ತುಮಕೂರು: ಮಾರಕಾಸ್ತ್ರಗಳಿಂದ ಕೊಚ್ಚಿ ವೀರಣ್ಣ ಅಲಿಯಾಸ್ ಮಲ್ಲ ಕೊಲೆ
ತುಮಕೂರು: ನಗರ ಹೊರವಲಯದ ಬೆಳಗುಂಬ ಬಳಿ ಭಾನುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ವೀರಣ್ಣ ಅಲಿಯಾಸ್ ಮಲ್ಲ (38) ಎಂಬುವವರನ್ನು ಕೊಲೆ ಮಾಡಲಾಗಿದೆ.ಮಲ್ಲ ಬೆಳಗುಂಬ ನಿವಾಸಿ. ಇವರು ವಾಸವಿದ್ದ ಮನೆಯ ಸ್ವಲ್ಪ ದೂರದಲ್ಲಿಯೇ ಇರುವ ಕೆಫೆಯ ಹತ್ತಿರದ ರಸ್ತೆ ಪಕ್ಕದಲ್ಲಿ ನಾಲ್ಕೈದು ಜನ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಸ
ತುಮಕೂರು: ನಗರ ಹೊರವಲಯದ ಬೆಳಗುಂಬ ಬಳಿ ಭಾನುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ವೀರಣ್ಣ ಅಲಿಯಾಸ್ ಮಲ್ಲ (38) ಎಂಬುವವರನ್ನು ಕೊಲೆ ಮಾಡಲಾಗಿದೆ.ಮಲ್ಲ ಬೆಳಗುಂಬ ನಿವಾಸಿ. ಇವರು ವಾಸವಿದ್ದ ಮನೆಯ ಸ್ವಲ್ಪ ದೂರದಲ್ಲಿಯೇ ಇರುವ ಕೆಫೆಯ ಹತ್ತಿರದ ರಸ್ತೆ ಪಕ್ಕದಲ್ಲಿ ನಾಲ್ಕೈದು ಜನ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದಾಗ ದುಷ್ಕರ್ಮಿಗಳು ಬೈಕ್ ನಿಂದ ಡಿಕ್ಕಿ ಹೊಡೆದಿದ್ದಾರೆ. ನಂತರ ಕಾರಿನಲ್ಲಿ ಬಂದವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್ ಪಿ ಕೆ.ಆರ್.ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read the complete story at Prajavani