ಸ್ವತಂತ್ರ ಭಾರತದಲ್ಲಿ ಸಚಿವರುಗಳ ರಾಜೀನಾಮೆ: ಯಾರು, ಯಾವ ಕಾರಣಕ್ಕೆ?
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಅನೇಕ ಸಂದರ್ಭದಲ್ಲಿ ವಿವಿಧ ಕಾರಣಗಳಿಗೆ ಆಡಳಿತಾರೂಢ ಪ್ರಕ್ಷದಲ್ಲಿ ಸಚಿವರಾಗಿದ್ದವರು ತಮ್ಮ ಅಧಿಕಾರದ ಅವಧಿ ಮುಗಿಯುವುದಕ್ಕೆ ಮು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿಯ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಅನೇಕ ಸಂದರ್ಭದಲ್ಲಿ ವಿವಿಧ ಕಾರಣಗಳಿಗೆ ಆಡಳಿತಾರೂಢ ಪ್ರಕ್ಷದಲ್ಲಿ ಸಚಿವರಾಗಿದ್ದವರು ತಮ್ಮ ಅಧಿಕಾರದ ಅವಧಿ ಮುಗಿಯುವುದಕ್ಕೆ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಯಾವೆಲ್ಲಾ ಸಚಿವರು ಯಾವ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದನ್ನು ನೋಡೋಣ. ಭಾರತದ ರಾಜಕೀಯ ಇತಿಹಾಸದಲ್ಲಿ ಕೇಂದ್ರ ಸಚಿವರುಗಳು ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ಪದತ್ಯಾಗ ಮಾಡಿದ ಹಲವು ಪ್ರಮುಖ ನಿದರ್ಶನಗಳಿವೆ. ಸಾರ್ವಜನಿಕ ಹೊಣೆಗಾರಿಕೆ, ಭ್ರಷ್ಟಾಚಾರದ ಆರೋಪ, ರಾಜಕೀಯ ವಿಷಯಗಳ ಭಿನ್ನಾಭಿಪ್ರಾಯ ಮತ್ತು ಅಪಘಾತಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಪ್ರಮುಖ ಕೇಂದ್ರ ಸಚಿವರುಗಳ ವಿವರ ನೋಡೋಣ.ನೈತಿಕ ಹೊಣೆಗಾರಿಕೆ ಮತ್ತು ಆಡಳಿತಾತ್ಮಕ ವೈಫಲ್ಯಗಳುಲಾಲ್ ಬಹದ್ದೂರ್ ಶಾಸ್ತ್ರಿ (ರೈಲ್ವೆ ಸಚಿವ, 1956): ತಮಿಳುನಾಡಿನ ಅರಿಯಲೂರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 150ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಾಗ, ಅದರ ಸಂಪೂರ್ಣ ನೈತಿಕ ಹೊಣೆ ಹೊತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ನೈತಿಕ ಹೊಣೆಗಾರಿಕೆಗೆ ಅತ್ಯಂತ ಶ್ರೇಷ್ಠ ಉದಾಹರಣೆಯಾಗಿ ಉಳಿದಿದೆ.ನಿತೀಶ್ ಕುಮಾರ್ (ರೈಲ್ವೆ ಸಚಿವ, 1999):1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಶ್ಚಿಮ ಬಂಗಾಳದ ಗೈಸಲ್ ಬಳಿ ನಡೆದ ಭೀಕರ ರೈಲು ಅಪಘಾದಲ್ಲಿ ಸುಮಾರು 290 ಜನರ ಸಾವಿಗೀಡಾಗಿದ್ದರು. ಇದರ ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದರು.ಶಿವ್ರಾಜ್ ಪಾಟೀಲ್ (ಗೃಹ ಸಚಿವ, 2008): ಮುಂಬೈನಲ್ಲಿ ನಡೆದ 26/11 ಭೀಕರ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಭದ್ರತಾ ವೈಫಲ್ಯ ಉಂಟಾದ ಹಿನ್ನೆಲೆ, ದೇಶದಾದ್ಯಂತ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಉಂಟಾಗಿತ್ತು. ಹಾಗಾಗಿ, ಈ ದಾಳಿಯ ನೈತಿಕ ಹೊಣೆ ಹೊತ್ತು ಅಂದಿನ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಶಿವರಾಜ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಭ್ರಷ್ಟಾಚಾರ ಮತ್ತು ಹಗರಣಗಳ ಆರೋಪಟಿ.ಟಿ. ಕೃಷ್ಣಮಾಚಾರಿ (ಹಣಕಾಸು ಸಚಿವ, 1958):ಇವರು ಎರಡೆರಡು ಬಾರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾತ್ರವಲ್ಲ, ಸ್ವತಂತ್ರ ಭಾರತದ ಮೊದಲ ಪ್ರಮುಖ ಆರ್ಥಿಕ ಹಗರಣವೆನಿಸಿದ 1958ರ 'ಮುಂಧ್ರಾ ಹಗರಣ'ದ (Mundhra Scam) ತನಿಖಾ ವರದಿ ಬಂದ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಜೊತೆಗೆ 1965 ರಲ್ಲಿ, ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ಪಷ್ಟನೆ ನೀಡದ ಕಾರಣ, ರಾಜಕೀಯ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಎ. ರಾಜಾ ಮತ್ತು ದಯಾನಿಧಿ ಮಾರನ್ (ಸಂಪರ್ಕ/ಜವಳಿ ಸಚಿವರು, 2010-2011): ಯುಪಿಎ (UPA) ಸರ್ಕಾರದ ಅವಧಿಯಲ್ಲಿ 2G ಸ್ಪೆಕ್ಟ್ರಮ್ ಹಗರಣದ ಆರೋಪದ ಹಿನ್ನೆಲೆಯಲ್ಲಿ ಎ. ರಾಜಾ ಅವರು 2010ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2007ರ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದ ತನಿಖೆ ತೀವ್ರಗೊಂಡಾಗ ಕೇಂದ್ರ ಸಚಿವರಾಗಿದ್ದಾಗ ದಯಾನಿಧಿ ಮಾರನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.ಪವನ್ ಕುಮಾರ್ ಬನ್ಸಲ್ (ರೈಲ್ವೆ ಸಚಿವ, 2013):ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ತಮ್ಮ ಸೋದರಳಿಯನ ಲಂಚದ ಹಗರಣದ ಆರೋಪದಲ್ಲಿ 2013ರ ಮೇ 10ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ರೈಲ್ವೆ ಮಂಡಳಿ ಹುದ್ದೆ ಕೊಡಿಸಲು ಲಂಚ ಪಡೆದ ಆರೋಪದ ಮೇಲೆ ಸಿಬಿಐ, ಪವನ್ ಕುಮಾರ್ ಬನ್ಸಾಲ್ ಅವರ ಸೋದರಳಿಯ ವಿಜಯ್ ಸಿಂಗ್ಲಾ ಅವರನ್ನು ಬಂಧಿಸಿತ್ತು. ಇದೇ ಆರೋಪದಲ್ಲಿ ಪವನ್ ಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಯುದ್ಧ ಮತ್ತು ಸಾರ್ವಜನಿಕ ತೀವ್ರ ಪ್ರತಿಭಟನೆಗಳುವಿ.ಕೆ. ಕೃಷ್ಣ ಮೆನನ್ (ರಕ್ಷಣಾ ಸಚಿವ, 1962): 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದ ಸಿದ್ಧತೆಯ ಕೊರತೆ ಹಾಗೂ ಯುದ್ಧದ ಹಿನ್ನೆಡೆಯ ಕಾರಣದಿಂದ ತೀವ್ರ ಟೀಕೆಗೆ ಒಳಗಾಗಿ ಅಂದಿನ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣ ಮೆನನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರುಧರ್ಮೇಂದ್ರ ಪ್ರಧಾನ್ (ಶಿಕ್ಷಣ ಸಚಿವ, 2026):NEET ಪರೀಕ್ಷೆಯ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಸುದೀರ್ಘ ಪ್ರತಿಭಟನೆಯ ಬಳಿಕ, ನೈತಿಕ ಹೊಣೆ ಹೊತ್ತು ಪ್ರಧಾನ್ ಅವರು ತಮ್ಮ ಹುದ್ದೆಗೆ ನಿನ್ನೆ (ಜುಲೈ 25) ರಾಜೀನಾಮೆ ನೀಡಿದ್ದಾರೆ.ವೈಯಕ್ತಿಕ ಭಿನ್ನಾಭಿಪ್ರಾಯಡಾ. ಬಿ.ಆರ್. ಅಂಬೇಡ್ಕರ್ (ಕಾನೂನು ಸಚಿವ, 1951):ಅಂಬೇಡ್ಕರ್ ಅವರು ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು, ವಿವಾಹ ವಿಚ್ಛೇದನ (ಡೈವೋರ್ಸ್) ಹಕ್ಕು, ಬಹುಪತ್ನಿತ್ವ ನಿಷೇಧ ಮುಂತಾದ ಸಾಮಾಜಿಕ ಸುಧಾರಣೆಗಳನ್ನು ಒಳಗೊಂಡ ಹಿಂದೂ ಕೋಡ್ ಬಿಲ್ ಅನ್ನು ಸಿದ್ಧಪಡಿಸಿ ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ, ಸಂಸತ್ತಿನ ಒಳಗೆ ಮತ್ತು ಹೊರಗೆ ಸಂಪ್ರದಾಯವಾದಿ ನಾಯಕರ ತೀವ್ರ ವಿರೋಧಕ್ಕೆ ಮಣಿದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಮಸೂದೆಯನ್ನು ಮುಂದೂಡಿದರು ಹಾಗೂ ಭಾಗಶಃವಾಗಿ ಮಾತ್ರ ಅಂಗೀಕರಿಸಲು ನಿರ್ಧರಿಸಿದ್ದರು. ಇದರಿಂದ ತೀವ್ರ ನಿರಾಶೆಗೊಂಡ ಅಂಬೇಡ್ಕರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹರಸಿಮ್ರತ್ ಕೌರ್ ಬಾದಲ್ (ಆಹಾರ ಸಂಸ್ಕರಣಾ ಸಚಿವ, 2020):ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗಳನ್ನು ವಿರೋಧಿಸಿ 2020ರ ಸೆಪ್ಟೆಂಬರ್ 17ರಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವೆಯಾಗಿದ್ದ ಹರ್ಸಿಮ್ರತ್ ಕೌರ್ ಬಾದಲ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಶಿರೋಮಣಿ ಅಕಾಲಿದಳ ಪಕ್ಷದ ನಾಯಕಿಯಾಗಿರುವ ಅವರು, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡರು. ಅವರ ರಾಜೀನಾಮೆಯನ್ನು ಸೆಪ್ಟೆಂಬರ್ 18ರಂದು ರಾಷ್ಟ್ರಪತಿಗಳು ಅಂಗೀಕರಿಸಿದ್ದರು.ವೈಯಕ್ತಿಕ ಆರೋಪಗಳುಎಂ.ಜೆ. ಅಕ್ಬರ್ (ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ, 2018):ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಎಂ.ಜೆ. ಅಕ್ಬರ್ ವಿರುದ್ಧ ಅನೇಕ ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪಗಳ ಬೆನ್ನಲ್ಲೆ ದೇಶದಾದ್ಯಂತ #MeToo ಚಳುವಳಿ ತೀವ್ರಗೊಂಡಿತ್ತು. ಅಕ್ಬರ್ ವಿರುದ್ಧ ಆರೋಪ ಮಾಡಿದ್ದ ಬಹುತೇಕ ಮಹಿಳೆಯರು, ಅವರು ಸಂಪಾದಕರಾಗಿದ್ದ ಪ್ರಮುಖ ಪತ್ರಿಕೆಗಳಲ್ಲಿ ಅವರ ಸಹೋದ್ಯೋಗಿಗಳಾಗಿದ್ದವರು. ಆರೋಪಗಳು ತೀವ್ರ ಸ್ವರೂಪ ಪಡೆದ ಹಿನ್ನೆಲೆ 2018ರಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಸಂಸದೀಯ ವ್ಯವಸ್ಥೆಯಲ್ಲಿ ಸಚಿವರು ರಾಜೀನಾಮೆ ನೀಡುವುದು ಕೇವಲ ವೈಯಕ್ತಿಕ ನಿರ್ಧಾರವಾಗಿರದೆ, ಪ್ರಜಾಪ್ರಭುತ್ವದ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಎತ್ತಿಹಿಡಿಯುವ ಪ್ರಮುಖ ಹೆಜ್ಜೆಯಾಗಿ ಗುರುತಿಸಲ್ಪಡುತ್ತದೆ.ದೇಶದಲ್ಲಿ ಹೋರಾಟದ ಹಾದಿಗೆ ಶಕ್ತಿ ತುಂಬಿದ ವಿದ್ಯಾರ್ಥಿಗಳು, ಇಲ್ಲಿದೆ ಹಿನ್ನೋಟನೋಟು ರದ್ದತಿ..ಮಣಿಪುರ ಹಿಂಸಾಚಾರ: ಚರ್ಚೆಗೆ ಗ್ರಾಸವಾದ ಮೋದಿ ಸರ್ಕಾರದ ವಿವಾದಗಳು(ಸುದ್ದಿ ಮೂಲ: ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್, ಪಿಟಿಐ ಮತ್ತು ಇತರೇ ಮೂಲಗಳಿಂದ)