ಹೊಂಡಕ್ಕೆ ಬಿದ್ದು ತಾಯಿ, ಮಕ್ಕಳಿಬ್ಬರ ಆತ್ಮಹತ್ಯೆ
ಕೋಲಾರ: ಸಾಲಬಾಧೆ ಹಾಗೂ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ ಬೇಸತ್ತು ತಾಲ್ಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ತಾಯಿಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಎನ್.ಸುರೇಶ್ ಎಂಬುವವರ ಪತ್ನಿ ಬಿ.ವಿ.ಪ್ರಮೀಳಾ (40), ಮಗಳು ಸ್ವಪ್ನಾ (22) ಹಾಗೂ ಪು

ಕೋಲಾರ: ಸಾಲಬಾಧೆ ಹಾಗೂ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೆ ಬೇಸತ್ತು ತಾಲ್ಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ತಾಯಿಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಾಲ್ಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಎನ್.ಸುರೇಶ್ ಎಂಬುವವರ ಪತ್ನಿ ಬಿ.ವಿ.ಪ್ರಮೀಳಾ (40), ಮಗಳು ಸ್ವಪ್ನಾ (22) ಹಾಗೂ ಪುತ್ರ ಚರಣ್ (19) ಆತ್ಮಹತ್ಯೆ ಮಾಡಿಕೊಂಡವರು.ಮನೆ ನಿರ್ಮಿಸಲು ₹15 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಸಾಲ ವಾಪಸ್ ಕೊಡುವಂತೆ ಒತ್ತಡ ಹಾಕುತ್ತಿದ್ದರು. ಜತೆಗೆ ಮಕ್ಕಳಿಬ್ಬರ ವಿದ್ಯಾಭ್ಯಾಸಕ್ಕೂ ಆರ್ಥಿಕ ತೊಂದರೆಯಾಗಿತ್ತು. ಇದರಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಸುರೇಶ್ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮೀಳಾ ಮನೆಗೆಲಸ ಮಾಡುತ್ತಿದ್ದರು. ಸ್ವಪ್ನಾ ಪದವೀಧರೆಯಾಗಿದ್ದು, ಚರಣ್ ಈಚೆಗೆ ಪಿಯುಸಿ ಪೂರ್ಣಗೊಳಿಸಿದ್ದ. ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು, ಶುಲ್ಕ ಪಾವತಿಸಬೇಕಿತ್ತು.ಮಕ್ಕಳ ಶುಲ್ಕ ಕಟ್ಟಲೂ ಆಗಿರಲಿಲ್ಲ ಸುರೇಶ್ ಹಾಗೂ ಪ್ರಮೀಳಾ ದಂಪತಿ ಮಕ್ಕಳಿಬ್ಬರು ಓದುತ್ತಿದ್ದು ಕಾಲೇಜಿನ ಶುಲ್ಕ ಪಾವತಿಸಲೂ ಸಾಧ್ಯವಾಗಿರಲಿಲ್ಲ. ಸುರೇಶ್ ₹10 ಲಕ್ಷ ಸಾಲ ಮಾಡಿದ್ದರೆ ಪ್ರಮೀಳಾ ವಿವಿಧ ಸಂಘಗಳಲ್ಲಿ ₹5 ಲಕ್ಷ ಸಾಲ ಮಾಡಿದ್ದರು. ಆಟೊ ಚಾಲಕರಾಗಿರುವ ಸುರೇಶ್ ಅವರೊಬ್ಬರ ದುಡಿಮೆ ಸಾಕಾಗುತ್ತಿರಲಿಲ್ಲ. ಆರ್ಥಿಕ ಸಂಕಷ್ಟದಿಂದ ಬೇಸತ್ತು ತಾಯಿ ಹಾಗೂ ಅವರ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.ಚರಣ್ಸ್ವಪ್ನಾ(ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೇ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್–14416 ಅಥವಾ ಸಹಾಯ್– 080 25497777, 98864 44075).