ಮೀರಾಬಾಯಿ ಚಾನುಗೆ ಹ್ಯಾಟ್ರಿಕ್ ಚಿನ್ನ – ಹೊಸ ದಾಖಲೆಯೊಂದಿಗೆ ಭಾರತಕ್ಕೆ ಮೊದಲ ಸ್ವರ್ಣ!
ಗ್ಲ್ಯಾಸ್ಗೋ: ಭಾರತದ ದಿಗ್ಗಜ ವೇಟ್ಲಿಫ್ಟರ್ ಮೀರಾಬಾಯಿ ಚಾನು(Mirabai Chanu) 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ(Commonwealth Games) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಸತತ ಗೇಮ್ಸ್ ದಾಖಲೆಗಳನ್ನು ಮುರಿಯುವ ಮೂಲಕ ಅವರು ಭಾರತಕ್ಕೆ (India) ಈ ಬಾರಿಯ ಮೊದಲ ಚಿನ್ನದ ಪದಕವನ್ನು (Gold Medal) ತಂದುಕೊಟ್ಟಿದ್ದಾರೆ. ಕಾಮನ

ಗ್ಲ್ಯಾಸ್ಗೋ: ಭಾರತದ ದಿಗ್ಗಜ ವೇಟ್ಲಿಫ್ಟರ್ ಮೀರಾಬಾಯಿ ಚಾನು(Mirabai Chanu) 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ(Commonwealth Games) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಸತತ ಗೇಮ್ಸ್ ದಾಖಲೆಗಳನ್ನು ಮುರಿಯುವ ಮೂಲಕ ಅವರು ಭಾರತಕ್ಕೆ (India) ಈ ಬಾರಿಯ ಮೊದಲ ಚಿನ್ನದ ಪದಕವನ್ನು (Gold Medal) ತಂದುಕೊಟ್ಟಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವರಿಗೆ ಸಿಕ್ಕಿದ ಸತತ ಮೂರನೇ ಚಿನ್ನದ ಪದಕ ಎನ್ನುವುದು ವಿಶೇಷ. 31 ವರ್ಷದ ಮಣಿಪುರದ ಕ್ರೀಡಾಪಟು ಚಾನು, ಸ್ನ್ಯಾಚ್ ಹಾಗೂ ಕ್ಲೀನ್ ಅಂಡ್ ಜರ್ಕ್ ಎರಡೂ ವಿಭಾಗಗಳಲ್ಲಿ ಹೊಸ ಕಾಮನ್ವೆಲ್ತ್ ಗೇಮ್ಸ್ ದಾಖಲೆ ಬರೆದಿದ್ದಾರೆ. ಸ್ನ್ಯಾಚ್ 85 ಕೆಜಿ (ಕಾಮನ್ವೆಲ್ತ್ ಮತ್ತು ಗೇಮ್ಸ್ ದಾಖಲೆ), ಕ್ಲೀನ್ ಅಂಡ್ ಜರ್ಕ್ 105 ಕೆಜಿ (ಗೇಮ್ಸ್ ದಾಖಲೆ) ಒಟ್ಟು 190 ಕೆಜಿ ಎತ್ತುವ ಮೂಲಕ ದಾಖಲೆ ಬರೆದರು. ಮೀರಾಬಾಯಿ ಚಾನು ಎಷ್ಟು ಪ್ರಬಲ ಪ್ರದರ್ಶನ ನೀಡಿದರೆಂದರೆ, ಬೆಳ್ಳಿ ಪದಕ ಗೆದ್ದ ನೈಜೀರಿಯಾದ ರೂತ್ ಅಸುಕ್ವೊ ನ್ಯಾಂಗ್ (ಒಟ್ಟು 168 ಕೆಜಿ) ಅವರಿಗಿಂತ ಬರೋಬ್ಬರಿ 22 ಕೆಜಿ ಹೆಚ್ಚಿನ ತೂಕ ಎತ್ತುವ ಮೂಲಕ ಸುಲಭವಾಗಿ ಮೊದಲ ಸ್ಥಾನ ಪಡೆದರು. A hat-trick of GOLD medals! Congratulations to @mirabai_chanu on clinching the Gold medal at the Glasgow Commonwealth Games. Your unwavering dedication, remarkable consistency, and extraordinary strength continue to make India proud on the global stage. #Cheer4Bharat pic.twitter.com/CU6j7ltXlU — Dr Mansukh Mandaviya (@mansukhmandviya) July 26, 2026 ಸ್ನ್ಯಾಚ್ ವಿಭಾಗದ ಮೊದಲ ಯತ್ನದಲ್ಲಿ (82 ಕೆಜಿ) ಹಾಗೂ ಕ್ಲೀನ್ ಅಂಡ್ ಜರ್ಕ್ನ ಮೊದಲ ಯತ್ನದಲ್ಲಿ ವಿಫಲರಾದರೂ, ಧೃತಿಗೆಡದೆ ತಕ್ಷಣವೇ ಚೇತರಿಸಿಕೊಂಡು ಮುಂದಿನ ಪ್ರಯತ್ನಗಳಲ್ಲಿ ದಾಖಲೆಯ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಚಿನ್ನದ ಪದಕವನ್ನು ಮೊದಲೇ ಖಚಿತಪಡಿಸಿಕೊಂಡಿದ್ದರಿಂದ, ಇನ್ನು ಎರಡು ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ದೃಷ್ಟಿಯಿಂದ ಗಾಯದ ಅಪಾಯವನ್ನು ತಪ್ಪಿಸಲು ಚಾನು ಕ್ಲೀನ್ ಅಂಡ್ ಜರ್ಕ್ನ ಮೂರನೇ ಪ್ರಯತ್ನವನ್ನು ಮಾಡದಿರಲು ನಿರ್ಧರಿಸಿದರು. ಆದಿತ್ಯವಾರ ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ ದೊರೆತ ಎರಡನೇ ಪದಕ ಇದಾಗಿದ್ದು, ಇದಕ್ಕೂ ಮುನ್ನ ಋಷಿಕಾಂತ್ ಸಿಂಗ್ ಬೆಳ್ಳಿ ಪದಕ ಗೆದ್ದಿದ್ದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದು ಮೀರಾಬಾಯಿ ಚಾನು ಅವರ ಒಟ್ಟಾರೆ ನಾಲ್ಕನೇ (3 ಚಿನ್ನ, 1 ಬೆಳ್ಳಿ) ಪದಕವಾಗಿದೆ. ಸದ್ಯ 1 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕ ಪಡೆದಿರುವ ಭಾರತ ಪದಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿದಿದೆ.