ದೇವಶಯನ ಏಕಾದಶಿ: ಆಚರಣೆಯ ಮಹತ್ವ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ...
ಆಷಾಢ ಮಾಸದಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಆದರೆ ಕೆಲವೆಡೆ ಮುಹೂರ್ತ ನೋಡಿ ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುತ್ತಾರೆ. ಇದರ ಹೊರತಾಗಿ ಆಷಾಢ ಮಾಸದಲ್ಲಿ ಅನೇಕ ವಿಶೇಷ ಆಚರಣೆಗಳು ನಮ್ಮಲ್ಲಿವೆ. ಪ್ರಮುಖವಾಗಿ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ ದೇವಶಯನ ಏಕಾದಶಿ ಎಂದು ಕರೆಯುತ್ತೇವೆ. 2026ರ ಜುಲೈ 24ರ ಶುಕ್ರವಾರ ಬೆಳಿಗ್ಗೆ 9.47ಕ್ಕೆ ಈ ಏಕ

ಆಷಾಢ ಮಾಸದಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಆದರೆ ಕೆಲವೆಡೆ ಮುಹೂರ್ತ ನೋಡಿ ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುತ್ತಾರೆ. ಇದರ ಹೊರತಾಗಿ ಆಷಾಢ ಮಾಸದಲ್ಲಿ ಅನೇಕ ವಿಶೇಷ ಆಚರಣೆಗಳು ನಮ್ಮಲ್ಲಿವೆ. ಪ್ರಮುಖವಾಗಿ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ ದೇವಶಯನ ಏಕಾದಶಿ ಎಂದು ಕರೆಯುತ್ತೇವೆ. 2026ರ ಜುಲೈ 24ರ ಶುಕ್ರವಾರ ಬೆಳಿಗ್ಗೆ 9.47ಕ್ಕೆ ಈ ಏಕಾದಶಿ ಆರಂಭವಾಗುತ್ತದೆ. ದಿನಪೂರ್ತಿ ಏಕಾದಶಿ ಇದ್ದರೂ, ಆಚರಣೆ ಇರುವುದಿಲ್ಲ. ಮುಂದಿನ ದಿನ ಜುಲೈ 25ರ ಶನಿವಾರದ ಸೂರ್ಯೋದಯದೊಂದಿಗೆ ಏಕಾದಶಿಯ ಆಚರಣೆ ಆರಂಭವಾಗುತ್ತದೆ.ಆಷಾಢ ಮಾಸ ಅಶುಭವಲ್ಲ, ಆಧ್ಯಾತ್ಮಿಕ ಸಾಧನೆಯ ಪವಿತ್ರ ಕಾಲಈ ದಿನದಂದು ವಿಷ್ಣುವಿನ ಶಯನೋತ್ಸವವನ್ನು ಆಚರಿಸುತ್ತಾರೆ. ಇಂದು ಶಂಖ, ಚಕ್ರ ಆಯುಧಗಳನ್ನು ಧರಿಸಿದ ವಿಷ್ಣುವಿನ ಮೂರ್ತಿಯನ್ನು ಮಂಟಪದಲ್ಲಿ ಪ್ರತಿಷ್ಟಾಪಿಸಬೇಕು. ಈ ವಿಗ್ರಹದಲ್ಲಿ ಲಕ್ಷ್ಮೀಯೂ ಇರಬೇಕು.ಈ ದಿನ ವಿಷ್ಣುವಿಗೆ ಪೂಜೆ ಸಲ್ಲಿಸುವುದರಿಂದ ಕುಟುಂಬದಲ್ಲಿನ ಮನಸ್ತಾಪಗಳು ದೂರವಾಗಿ ಅನ್ಯೋನ್ಯತೆ ಮೂಡುತ್ತದೆ. ನಿರ್ಣಯ ಸಿಂಧುವಿನ ಪ್ರಕಾರ, ಏಕಾದಶಿಯ ದಿನದಂದು ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ಮಾಡಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಮನೆಯಲ್ಲಿ ಸೂತಕವಿದ್ದರೆ, ಯಾವುದೇ ವ್ರತವನ್ನು ಮಾಡಬಾರದು. ಈ ದಿನದಂದು ಮಾಡುವ ಪೂಜೆ ಪುನಸ್ಕಾರಗಳು ತ್ರಿಮೂರ್ತಿಗಳನ್ನು ಪೂಜಿಸಿದಷ್ಟೇ ಶ್ರೇಷ್ಠ. ಆದರೆ ಉಪವಾಸ ಮಾಡುವುದು ಅತಿ ಮುಖ್ಯ. ಆರೋಗ್ಯದ ಸಮಸ್ಯೆ ಇರುವವರು ಮತ್ತು ಮಕ್ಕಳು ಹಣ್ಣು ಹಂಪಲುಗಳನ್ನು ಸೇವಿಸಬಹುದಾಗಿದೆ. ಈ ದಿನದಂದು ನೀರನ್ನು ಕುಡಿಯದೆ ಉಪವಾಸ ಮಾಡುತ್ತಾರೆ. ಇದರ ಜತೆಗೆ ಜಾಗರಣೆ ಮಾಡಿದರೆ, ಜನ್ಮ ಜನ್ಮಾಂತರದ ಪಾಪದಿಂದ ಮುಕ್ತರಾಗಬಹುದು. ಆದರೆ ಖಡ್ಡಾಯವಾಗಿ ಬ್ರಹ್ಮಚರ್ಯವನ್ನು ಆಚರಿಸಬೇಕು.ಪೂಜೆ, ಉಪವಾಸ ಮತ್ತು ಜಾಗರಣೆ ಈ ಮೂರನ್ನು ಆಚರಿಸಿದರೇ ಅಶ್ವಮೇಧ ಯಜ್ಞವನ್ನು ಮಾಡಿದ ಪುಣ್ಯವು ಬರುತ್ತದೆ. ಈ ವ್ರತವನ್ನು ಆಚರಿಸದೆ ಹೋದರು ಇದರ ಮಹತ್ವವನ್ನು ಅರಿತರೆ ಪಾಪ ಕರ್ಮಗಳಿಂದ ದೂರವಾಗಬಹುದು.ಯೋಗನಿದ್ದೆಯಲ್ಲಿ ಇರುವ ವಿಷ್ಣುವನ್ನು ಪೂಜಿಸುವ ಜೊತೆಗೆ ದಾನ ಧರ್ಮವನ್ನು ಮಾಡಬಹುದು. ಮಕ್ಕಳಿಗೆ ಮೊಸರಿನಲ್ಲಿ ಕಲಸಿದ ಅವಲಕ್ಕಿಯನ್ನು ನೀಡಿದರೆ ಸಂತಾನ ದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ದ್ವಾದಶಿಯ ದಿನ ಗೋವಿನ ಪೂಜೆಯನ್ನು ಮಾಡಿದ ನಂತರ ಭೋಜನ ಮಾಡುವುದು ಶ್ರೇಷ್ಠಕರ.