LGBTQ+ ಸಮುದಾಯಕ್ಕೆ ಗೌರವ, ಸ್ವೀಕಾರಾರ್ಹತೆ ಸಿಗಬೇಕು: ಮೋಹನ್ ಭಾಗವತ್
ಹೈದರಾಬಾದ್: LGBTQ+ ಸಮುದಾಯದ ವ್ಯಕ್ತಿಗಳು ಸಮಾಜದಲ್ಲಿ ಗೌರವ ಮತ್ತು ಸ್ವೀಕಾರಾರ್ಹತೆಗೆ ಅರ್ಹರಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್(Mohan Bhagwat) ಅವರು ಹೇಳಿದ್ದಾರೆ. ಸಲಿಂಗರತಿ (Homosexuality) ಮತ್ತು LGBTQ+ ಸ್ವಭಾವವು ಮಾನವ ಜೀವನದಲ್ಲಿ ಸದಾ ಇತ್ತು ಮತ್ತು ಇದು ಸ್ವಾಭಾವಿಕವಾಗಿದೆ. ಇಂತಹ ವ್ಯಕ್ತಿಗಳನ್ನು ಸ

ಹೈದರಾಬಾದ್: LGBTQ+ ಸಮುದಾಯದ ವ್ಯಕ್ತಿಗಳು ಸಮಾಜದಲ್ಲಿ ಗೌರವ ಮತ್ತು ಸ್ವೀಕಾರಾರ್ಹತೆಗೆ ಅರ್ಹರಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್(Mohan Bhagwat) ಅವರು ಹೇಳಿದ್ದಾರೆ. ಸಲಿಂಗರತಿ (Homosexuality) ಮತ್ತು LGBTQ+ ಸ್ವಭಾವವು ಮಾನವ ಜೀವನದಲ್ಲಿ ಸದಾ ಇತ್ತು ಮತ್ತು ಇದು ಸ್ವಾಭಾವಿಕವಾಗಿದೆ. ಇಂತಹ ವ್ಯಕ್ತಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ ನೋಡಬಾರದು, ಬದಲಿಗೆ ಅವರಿಗೆ ಸಮಾಜದಲ್ಲಿ ಸೂಕ್ತ ಗೌರವ ಮತ್ತು ಸ್ಥಾನಮಾನ ನೀಡಬೇಕು ಎಂದು ಭಾಗವತ್ ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಇಂತಹ ವ್ಯಕ್ತಿಗಳಿಗೆ ಎಂದಿಗೂ ಅನ್ಯಾಯವಾಗಿಲ್ಲ. ಮಹಾಭಾರತದಂತಹ ಪೌರಾಣಿಕ ಗ್ರಂಥಗಳಲ್ಲೂ ಇಂತಹ ಉಲ್ಲೇಖಗಳಿವೆ ಎಂದು ಅವರು ನೆನಪಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ತನ್ನ ಮುಂದಿನ ಹೋರಾಟದ ಕಾರ್ಯತಂತ್ರವನ್ನು ಪ್ರಕಟಿಸುತ್ತೇವೆ: ದೀಪ್ಕೆ VIDEO | Hyderabad: RSS chief Mohan Bhagwat says, “LGBTQ+ community is a part of our society, they deserve dignity and equal place.” (Full video available on PTI Videos – https://t.co/n147TvrpG7) pic.twitter.com/8ucoD099fz — Press Trust of India (@PTI_News) July 26, 2026 ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಖಾಸಗಿ ಜೀವನವಿರುತ್ತದೆ. ಸಮಾಜವು ಅವರ ಆಯ್ಕೆಗಳನ್ನು ಗೌರವಿಸಬೇಕು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಬೆಂಬಲಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಚುನಾವಣೆ ಮುಗಿದ ಮೇಲೆ ಅಳುವುದಕ್ಕಿಂತ ಈಗಲೇ ಮಾತುಕತೆ ನಡೆಸಿ – ಎಸ್ಪಿ ಜೊತೆ ಮೈತ್ರಿಗೆ ಓವೈಸಿ ಆಫರ್ LGBTQ+ ಪರವಾಗಿ ಭಾಗವತ್ ಮಾತನಾಡುವುದು ಇದು ಹೊಸದೆನಲ್ಲ. ಜನವರಿ 2023 ರಲ್ಲಿ ಆರ್ಎಸ್ಎಸ್ಗೆ ಸಂಬಂಧಿಸಿದ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, LGBTQ+ ಜನರು ಮಾನವರಾಗಿರುವುದರಿಂದ ಮತ್ತು ಇತರರಂತೆ ಬದುಕುವ ಹಕ್ಕನ್ನು ಹೊಂದಿರುವುದರಿಂದ ಅವರಿಗೆ ತಮ್ಮದೇ ಆದ ಖಾಸಗಿ ಮತ್ತು ಸಾಮಾಜಿಕ ಸ್ಥಳವಿರಬೇಕು ಎಂದು ಹೇಳಿದ್ದರು. ಹಿಂದೂ ಧರ್ಮಗ್ರಂಥಗಳು ಮತ್ತು ಪುರಾಣಗಳನ್ನು ಉಲ್ಲೇಖಿಸಿ, ಭಾರತೀಯ ನಾಗರಿಕತೆಯು ಅಂತಹ ಸಮುದಾಯಗಳನ್ನು ಸಾಮಾಜಿಕವಾಗಿ ಹೊರಗಿಡುವ ಬದಲು ಐತಿಹಾಸಿಕವಾಗಿ ಅವರಿಗೆ ಅವಕಾಶ ನೀಡಿದೆ ಎಂದು ಪ್ರತಿಪಾದಿಸಿದ್ದರು.