NTAನಲ್ಲಿ 15 ಹುದ್ದೆಗಳು ಖಾಲಿ ಇವೆ: ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ...
ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET), ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಮತ್ತು ಜಂಟಿ ಪ್ರವೇಶ ಪರೀಕ್ಷೆಗಳು (JEE) ಸೇರಿದಂತೆ ಭಾರತದ ಕೆಲವು ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ತನ್ನ 39 ಖಾಯಂ ಹುದ್ದೆಗಳ ಪೈಕಿ 15 ಖಾಲಿ ಇರುವುದಾಗಿ ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET), ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಮತ್ತು ಜಂಟಿ ಪ್ರವೇಶ ಪರೀಕ್ಷೆಗಳು (JEE) ಸೇರಿದಂತೆ ಭಾರತದ ಕೆಲವು ಪ್ರಮುಖ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ತನ್ನ 39 ಖಾಯಂ ಹುದ್ದೆಗಳ ಪೈಕಿ 15 ಖಾಲಿ ಇರುವುದಾಗಿ ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.ರಾಜ್ಯಸಭಾ ಸಂಸದ ವಿ. ಶಿವದಾಸನ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್, 39 ಶಾಶ್ವತ ಹುದ್ದೆಗಳಲ್ಲಿ 24 ಹುದ್ದೆಗಳನ್ನು ಡೆಪ್ಯುಟೇಶನ್ ಮೂಲಕ ಭರ್ತಿ ಮಾಡಲಾಗಿದೆ. ಉಳಿದ 15 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.ಏಜೆನ್ಸಿಯು ಪ್ರಸ್ತುತ 73 ಗುತ್ತಿಗೆ ನೌಕರರು ಮತ್ತು 124 ಹೊರಗುತ್ತಿಗೆ ಸಿಬ್ಬಂದಿಯನ್ನು ಹೊಂದಿದೆ ಎಂದು ಸಚಿವಾಲಯ ಸಂಸತ್ತಿಗೆ ತಿಳಿಸಿದೆ. NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ NTAಯ ನವೀಕರಣ ಪರಿಶೀಲನೆಯ ನಡುವೆ ಸರ್ಕಾರದಿಂದ ಈ ಪ್ರತಿಕ್ರಿಯೆ ಬಂದಿದೆ.ಸಚಿವಾಲಯದ ಮಾಹಿತಿ ಪ್ರಕಾರ, ಎನ್ಟಿಎ ಮಹಾನಿರ್ದೇಶಕರಿಂದ ಹಿಡಿದು ಹಿರಿಯ ಸೂಪರಿಂಟೆಂಡೆಂಟ್ಗಳವರೆಗೆ ವಿವಿಧ ಹಂತಗಳಲ್ಲಿ 39 ಶಾಶ್ವತ ಹುದ್ದೆಗಳನ್ನು ಹೊಂದಿದೆ. ಈ ಹುದ್ದೆಗಳನ್ನು ಡೆಪ್ಯುಟೇಶನ್ ಮೂಲಕ ಭರ್ತಿ ಮಾಡಲಾಗುತ್ತದೆ.ಏಜೆನ್ಸಿಯನ್ನು ಬಲಪಡಿಸಲು ಕೇಂದ್ರ ಸಿಬ್ಬಂದಿ ಯೋಜನೆಯಡಿಯಲ್ಲಿ ನಿರ್ದೇಶಕರ ಮಟ್ಟದಲ್ಲಿ 8 ಮತ್ತು ಜಂಟಿ ನಿರ್ದೇಶಕ ಮಟ್ಟದಲ್ಲಿ ಎಂಟು ಸೇರಿದಂತೆ ಒಟ್ಟು 16 ಹೆಚ್ಚುವರಿ ಹುದ್ದೆಗಳನ್ನು ಸಹ ರಚಿಸಲಾಗಿದೆ. ಖಾಯಂ ಸಿಬ್ಬಂದಿಯ ಹೊರತಾಗಿ, NTA ಸಲಹೆಗಾರರು, ಸಾಫ್ಟ್ವೇರ್ ಡೆವಲಪರ್, ಕಚೇರಿ ಸಹಾಯಕರು ಮತ್ತು ಯುವ ವೃತ್ತಿಪರರು ಸೇರಿದಂತೆ 73 ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಜೊತೆಗೆ ಡೇಟಾ ವಿಶ್ಲೇಷಕರು, ಸಲಹೆಗಾರರು, ಕಾನೂನು ಸಹವರ್ತಿಗಳು ಮತ್ತು ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು124 ಹೊರಗುತ್ತಿಗೆ ಸಿಬ್ಬಂದಿಯನ್ನು ಸಹ ನೇಮಿಸಿದೆ ಎಂದು ರಾಜ್ಯಸಭೆಗೆ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್ ತಿಳಿಸಿದ್ದಾರೆ.