ಬೆಂಗಳೂರು: ಬಾಂಗ್ಲಾ ದಂಪತಿ ಮೇಲೆ ಹಲ್ಲೆ ನಡೆಸಿದ ವೈದ್ಯ ಬಂಧನ
ಬೆಂಗಳೂರು: ಹಾಡೋ ಸಿದ್ದಾಪುರ ಗ್ರಾಮದಲ್ಲಿ ವಾಸವಾಗಿರುವ ಬಾಂಗ್ಲಾದೇಶ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ವೈದ್ಯರೊಬ್ಬರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಸ್ರೀನಾ ಬಿಲಾಲ್ ಅವರ ದೂರು ಆಧರಿಸಿ ಸಾಯಿ ಕ್ಲಿನಿಕ್ ವೈದ್ಯ ಡಾ. ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಬಳಿಕ ಅವರಿಗೆ ಜಾ

ಬೆಂಗಳೂರು: ಹಾಡೋ ಸಿದ್ದಾಪುರ ಗ್ರಾಮದಲ್ಲಿ ವಾಸವಾಗಿರುವ ಬಾಂಗ್ಲಾದೇಶ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ವೈದ್ಯರೊಬ್ಬರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಸ್ರೀನಾ ಬಿಲಾಲ್ ಅವರ ದೂರು ಆಧರಿಸಿ ಸಾಯಿ ಕ್ಲಿನಿಕ್ ವೈದ್ಯ ಡಾ. ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಬಳಿಕ ಅವರಿಗೆ ಜಾಮೀನು ಮಂಜೂರಾಗಿದೆ.ಠಾಣಾ ವ್ಯಾಪ್ತಿಯ ಡಿ.ಎಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ಸಮೀಪದ ಹಾಡೋ ಸಿದ್ದಾಪುರ ಗ್ರಾಮದಲ್ಲಿ ನಸ್ರೀನಾ ಬಿಲಾಲ್ ಮತ್ತು ಮಹಮ್ಮದ್ ಬಿಲಾಲ್ ದಂಪತಿ ವಾಸವಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಮಹಮ್ಮದ್ ಬಿಲಾಲ್ ಚಾಲಕರಾಗಿದ್ದಾರೆ.ಸರ್ಜಾಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು ಅಡಗಟ್ಟಿ, ‘ನೀವು ಬಾಂಗ್ಲಾದೇಶದವರು’ ಎಂದು ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಅವರ ಪೌರತ್ವವನ್ನು ಪ್ರಶ್ನಿಸಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡು ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ‘ದಂಪತಿ ಬಾಂಗ್ಲಾದೇಶದವರಾಗಿದ್ದರೂ ಅವರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ, ವೈದ್ಯರು ಕಾನೂನು ಕೈಗೆ ತೆಗೆದುಕೊಳ್ಳುವ ಬದಲು ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ವೈಟ್ಫೀಲ್ಡ್ ಪ್ರದೇಶದಲ್ಲಿ ಅಕ್ರಮ ವಲಸಿಗರ ಬಗ್ಗೆ ಉಂಟಾದ ಭಾವೋದ್ವೇಗದಿಂದ ವೈದ್ಯರು ಈ ರೀತಿ ವರ್ತಿಸಿದ್ದಾರೆ. ಅನುಮಾನ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಪೊಲೀಸರು ತಿಳಿಸಿದ್ದಾರೆ.ದೂರು ನೀಡಿರುವ ದಂಪತಿಯ ದಾಖಲೆಗಳು ಹಾಗೂ ಹಿನ್ನೆಲೆಯ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.