ವೇಟ್ಲಿಫ್ಟರ್ ಋಷಿಕಾಂತ್ ಸಿಂಗ್ಗೆ ಬೆಳ್ಳಿ ಪದಕ- ಸ್ನ್ಯಾಚ್ನಲ್ಲಿ ದಾಖಲೆ
ಗ್ಲ್ಯಾಸ್ಗೋ: ಕಾಮನ್ವೆಲ್ತ್ ಗೇಮ್ಸ್ನ( Commonwealth Games) ಪುರುಷರ 60 ಕೆಜಿ ತೂಕದ ವೇಟ್ಲಿಫ್ಟಿಂಗ್(Weightlifting) ವಿಭಾಗದಲ್ಲಿ ಭಾರತದ(India) ಚನಂಬಮ್ ಋಷಿಕಾಂತ್ ಸಿಂಗ್(Rishikanta Singh) ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದು ಪ್ರಸ್ತುತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಬೆಳ್ಳಿ ಪದಕವಾಗಿದೆ. ಮಣಿಪುರದ ಇಂಫಾಲ್ ಮೂಲದ ಋಷಿ

ಗ್ಲ್ಯಾಸ್ಗೋ: ಕಾಮನ್ವೆಲ್ತ್ ಗೇಮ್ಸ್ನ( Commonwealth Games) ಪುರುಷರ 60 ಕೆಜಿ ತೂಕದ ವೇಟ್ಲಿಫ್ಟಿಂಗ್(Weightlifting) ವಿಭಾಗದಲ್ಲಿ ಭಾರತದ(India) ಚನಂಬಮ್ ಋಷಿಕಾಂತ್ ಸಿಂಗ್(Rishikanta Singh) ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದು ಪ್ರಸ್ತುತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಬೆಳ್ಳಿ ಪದಕವಾಗಿದೆ. ಮಣಿಪುರದ ಇಂಫಾಲ್ ಮೂಲದ ಋಷಿಕಾಂತ್ ಸಿಂಗ್ ಸ್ನ್ಯಾಚ್ (Snatch) ವಿಭಾಗದಲ್ಲಿ 121 ಕೆಜಿ ತೂಕ ಎತ್ತುವ ಮೂಲಕ ನೂತನ ‘ಕಾಮನ್ವೆಲ್ತ್ ಗೇಮ್ಸ್ ದಾಖಲೆ’ ಬರೆದಿದ್ದಾರೆ. ಸ್ನ್ಯಾಚ್ (Snatch) ವಿಭಾಗದಲ್ಲಿ ಋಷಿಕಾಂತ್ 116 ಕೆಜಿ ತೂಕವನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಎತ್ತುವ ಮೂಲಕ ಸ್ಪರ್ಧೆಯಲ್ಲಿದ್ದ ಇತರ ಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದರು. ತಮ್ಮ ಎರಡನೇ ಪ್ರಯತ್ನದಲ್ಲಿ 119 ಕೆಜಿ ಎತ್ತಿದ ಅವರು, ಮೂರನೇ ಯಶಸ್ವಿ ಪ್ರಯತ್ನದಲ್ಲಿ 121 ಕೆಜಿ ತೂಕವನ್ನು ಎತ್ತಿದರು. ಈ 121 ಕೆಜಿ ತೂಕದ ಎತ್ತುವಿಕೆಯು ಋಷಿಕಾಂತ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಷ್ಟೇ ಅಲ್ಲದೆ, ನೂತನ ‘ಕಾಮನ್ವೆಲ್ತ್ ಗೇಮ್ಸ್ ಸ್ನ್ಯಾಚ್ ದಾಖಲೆ’ಯನ್ನೂ ನಿರ್ಮಿಸಿದರು. Heartiest congratulations to Rishikanta Singh Chanambam on winning the Silver Medal in Weightlifting Men’s 60kg. The entire nation is proud of you!#Cheer4Bharat #CWG2026 pic.twitter.com/Vl55NGafEu — Dr Mansukh Mandaviya (@mansukhmandviya) July 26, 2026 ಸ್ನ್ಯಾಚ್ನಲ್ಲಿ 121 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ (Clean & Jerk) ವಿಭಾಗದಲ್ಲಿ 143 ಕೆಜಿ ಸೇರಿದಂತೆ ಒಟ್ಟು 264 ಕೆಜಿ ತೂಕ ಎತ್ತಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ (Silver Medal) ತೃಪ್ತಿಪಟ್ಟುಕೊಂಡರು. ಮಲೇಷ್ಯಾದ ಮೊಹಮ್ಮದ್ ಅನೀಕ್ ಬಿನ್ ಕಾಸ್ಡಾನ್ ಒಟ್ಟು 273 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರೆ, ಕೀನ್ಯಾದ ಜೋಶುವಾ ಅಮುಂಗಾ ಎಂಬೋಯಾ ಕಂಸ್ಯ ಪದಕ ಪಡೆದರು. ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದಾಗಿದೆ. ಇದಕ್ಕೂ ಮೊದಲು ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದರು. ಒಂದು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.