ಬರದಿಂದ ಕಷ್ಟಕರ ಸಮಯ ಎದುರಿಸ್ತಿದ್ದೇವೆ, ಕೇಂದ್ರ ಈಗಲಾದ್ರೂ ನಮ್ಮೆಲ್ಲರಿಗೆ ನೆರವಾಗಬೇಕು: ಸಿಎಂ ಡಿಕೆಶಿ
– ಆಗಸ್ಟ್ 13 ರಿಂದ ವಿಧಾನ ಮಂಡಲ ಅಧಿವೇಶನ ಬೆಂಗಳೂರು: ಬರ ಪರಿಸ್ಥಿತಿಯಿಂದ (Drought Situation) ನಾವು ಅತ್ಯಂತ ಕಷ್ಟಕರ ಸಮಯ ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕನಿಷ್ಠ ಈ ಸಂದರ್ಭದಲ್ಲಾದ್ರೂ ನಮ್ಮೆಲ್ಲರಿಗೆ ನೆರವಾಗಬೇಕು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಮನವಿ ಮಾಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಬೆಂಗಳೂರಿನಲ್ಲಿ (Bengaluru

– ಆಗಸ್ಟ್ 13 ರಿಂದ ವಿಧಾನ ಮಂಡಲ ಅಧಿವೇಶನ ಬೆಂಗಳೂರು: ಬರ ಪರಿಸ್ಥಿತಿಯಿಂದ (Drought Situation) ನಾವು ಅತ್ಯಂತ ಕಷ್ಟಕರ ಸಮಯ ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕನಿಷ್ಠ ಈ ಸಂದರ್ಭದಲ್ಲಾದ್ರೂ ನಮ್ಮೆಲ್ಲರಿಗೆ ನೆರವಾಗಬೇಕು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಮನವಿ ಮಾಡಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಎಲ್ಲಾ ಸಂಸದರ ಉನ್ನತ ಮಟ್ಟದ ಸಭೆ ಕರೆದಿದ್ದೀನಿ. ಸಭೆಯಲ್ಲಿ ಬರದ ವಿಚಾರ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು. ಸುಮಾರು ಏಳು ಅಥವಾ ಎಂಟು ಸಚಿವರು ದೆಹಲಿಯಲ್ಲಿ (Delhi) ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ವಿಚಾರಗಳನ್ನ ಕೇಂದ್ರ ಸರ್ಕಾರದ ಮುಂದಿಡಲು ನಾವು ಬಯಸಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಏಕೆಂದ್ರೆ ಬರ ಪರಿಸ್ಥಿತಿಯಿಂದ ನಾವು ಅತ್ಯಂತ ಕಷ್ಟಕರ ಸಮಯವನ್ನ ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಕನಿಷ್ಠ ಈ ಸಂದರ್ಭದಲ್ಲಾದ್ರೂ ನಮ್ಮೆಲ್ಲರಿಗೂ ನೆರವಾಗಬೇಕು. ಅದಕ್ಕಾಗಿಯೇ ನಾನು ನಮ್ಮ ಸಂಸದರನ್ನ ಸಭೆಗೆ ಕರೆದಿದ್ದೇನೆ. ನಂತರ ಎಲ್ಲಾ ಪಕ್ಷಗಳ ನಾಯಕರನ್ನೂ ಭೇಟಿ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು. ಬರ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕಿದೆ. ಇದರೊಂದಿಗೆ ರಾಜ್ಯದಲ್ಲಿನ ಜಲಾಶಯಗಳ ಪರಿಸ್ಥಿತಿ ಹಾಗೂ ಬಾಕಿಯಿರುವ ಪ್ರಾಜೆಕ್ಟ್ಗಳ ಬಗ್ಗೆಯೂ ತಿಳಿಸಿಕೊಡಬೇಕಿದೆ. ಆದ್ದರಿಂದ ದೆಹಲಿಯಲ್ಲಿ ಸಭೆ ಕರೆದಿದ್ದೇನೆ ಎಂದು ಹೇಳಿದರು.