ನೋಟಿಸ್ ನೀಡಲು ಮುಂದಾದ ಪೊಲೀಸರು: ನಿರಾಕರಿಸಿದ ಸಿ.ಟಿ.ರವಿ,ಕಾರ್ಯಕರ್ತರ ಪ್ರತಿಭಟನೆ
ಚಿಕ್ಕಮಗಳೂರು: ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ ಎಂದು ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮುಂದಾದರು. ಆದರೆ, ನೋಟಿಸ್ ಪಡೆಯಲು ನಿರಾಕರಿಸಿದ ಸಿ.ಟಿ.ರವಿ ಮನೆಗೆ ಪ್ರತಿಯನ್ನು ಪೊಲೀಸರು ಅಂಟಿಸಿದರು.ಜಮಿಯಾ ಸಮಿತಿ ಅಧ್ಯಕ್ಷ ಮುದಾಸಿರ್ ಪಾಷ ನೀಡಿದ್ದ ದೂರು ಆಧರ

ಚಿಕ್ಕಮಗಳೂರು: ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ ಎಂದು ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮುಂದಾದರು. ಆದರೆ, ನೋಟಿಸ್ ಪಡೆಯಲು ನಿರಾಕರಿಸಿದ ಸಿ.ಟಿ.ರವಿ ಮನೆಗೆ ಪ್ರತಿಯನ್ನು ಪೊಲೀಸರು ಅಂಟಿಸಿದರು.ಜಮಿಯಾ ಸಮಿತಿ ಅಧ್ಯಕ್ಷ ಮುದಾಸಿರ್ ಪಾಷ ನೀಡಿದ್ದ ದೂರು ಆಧರಿಸಿ ನಗರ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ. ಭಾನುವಾರ ಸಿ.ಟಿ. ರವಿ ಮನೆಗೆ ತೆರಳಿ ನೋಟಿಸ್ ನೀಡಲು ಪೊಲೀಸ್ ಅಧಿಕಾರಿಗಳು ಮುಂದಾದರು. 'ನಾನು ಯಾವ ಧರ್ಮವನ್ನೂ ಅವಹೇಳನ ಮಾಡಿಲ್ಲ. ಮುಲ್ಲಾ ಎಂದರೆ ಮುಸ್ಲಿಂ ಎಂದು ಅರ್ಥವೇ, ದೆಹಲಿಯಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಾಕಲು ಬಂದಿದ್ದ ಮುಲ್ಲಾನ ಬಗ್ಗೆ ಮಾತನಾಡಿದ್ದೀನಿ. ಅವನ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಎಂದು ಹೇಳಿದ್ದೀನಿ, ಈಗಲೂ ಹೇಳುತ್ತೇನೆ, ನಾಳೆಯೂ ಹೇಳುತ್ತೇನೆ' ಎಂದು ಸಿ.ಟಿ.ರವಿ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು'ನನ್ನ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಅವಹೇಳನ ಎಲ್ಲಿದೆ ತೋರಿಸಿ, ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿ ಬಂಧಿಸುತ್ತೀರಾ, ದೂರು ಕೊಟ್ಟವನಿಗೂ ಬೆಂಕಿ ಹಾಕಲು ಬಂದವನಿಗೂ ಏನು ಸಂಬಂಧ' ಎಂದು ಪ್ರಶ್ನಿಸಿದರು.ನೋಟಿಸ್ ಪ್ರತಿಯನ್ನು ಪೊಲೀಸರು ಸಿ.ಟಿ.ರವಿ ಮನೆಯ ಗೇಟ್ ಪಕ್ಕದ ಗೋಡೆಗೆ ಅಂಟಿಸಿದರು. ಕಾರ್ಯಕರ್ತರು ತಕ್ಷಣವೇ ಅದನ್ನು ಹರಿದು ಬಿಸಾಡಿದರು. ಮನೆಯ ಮುಂದೆಯೇ ಕಾರ್ಯಕರ್ತರು ಧರಣಿ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.'ಸೋಮವಾರವೇ ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮ ಇರುವುದರಿಂದ ಬೇರೆ ದಿನಾಂಕ ಕೇಳುತ್ತಿದ್ದೇವೆ. ಆದರೆ, ಪೊಲೀಸರು ದಿನಾಂಕ ಬದಲಿಸುತ್ತಿಲ್ಲ' ಎಂದು ಸಿ.ಟಿ. ರವಿ ಪರ ವಕೀಲರು ಹೇಳಿದರು.ಭಾರತದ ವಿರೋಧಿ ಶಕ್ತಿಗಳಿಂದ ಸಂಸತ್ ಭವನ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು.'ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಆತ ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾನೆ ಎಂದರೆ ಏನರ್ಥ' ಎಂದು ಪ್ರಶ್ನೆ ಮಾಡಿದ್ದರು.ಪಕ್ಷಾಂತರದಿಂದ ಆತಂಕ ಪಡುವ ಅಗತ್ಯವಿಲ್ಲ: ಸಿ.ಟಿ. ರವಿಖರ್ಗೆ ವಿರುದ್ಧ ಅವಹೇಳನ ಮಾಡಿಲ್ಲ: ಸಿ.ಟಿ. ರವಿ