ಉಮರ್ ಖಾಲಿದ್ ಪರ ಪೋಸ್ಟರ್ ಪ್ರದರ್ಶಿಸಿದ್ರಲ್ಲಿ ತಪ್ಪೇನಿದೆ? – ಬಿ.ಕೆ.ಹರಿಪ್ರಸಾದ್
-ಪಾಕಿಸ್ತಾನದ ಮಾದರಿಯನ್ನು ಈ ಸರ್ಕಾರ ಅನುಸರಿಸುತ್ತಿದೆ ಬೆಂಗಳೂರು: ಶುಕ್ರವಾರ (ಜು.24) ಬೆಂಗಳೂರಿನಲ್ಲಿ ನಡೆದ ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ (Umar Khalid) ಪರ ಪೋಸ್ಟರ್ ಪ್ರದರ್ಶನ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ (BK Hariprasad) ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020ರ ಗಲಭೆ ಪ್ರಕರಣ

-ಪಾಕಿಸ್ತಾನದ ಮಾದರಿಯನ್ನು ಈ ಸರ್ಕಾರ ಅನುಸರಿಸುತ್ತಿದೆ ಬೆಂಗಳೂರು: ಶುಕ್ರವಾರ (ಜು.24) ಬೆಂಗಳೂರಿನಲ್ಲಿ ನಡೆದ ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ (Umar Khalid) ಪರ ಪೋಸ್ಟರ್ ಪ್ರದರ್ಶನ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ (BK Hariprasad) ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020ರ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಪೋಸ್ಟರ್ ಪ್ರದರ್ಶಿಸಿದ್ರಲ್ಲಿ ತಪ್ಪೇನಿದೆ? ಯಾಕೆ ಅವರನ್ನು ಐದು ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದಾರೆ? ಚಾರ್ಜ್ಶೀಟ್ ಯಾಕೆ ಹಾಕಿಲ್ಲ? ಇದೇನು ಪಾಕಿಸ್ತಾನನಾ? ಈ ಸರ್ಕಾರ ಪಾಕಿಸ್ತಾನದ ಮಾದರಿಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀಟ್ ಪ್ರತಿಭಟನೆ ವೇಳೆ ಉಮರ್ ಖಾಲಿದ್ ಪರ ಪೋಸ್ಟರ್ – ಕೇಸ್ ದಾಖಲಿಸಲು ಕಾನೂನು ತಜ್ಞರ ಮೊರೆಹೋದ ಪೊಲೀಸ್ ಪ್ರತಿಭಟನೆಯಲ್ಲಿ ಕೆಲವರು ʻUkhad Le BLR Policeʼ ಎಂಬ ಬರಹವಿದ್ದ ಪೋಸ್ಟರ್ಗಳನ್ನು ಪ್ರದರ್ಶಿಸಿದ್ರೆ, ಮತ್ತೊಂದು ಕಡೆ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರವಾಗಿ ಘೋಷಣೆಗಳಿರುವ ಪೋಸ್ಟರ್ಗಳನ್ನ ಪ್ರದರ್ಶಿಸಿರುವುದು ಕಂಡುಬಂದಿತ್ತು. ಈ ಪೋಸ್ಟರ್ಗಳು ಅಲ್ಲಿದ್ದ ಪೊಲೀಸರ ಗಮನ ಸೆಳೆದಿದ್ದು, ಪರಿಸ್ಥಿತಿ ಉದ್ವಿಗ್ನವಾಗದಂತೆ ಪೊಲೀಸರು ತಕ್ಷಣವೇ ಪೋಸ್ಟರ್ಗಳನ್ನ ವಶಪಡಿಸಿಕೊಂಡಿದ್ದರು. ಪೊಲೀಸರ ಕ್ರಮದ ವೇಳೆ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದರೂ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯುವಂತೆ ಪೊಲೀಸರು ಮತ್ತು ಆಯೋಜಕರು ಪರಿಸ್ಥಿತಿಯನ್ನ ನಿಯಂತ್ರಿಸಿದರು.ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಸರಣಿ ಅಪಘಾತ; ಗಾರ್ಮೆಂಟ್ಸ್ಗೆ ತೆರಳುತ್ತಿದ್ದ 30ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ ಪೋಸ್ಟರ್ ಹಿಡಿದ ವಿದ್ಯಾರ್ಥಿನಿಗೆ ಸ್ಥಳದಲ್ಲೇ ಕ್ಲಾಸ್: ಇನ್ನೂ ಪ್ರತಿಭಟನಾ ಸ್ಥಳದಲ್ಲಿ ಉಮರ್ ಖಾಲಿದ್ ಪರವಾಗಿ ಪೋಸ್ಟರ್ ಹಿಡಿದು ಬಂದಿದ್ದ ಯುವತಿಗೆ ಇತರ ವಿದ್ಯಾರ್ಥಿಗಳು ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇಂತಹ ಪೋಸ್ಟರ್ಗಳು ಪ್ರತಿಭಟನೆಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟುಮಾಡುತ್ತವೆ ಎಂದು ಹೇಳಿ ಸ್ಥಳದಿಂದ ತೆರಳುವಂತೆ ಒತ್ತಾಯಿಸಿದ್ದರು. ಬಳಿಕ ಆಕೆ ಪ್ರತಿಭಟನಾ ಸ್ಥಳದಿಂದ ಹೊರನಡೆದಿದ್ದರು. ಉಮರ್ ಖಾಲಿದ್ ಯಾರು? ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ 2020ರ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳು.ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ