂಡಿಸುವ ಮೊದಲು ವಿದ್ಯಾರ್ಥಿಗಳ ಪ್ರಮುಖ ಬೇಡಿಕೆ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.ಬಳಿಕ, ಗುರುವಾರ ಮಧ್ಯರಾತ್ರಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರು ಸೊನಮ್ ವಾಂಗ್ಚೂಕ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿ ಭರವಸೆ ನೀಡಿದ್ದರು. ಆ ಬಳಿಕ ಸೊನಮ್ ಅವರು ತಮ್ಮ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. View this post on Instagram ಪ್ರಶ್ನೆ ಪತ್ರಿಕೆ ಸೋರಿಕೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿರಾಹುಲ್ ಗಾಂಧಿ ಪ್ರತಿಭಟನೆಯ ಪ್ರಮಾಣಿಕತೆ ಪ್ರಶ್ನಿಸಿದ ಸೊನಮ್ ವಾಂಗ್ಚೂಕ್ ಪತ್ನಿ