ಜನರನ್ನು ಅಲೆದಾಡಿಸಬೇಡಿ: ನಿರ್ಮಲಾ
ಮುಂಬೈ: ‘ಆದಾಯ ತೆರಿಗೆ ಇಲಾಖೆಯು ಸಾಮಾನ್ಯ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಬಾರದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.ಸರ್ಕಾರದ ಇಲಾಖೆಗಳ ತಾತ್ಸಾರದಿಂದ, ಸರ್ಕಾರದ ಸ್ಥಳಗಳು ಅತಿಕ್ರಮಣಕ್ಕೆ ಗುರಿಯಾಗುತ್ತಿವೆ. ಹೀಗಾಗಿ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಅಗತ್ಯವಿದೆ ಎಂ

ಮುಂಬೈ: ‘ಆದಾಯ ತೆರಿಗೆ ಇಲಾಖೆಯು ಸಾಮಾನ್ಯ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಬಾರದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.ಸರ್ಕಾರದ ಇಲಾಖೆಗಳ ತಾತ್ಸಾರದಿಂದ, ಸರ್ಕಾರದ ಸ್ಥಳಗಳು ಅತಿಕ್ರಮಣಕ್ಕೆ ಗುರಿಯಾಗುತ್ತಿವೆ. ಹೀಗಾಗಿ ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಅಗತ್ಯವಿದೆ ಎಂದು ಹೇಳಿದ್ದಾರೆ.ಮುಂಬೈನಲ್ಲಿನ ನರೀಮನ್ ಪಾಯಿಂಟ್ನಲ್ಲಿ ಕಟ್ಟಡ ನಿರ್ಮಿಸಲು ಅನುಮತಿ ಪಡೆಯುವಲ್ಲಿ ಇಲಾಖೆ ಎದುರಿಸಿದ ಸವಾಲುಗಳನ್ನು ಸಚಿವರು ಇದೇ ವೇಳೆ ಉಲ್ಲೇಖಿಸಿದರು.‘ಒಬ್ಬ ಸಾಮಾನ್ಯ ನಾಗರಿಕ ನಿಮ್ಮ ಬಳಿಗೆ ಬಂದಾಗ ಅವನನ್ನು ಅರ್ಥಮಾಡಿಕೊಳ್ಳಿ. ಅಧಿಕಾರ ಇದೆ ಎಂದು ಅವರನ್ನು ಅಲೆದಾಡಿಸಬೇಡಿ, ಅವರಿಗಾಗಿ ಕೆಲಸ ಮಾಡಿ’ ಎಂದು ಹೇಳಿದ್ದಾರೆ.ನಿಯಮಗಳನ್ನು ಉಲ್ಲಂಘಿಸುವಂತೆ ಅಥವಾ ಬೇರೆ ಮಾರ್ಗದಲ್ಲಿ ಜನರ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಹೇಳುತ್ತಿಲ್ಲ. ನಾಗರಿಕರು ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಬಹಳಷ್ಟು ಶ್ರಮ ಪಡುವಂತಾಗಿದೆ ಎಂದು ವಿಷಾದಿಸಿದರು.Highlights - null
Read the complete story at Prajavani