ವಿಜಯ್ ನಟನೆಯ ‘ಜನ ನಾಯಗನ್’ ಮೂರು ದಿನದ ಗಳಿಕೆ ಎಷ್ಟು?
ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಜನ ನಾಯಗನ್ ಸಿನಿಮಾ ಬಿಡುಗಡೆಯಾದ 3 ದಿನಗಳಲ್ಲಿ ₹200 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಚಿತ್ರವು ಈವರೆಗೆ ಒಟ್ಟು ₹171.84 ಕೋಟಿ ಗಳಿಸಿದ್ದು, ವಿದೇಶದಲ್ಲಿ ₹63.50 ಕೋಟಿ ಗಳಿಸಿರುವುದಾಗಿ ವರದಿಯಾಗಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಮೊದಲ ದಿನ ಗಳಿಸಿದ್ದಿಷ್ಟು...ಜನ ನಾಯಗನ್ ಸೋರಿಕೆ ಉದ್ದೇಶಪೂರ್ವಕವಲ್

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಜನ ನಾಯಗನ್ ಸಿನಿಮಾ ಬಿಡುಗಡೆಯಾದ 3 ದಿನಗಳಲ್ಲಿ ₹200 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಚಿತ್ರವು ಈವರೆಗೆ ಒಟ್ಟು ₹171.84 ಕೋಟಿ ಗಳಿಸಿದ್ದು, ವಿದೇಶದಲ್ಲಿ ₹63.50 ಕೋಟಿ ಗಳಿಸಿರುವುದಾಗಿ ವರದಿಯಾಗಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಮೊದಲ ದಿನ ಗಳಿಸಿದ್ದಿಷ್ಟು...ಜನ ನಾಯಗನ್ ಸೋರಿಕೆ ಉದ್ದೇಶಪೂರ್ವಕವಲ್ಲ: ನಿರ್ದೇಶಕ ಎಚ್.ವಿನೋದ್ವಿಜಯ್ ನಟನೆಯ ‘ಜನ ನಾಯಗನ್’ ವಿಳಂಬ: ವಿತರಕರಿಗೆ ಮುಂಗಡ ಹಣ ಪಾವತಿಗೆ ಮುಂದಾದ KVNಜನ ನಾಯಗನ್ ಟಿಕೆಟ್ ಬುಕ್ಕಿಂಗ್ನಲ್ಲಿ ದಾಖಲೆಕಳೆದ 7 ತಿಂಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ‘ಜನ ನಾಯಗನ್’ ಅಂತಿಮವಾಗಿ ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಗೊಂಡಿತ್ತು. ಸಿನಿಮಾದ ಟಿಕೆಟ್ ಬೆಲೆ ₹2,500ರವರೆಗೂ ಇದ್ದವು. ಜನ ನಾಯಗನ್ ಸಿನಿಮಾ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಹಿಳಾ ಸಬಲೀಕರಣದಂತಹ ಜ್ವಲಂತ ಸಮಸ್ಯೆಗಳ ಕುರಿತು ಚಿತ್ರಿಸುತ್ತದೆ ಎಂದು ವಿಮರ್ಶಕರು ವಿಮರ್ಶಿಸಿದ್ದಾರೆ. ಯಾವ ದಿನ ಎಷ್ಟು ಗಳಿಸಿದೆ...ಮೊದಲ ದಿನ – ₹78 ಕೋಟಿ 2ನೇ ದಿನ– ₹34.23 3ನೇ ದಿನ– ₹28.50 ಕೋಟಿ ಹಾಗೂ ವಿದೇಶದಲ್ಲಿ ₹20 ಕೋಟಿ ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.ಬಿಡುಗಡೆಗೊಂಡ 3 ದಿನಗಳಲ್ಲಿ ಜನ ನಾಯಗನ್ ದೇಶದ ಒಳಗೆ ₹108.34 ಕೋಟಿ ಗಳಿಸಿದೆ. ಈ ಹಿಂದೆ ದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ ₹280 ಕೋಟಿಗೂ ಹೆಚ್ಚು ಗಳಿಸಿತ್ತು. ಸಿನಿಮಾದ ಒಟ್ಟಾರೆ ಗಳಿಕೆ ₹600 ಕೋಟಿ. ಎಚ್. ವಿನೋತ್ ನಿರ್ದೇಶನದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದ ಜನ ನಾಯಗನ್ ಸಿನಿಮಾದಲ್ಲಿ ವಿಜಯ್ ಜೊತೆಗೆ ಮಮಿತಾ ಬೈಜು ಮತ್ತು ಬಾಬಿ ಡಿಯೋಲ್ ನಟಿಸಿದ್ದಾರೆ.