ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಖಾತೆ ಓಪನ್ – ಕಂಚು ಗೆದ್ದ ಪೋಲಿಯೊ ಪೀಡಿತ ಝಂದು
ಗ್ಲಾಸ್ಕೊ: ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಪೋಲಿಯೊ ಪೀಡಿತ ಝಂದು ಕುಮಾರ್ (Jhandu Kumar) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಶುಕ್ರವಾರ (ಜುಲೈ 24) ಆರಂಭವಾಗಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತದ ಪದಕದ ಖಾತೆ ಓಪನ್ ಆಗಿದೆ. ಪೋಲಿಯೊ ಪೀಡಿತ ಝಂದು ಕುಮಾರ್ (28) ಅವರು ಮೊದಲ ಪ್ರಯತ್ನದಲ್ಲಿ 181

ಗ್ಲಾಸ್ಕೊ: ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಪೋಲಿಯೊ ಪೀಡಿತ ಝಂದು ಕುಮಾರ್ (Jhandu Kumar) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಶುಕ್ರವಾರ (ಜುಲೈ 24) ಆರಂಭವಾಗಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾರತದ ಪದಕದ ಖಾತೆ ಓಪನ್ ಆಗಿದೆ. ಪೋಲಿಯೊ ಪೀಡಿತ ಝಂದು ಕುಮಾರ್ (28) ಅವರು ಮೊದಲ ಪ್ರಯತ್ನದಲ್ಲಿ 181 ಕೆ.ಜಿ, 2ನೇ ಪ್ರಯತ್ನದಲ್ಲಿ 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಆದ್ರೆ ಮೂರನೇ ಪ್ರಯತ್ನದಲ್ಲಿ 196 ಕೆ.ಜಿ ತೂಕ ಎತ್ತುವಲ್ಲಿ ವಿಫಲರಾದ ಹಿನ್ನೆಲೆ ಒಟ್ಟು 130.9 ಪಾಯಿಂಟ್ಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ನೈಜೀರಿಯಾದ ಇಡ್ರಿಸ್ ರಿಲುವಾನ್ 132.8 ಪಾಯಿಂಟ್ಗಳೊಂದಿಗೆ ಚಿನ್ನ, ಬ್ರಿಟನ್ನ ಮ್ಯಾಥ್ಯ ಹಾರ್ಡಿಂಗ್ 131 ಪಾಯಿಂಟ್ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಕ್ರೀಡಾಪಟು ಸುಧೀರ್ ಅವರು 114.1 ಪಾಯಿಂಟ್ಗಳೊಂದಿಗೆ 6ನೇ ಸ್ಥಾನ ಪಡೆದರು. ಕ್ರೀಡಾಕೂಟದ ಮೊದಲ ದಿನ ಪ್ಯಾರಾ ಪವರ್ಲಿಫ್ಟರ್ (Para Powerlifter) ಅಶೋಕ್ ಮಲಿಕ್ ಅವರು 4ನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕದಿಂದ ವಂಚಿತರಾದರು.