ಪ್ರತಿಭಟನೆ ಆರಂಭವಾದ ಮೊದಲ ದಿನವೇ ಪ್ರಧಾನ್ ರಾಜೀನಾಮೆ ನೀಡಲು ಮುಂದಾಗಿದ್ದರು: ಕೈಲಾಶ್ ವಿಜಯವರ್ಗೀಯ
ಇಂದೋರ್: ವಿದ್ಯಾರ್ಥಿಗಳ ಚಳವಳಿ ಪ್ರಾರಂಭವಾದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಮಧ್ಯಪ್ರದೇಶ ಸರ್ಕಾರದ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ(Kailash Vijayvargiya) ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ಪಕ್ಷದ ಅಧ್ಯಕ್ಷರ ಬಳಿ ನಾನ

ಇಂದೋರ್: ವಿದ್ಯಾರ್ಥಿಗಳ ಚಳವಳಿ ಪ್ರಾರಂಭವಾದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಮಧ್ಯಪ್ರದೇಶ ಸರ್ಕಾರದ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ(Kailash Vijayvargiya) ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ಪಕ್ಷದ ಅಧ್ಯಕ್ಷರ ಬಳಿ ನಾನು ರಾಜೀನಾಮೆ ನೀಡಬೇಕು ಎಂದು ನಿಮಗನಿಸಿದರೆ, ನೀಡಲು ಸಿದ್ಧ ಎಂದು ಹೇಳಿದ್ದರು. ಆದರೆ ಆಗ ಪಕ್ಷ ಅದನ್ನು ನಿರಾಕರಿಸಿತ್ತು ಎಂದು ತಿಳಿಸಿದರು. ಪಕ್ಷವು ರಾಜೀನಾಮೆ ನೀಡಬೇಕೆಂದು ನಿರ್ಧರಿಸುವ ಸಂದರ್ಭಗಳು ಬಂದಾಗ, ಅವರು ಕ್ಷಣಾರ್ಧದಲ್ಲಿ ರಾಜೀನಾಮೆ ನೀಡಿದರು ಎಂದು ಹೇಳುವ ಮೂಲಕ ಪ್ರಧಾನ್ ಅವರ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು. ಇದನ್ನೂ ಓದಿ: `ನೀಟ್’ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ – ಯುವತಿ ವಿರುದ್ಧ FIR ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಡೆದಂತೆ ಭಾರತದಲ್ಲೂ ಹಿಂಸಾಚಾರ ಹರಡಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದ ವಿದೇಶಿ ಶಕ್ತಿಗಳ ಸಂಚನ್ನು ಪ್ರಧಾನ್ ಅವರ ರಾಜೀನಾಮೆ ವಿಫಲಗೊಳಿಸಿದೆ ಎಂದು ವಿಜಯವರ್ಗೀಯ ಹೇಳಿದ್ದಾರೆ. ವಿದ್ಯಾರ್ಥಿಗಳು ಆರಂಭಿಸಿದ ಈ ಪ್ರತಿಭಟನೆಯನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದವು. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ನಿರಾಶೆಗೊಂಡಿದ್ದ ವಿಪಕ್ಷಗಳಿಗೆ ಈ ಸಿಜೆಪಿ(CJP) ಚಳವಳಿಯಲ್ಲಿ ಭರವಸೆಯ ಕಿರಣ ಕಂಡಿತ್ತು ಎಂದು ಅವರು ವ್ಯಂಗ್ಯವಾಡಿದರು.