ಆಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ – ಕಳಚಿದ ಜಲೀಲ್ ಬಾಬಾನ ಸಮಾಜಸೇವೆ ಮುಖವಾಡ
– ಮೂವರ ಬಂಧನ ಆಗ್ತಿದ್ದಂತೆ ʻಬೆಳ್ತಂಗಡಿ ಹೀರೋʼ ಪರಾರಿ ಮಂಗಳೂರು: ಸಮಾಜ ಸೇವೆಯ ಹೆಸರಿನಲ್ಲಿ ಬೆಳ್ತಂಗಡಿಯ (Belthangady) ಹೀರೋ ಎಂಬಂತೆ ಹೆಸರು ಮಾಡಿದ್ದ ಆಂಬುಲೆನ್ಸ್ (Ambulance) ಚಾಲಕ ಜಲೀಲ್ ಬಾಬಾನ ಕರಾಳ ಡ್ರಗ್ಸ್ ದಂಧೆ ಬೆಳಕಿಗೆ ಬಂದಿದೆ. ಜಲೀಲ್ ಬಾಬಾ ಎಂಬಾತ ಆಂಬುಲೆನ್ಸ್ ಇಟ್ಟುಕೊಂಡು, ಸಮಾಜ ಸೇವೆಯ ಮುಖವಾಡ ಧರಿಸಿದ್ದ. ಆತನನ್ನು ಜನ ಬೆಳ್ತಂಗಡಿಯ ಹೀರೋ

– ಮೂವರ ಬಂಧನ ಆಗ್ತಿದ್ದಂತೆ ʻಬೆಳ್ತಂಗಡಿ ಹೀರೋʼ ಪರಾರಿ ಮಂಗಳೂರು: ಸಮಾಜ ಸೇವೆಯ ಹೆಸರಿನಲ್ಲಿ ಬೆಳ್ತಂಗಡಿಯ (Belthangady) ಹೀರೋ ಎಂಬಂತೆ ಹೆಸರು ಮಾಡಿದ್ದ ಆಂಬುಲೆನ್ಸ್ (Ambulance) ಚಾಲಕ ಜಲೀಲ್ ಬಾಬಾನ ಕರಾಳ ಡ್ರಗ್ಸ್ ದಂಧೆ ಬೆಳಕಿಗೆ ಬಂದಿದೆ. ಜಲೀಲ್ ಬಾಬಾ ಎಂಬಾತ ಆಂಬುಲೆನ್ಸ್ ಇಟ್ಟುಕೊಂಡು, ಸಮಾಜ ಸೇವೆಯ ಮುಖವಾಡ ಧರಿಸಿದ್ದ. ಆತನನ್ನು ಜನ ಬೆಳ್ತಂಗಡಿಯ ಹೀರೋ ಎಂದು ಕರೆಯುತ್ತಿದ್ದರು. ಆದರೆ ಆಂಬುಲೆನ್ಸ್ನಲ್ಲಿ ಆತ ಮಾದಕವಸ್ತು ಸರಬರಾಜು ಮಾಡುತ್ತಿರುವುದು ಈಗ ಬಹಿರಂಗವಾಗಿದೆ. ಇತ್ತೀಚೆಗೆ ನಡೆದ ಪ್ರಕರಣವೊಂದರಿಂದ ಈತನ ಕಳ್ಳ ದಂಧೆ ಬಯಲಾಗಿದೆ. ಇದನ್ನೂ ಓದಿ: ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಹಸುಗೂಸಿನ ಮುಂದೆಯೇ ನೇಣಿಗೆ ಕೊರಳೊಡ್ಡಿದ ಮಹಿಳೆ ಇತ್ತೀಚೆಗೆ ಮಂಗಳೂರು (Mangaluru) ಪೊಲೀಸರು ಬಾಗಲಕೋಟೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, 5 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಜಲೀಲ್ ಬಾಬಾ ಕೂಡ ಆರೋಪಿಯಾಗಿದ್ದಾನೆ. ಮೂವರ ಬಂಧನವಾಗುತ್ತಿದ್ದಂತೆ ಆಂಬುಲೆನ್ಸ್ ಸಮೇತ ಜಲೀಲ್ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿ ಜಲೀಲ್ಗಾಗಿ ಸಿಸಿಬಿ ಪೊಲೀಸರು (CCB Police) ಬಲೆ ಬೀಸಿದ್ದಾರೆ. ಇದನ್ನೂ ಓದಿ: 5,000 ರೂ. ಲಂಚ ಪಡೆದ ಆರೋಪ – ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್