ಸಂಪುಟ ವಿಸ್ತರಣೆ; ನಾಳೆ ದೆಹಲಿಗೆ ಸಿಎಂ ಡಿ.ಕೆ.ಶಿವಕುಮಾರ್
– ಸಿಎಂಗೂ ಮೊದಲೇ ದೆಹಲಿಗೆ ಶಾಸಕರ ದಂಡು ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಹಿನ್ನೆಲೆಯಲ್ಲಿ ನಾಳೆ ದೆಹಲಿಗೆ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಭೇಟಿ ನೀಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (B.K.Hariprasad) ಕೂಡಾ ತೆರಳಲಿದ್ದಾರೆ. ನಾಳೆ ರಾತ್ರಿ ಅಥವಾ ಮಂಗ

– ಸಿಎಂಗೂ ಮೊದಲೇ ದೆಹಲಿಗೆ ಶಾಸಕರ ದಂಡು ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ (Cabinet Expansion) ಹಿನ್ನೆಲೆಯಲ್ಲಿ ನಾಳೆ ದೆಹಲಿಗೆ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಭೇಟಿ ನೀಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (B.K.Hariprasad) ಕೂಡಾ ತೆರಳಲಿದ್ದಾರೆ. ನಾಳೆ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: NEET ಪರೀಕ್ಷೆ ವಿಚಾರದಲ್ಲಿ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ: ಸುಧಾಕರ್ ವಾಗ್ದಾಳಿ ಇದಕ್ಕೂ ಮುನ್ನ ಕರ್ನಾಟಕ ಭವನದಲ್ಲಿ ವಕೀಲರನ್ನು ಸಿಎಂ ಭೇಟಿಯಾಗಲಿದ್ದಾರೆ. ಬಳಿಕ ಸರ್ವ ಪಕ್ಷ ಸಂಸದರ ಸಭೆಯನ್ನು ಸಿಎಂ ಕರೆದಿದ್ದಾರೆ. ಕೇಂದ್ರದಲ್ಲಿ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ದೆಹಲಿಗೆ ಶಾಸಕರ ದಂಡು ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂಗೂ ಮೊದಲೇ ದೆಹಲಿಗೆ ಶಾಸಕರ ದಂಡು ಆಗಮಿಸಿದೆ. ಅಶೋಕ್ ಪಟ್ಟಣ, ಬಸನಗೌಡ ದದ್ದಲ್, ಬಸನಗೌಡ ಬಾದರ್ಲಿ, ಪುಟ್ಟರಂಗ ಶೆಟ್ಟಿ, ವಸಂತ್ ಕುಮಾರ್, ಪಿ.ಎಂ ನರೇಂದ್ರ ಸ್ವಾಮಿ, ಸುಧಾಮ್ ದಾಸ್ ಮತ್ತು ಹಂಪನಗೌಡ ಬಾದರ್ಲಿ ದೆಹಲಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ನಿಧನ