ಪ್ರಧಾನ್ ರಾಜೀನಾಮೆ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಸಂಭ್ರಮ
ನವದೆಹಲಿ: ‘ಕಳೆದ 10 ದಿನಗಳಿಂದ ಏನೆಲ್ಲಾ ಆಗಿದೆಯೋ ಅದನ್ನೆಲ್ಲ ಕಂಡು ಬೇಸರವಾಗಿದೆ’ ಎನ್ನುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಕುಣ

ನವದೆಹಲಿ: ‘ಕಳೆದ 10 ದಿನಗಳಿಂದ ಏನೆಲ್ಲಾ ಆಗಿದೆಯೋ ಅದನ್ನೆಲ್ಲ ಕಂಡು ಬೇಸರವಾಗಿದೆ’ ಎನ್ನುವ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಜಂತರ್ ಮಂತರ್ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಕುರಿತು ಕಾಕ್ರೋಚ್ ಜನತಾ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ’ ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ‘ನಾವು ಗೆದ್ದಿದ್ದೇವೆ’ ಎಂದಿದ್ದಾರೆ.‘ಯುವಜನರ ಶಾಂತಿಯುತ ಹೋರಾಟ ವ್ಯರ್ಥವಾಗುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದೆವು’, ‘ಕಾಕ್ರೋಚ್ಗಳು ಗೆದ್ದಿದ್ದಾರೆ’ ಎಂದು ಸಿಜೆಪಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.ಬೆಂಗಳೂರಿನಲ್ಲೂ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ.#WATCH | Bengaluru, Karnataka | Protesters celebrate after the resignation of Union Education Minister Dharmendra Pradhan. pic.twitter.com/CKMrf85I80— ANI (@ANI) July 25, 2026 ವಿದ್ಯಾರ್ಥಿಗಳ ಜಯ ಎಂದ ನೆಟ್ಟಿಗರುಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಸಾಮಾಜಿ ಮಾಧ್ಯಮಗಳಲ್ಲಿ ನೆಟ್ಟಿಗರು ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತಿದ್ದಾರೆ.ಈ ಬಗ್ಗೆ ಬರೆದುಕೊಂಡಿರುವ ನಟ ಪ್ರಕಾಶ್ ರಾಜ್, ‘ಅಭಿನಂದನೆಗಳು ನನ್ನ ಪ್ರೀತಿಯ ಕಾಕ್ರೋಚ್ಗಳೇ ..ಪ್ರೀತಿಯ ಸೊನಮ್ ವಾಂಗ್ಚೂಕ್ ಹಾಗೂ ಯುವಜನತೆಯ ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಒಂದು ಆಡಳಿತ ವ್ಯವಸ್ಥೆಯನ್ನೇ ಮಂಡಿಯೂರುವಂತೆ ಮಾಡಬಲ್ಲಿರಿ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ’ ಎಂದು ಶ್ಲಾಘಿಸಿದ್ದಾರೆ.Congratulations ❤️❤️❤️ my Dear Cockroaches.. Dear Sonam wangchuk sir and every single one who stood by the youth . You Have proved that you can bring a regime down to its knees . #justasking pic.twitter.com/efMYgbzxlf— Prakash Raj (@prakashraaj) July 25, 2026