ಶೀಘ್ರದಲ್ಲೇ ತನ್ನ ಮುಂದಿನ ಹೋರಾಟದ ಕಾರ್ಯತಂತ್ರವನ್ನು ಪ್ರಕಟಿಸುತ್ತೇವೆ: ದೀಪ್ಕೆ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರ ರಾಜೀನಾಮೆಯ ನಂತರ ಜಂತರ್ ಮಂತರ್ನಲ್ಲಿ(Jantar Mantar) ನಡೆಯುತ್ತಿದ್ದ 36 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ತನ್ನ ಮುಂದಿನ ಹೋರಾಟದ ಕಾರ್ಯತಂತ್ರವನ್ನು ಪ್ರಕಟಿಸುವುದಾಗಿ ತಿಳಿಸಿದೆ. ದೇಶಾದ್ಯಂತ ನಡೆದ ಪ್ರತಿಭಟನೆಗಳ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರ ರಾಜೀನಾಮೆಯ ನಂತರ ಜಂತರ್ ಮಂತರ್ನಲ್ಲಿ(Jantar Mantar) ನಡೆಯುತ್ತಿದ್ದ 36 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಹಿಂಪಡೆದಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಶೀಘ್ರದಲ್ಲೇ ತನ್ನ ಮುಂದಿನ ಹೋರಾಟದ ಕಾರ್ಯತಂತ್ರವನ್ನು ಪ್ರಕಟಿಸುವುದಾಗಿ ತಿಳಿಸಿದೆ. ದೇಶಾದ್ಯಂತ ನಡೆದ ಪ್ರತಿಭಟನೆಗಳ ಸಮಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಯಾವೊಬ್ಬ ವಿದ್ಯಾರ್ಥಿಯ ಮೇಲೆಯೂ ಪ್ರಕರಣ ದಾಖಲಾಗಬಾರದು ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ(Abhijeet Dipke) ಭಾನುವಾರ ಆಗ್ರಹಿಸಿದ್ದಾರೆ. #WATCH | Delhi: Cockroach Janta Party (CJP) founder Abhijeet Dipke says, “We will announce the future strategy soon. It only just ended yesterday; please give us a little time…” On the alleged paper leak in Punjab, he says, “We will address that too; we are currently planning… pic.twitter.com/GQUufQdpOD — ANI (@ANI) July 26, 2026 ಪಂಜಾಬ್ನಲ್ಲಿ ನಡೆದಿದೆ ಎನ್ನಲಾದ ಪೇಪರ್ ಸೋರಿಕೆ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ಪ್ರತಿಭಟನೆ ನಿನ್ನೆಯಷ್ಟೇ ಮುಗಿದಿದೆ, ಮುಂದಿನ ನಡೆಗಳ ಬಗ್ಗೆ ನಿರ್ಧರಿಸಲು ನಮಗೆ ಸ್ವಲ್ಪ ಸಮಯ ನೀಡಿ, ಶೀಘ್ರದಲ್ಲೇ ಹೊಸ ತಂತ್ರ ಘೋಷಿಸುತ್ತೇವೆ ಎಂದು ದಿಪ್ಕೆ ಹೇಳಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸುಧಾರಣೆಗೆ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ: ಮೋದಿ ಘೋಷಣೆ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ(JP Nadda) ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ನಡೆದ ಮೂರನೇ ಹಂತದ ಮಾತುಕತೆಯ ನಂತರ, ಸರ್ಕಾರ ತಮ್ಮ ಮುಖ್ಯ ಬೇಡಿಕೆಯನ್ನು ಈಡೇರಿಸಿದ್ದರಿಂದ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ. ಉಳಿದ ಸಮಸ್ಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪರಿಹರಿಸುವುದಾಗಿ ಸರ್ಕಾರ ಭರವಸೆ ನೀಡಿದೆ.