SBI ಮ್ಯಾನೇಜರ್ ಮೇಲೆ ಮಾಜಿ ಕೇಂದ್ರ ಸಚಿವ ಅಳಗಿರಿ ಪುತ್ರಿಯಿಂದ ಹಲ್ಲೆ – ವಿಡಿಯೋ ವೈರಲ್
ಚೆನ್ನೈ: ಇಲ್ಲಿನ (Chennai) ಎಸ್ಬಿಐ ಬ್ಯಾಂಕ್ (State Bank of India) ಮ್ಯಾನೇಜರ್ ಮೇಲೆ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ (MK Alagiri) ಅವರ ಪುತ್ರಿ ಕಾಯಲ್ವಿಳಿ ಹಲ್ಲೆ ನಡೆಸಿದ್ದಾರೆ. ಕಾಯಲ್ವಿಳಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ಯಾಂಕ್ನಲ್ಲಿ ಮ್ಯಾನೇಜರ್ ಜೊತೆ

ಚೆನ್ನೈ: ಇಲ್ಲಿನ (Chennai) ಎಸ್ಬಿಐ ಬ್ಯಾಂಕ್ (State Bank of India) ಮ್ಯಾನೇಜರ್ ಮೇಲೆ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ (MK Alagiri) ಅವರ ಪುತ್ರಿ ಕಾಯಲ್ವಿಳಿ ಹಲ್ಲೆ ನಡೆಸಿದ್ದಾರೆ. ಕಾಯಲ್ವಿಳಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ಯಾಂಕ್ನಲ್ಲಿ ಮ್ಯಾನೇಜರ್ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಕಾಯಲ್ವಿಳಿ ಇದ್ದಕ್ಕಿದ್ದಂತೆ ಎದ್ದು ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರನ್ನು ವ್ಯಕ್ತಿಯೊಬ್ಬರು ತಡೆಯಲು ಯತ್ನಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜಮಖಂಡಿಯಲ್ಲಿ ನಿಲ್ಲಿಸಿದ್ದ ಕಾರು ಸ್ಫೋಟ – ಛಿದ್ರ ಛಿದ್ರಗೊಂಡ ಮಹೀಂದ್ರಾ ಎಕ್ಸ್ಯುವಿ 300 ಎಸ್ಬಿಐ ಅಡ್ಯಾರ್ ಶಾಖೆಯ ಬ್ಯಾಂಕ್ ಮ್ಯಾನೇಜರ್, ಕಾಯಲ್ವಿಳಿ ಅವರ ಬಳಿ ಅವರ ಒಡೆತನದ ವಾಣಿಜ್ಯ ಕಟ್ಟಡದಲ್ಲಿ ಹಾಳಾದ ಲಿಫ್ಟ್ ಸರಿಪಡಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮ್ಯಾನೇಜರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: 42 ಲಕ್ಷ ಮೌಲ್ಯದ ಚಿನ್ನ, ನಗದು ಕಳ್ಳತನ; 68 ಕೇಸ್ಗಳ ಖತರ್ನಾಕ್ ಸೇರಿ 3 ಅಂತರರಾಜ್ಯ ಕಳ್ಳರ ಬಂಧನ