5 ಲಕ್ಷ ಜನರಿಗೆ ಉದ್ಯೋಗ ಖಾತ್ರಿ,1.5 ಕೋಟಿ ಮಾನವ ದಿನ ಸೃಷ್ಟಿಗೆ ಸಿದ್ದತೆ
ಬೆಂಗಳೂರು: ವಿಬಿಜಿ ರಾಮ್ ಯೋಜನೆಯಡಿ ಕರ್ನಾಟಕದಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಆರಂಭಗೊಂಡು ನಾಲ್ಕು ವಾರವೇ ಕಳೆದಿದ್ದು, ಈ ವರ್ಷ 5 ಲಕ್ಷ ಜನರಿಗೆ ಉದ್ಯೋಗ ಖಾತ್ರಿ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಗೆ ಹಣದ ಕೊರತೆ ಇಲ್ಲ. ಪ್ರಥಮ ತ್ರೈಮಾಸಿಕಕ್ಕೆ ₹2900

ಬೆಂಗಳೂರು: ವಿಬಿಜಿ ರಾಮ್ ಯೋಜನೆಯಡಿ ಕರ್ನಾಟಕದಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಆರಂಭಗೊಂಡು ನಾಲ್ಕು ವಾರವೇ ಕಳೆದಿದ್ದು, ಈ ವರ್ಷ 5 ಲಕ್ಷ ಜನರಿಗೆ ಉದ್ಯೋಗ ಖಾತ್ರಿ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿಗೆ ಹಣದ ಕೊರತೆ ಇಲ್ಲ. ಪ್ರಥಮ ತ್ರೈಮಾಸಿಕಕ್ಕೆ ₹2900 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಮೊದಲ ತ್ರೈಮಾಸಿಕಕ್ಕೆ ₹1700 ಕೋಟಿ ರಾಜ್ಯ ಸರ್ಕಾರ 1200 ಕೋಟಿ ಹಣವನ್ನು ನೀಡಿದೆ. ಪ್ರತಿ ತಿಂಗಳು 5 ಲಕ್ಷ ಗ್ರಾಮೀಣರಿಗೆ ಉದ್ಯೋಗ ನೀಡಿ, 1.5 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ ಮಾಡುವಷ್ಟು ಅನುದಾನವಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ, ಕೆರೆ ಕಾಲುವೆ ಅಭಿವೃದ್ಧಿ, ಚೆಕ್ ಡ್ಯಾಂ ಇತ್ಯಾದಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಉದ್ಯೋಗ ಕೇಳಿ ಬರುವ ಪ್ರತಿಯೊಬ್ಬರಿಗೂ, ಇರುವಲ್ಲೇ ಉದ್ಯೋಗ ನೀಡುವಂತೆ ಸಿಇಓಗಳಿಗೆ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.ಬಿಜೆಪಿ ನಾಯಕರಿಂದ ಕಾಟಾಚಾರದ ಬರ ಅಧ್ಯಯನ ಟೀಕೆರಾಜ್ಯದ ಬಿಜೆಪಿ ನಾಯಕರಿಗೆ ರೈತರ ಬಗ್ಗೆಯೂ ಕಾಳಜಿ ಇಲ್ಲ, ವಿದ್ಯಾರ್ಥಿಗಳ ಬಗ್ಗೆಯೂ ಕಾಳಜಿ ಇಲ್ಲ, ಕಾಟಾಚಾರಕ್ಕೆ ಬರ ಅಧ್ಯಯನ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಜೆಪಿ ನಾಯಕರು ಬರ ಪರಿಸ್ಥಿತಿಯ ಅಧ್ಯಯನ ಮಾಡಲು ತೆರಳುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಬರ, ನೆರೆ ಪೀಡಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ಅಧಿಕಾರದ ಹಪಾಹಪಿಗೆ ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ನಿಜಕ್ಕೂ ರಾಜ್ಯದ ಹಿತಕಾಯುವ ಮನಸ್ಸಿದ್ದರೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಹಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ, ಸುಪ್ರೀಂಕೋರ್ಟ್ ಯಾವುದೇ ತಡೆ ನೀಡಿದ್ದರೂ, ಮಹಾದಾಯಿ, ಕಳಸ ಬಂಡೂರಿ ನಾಲಾ ಯೋಜನೆಗೆ ಅನುಮತಿ ನೀಡದೆ ವಿಳಂಬ ದ್ರೋಹ ಮಾಡುತ್ತಿರುವ ಕೇಂದ್ರದ ಮೇಲೆ ಒತ್ತಡ ಹೇರಿ ಯೋಜನೆಗೆ ಅನುಮೋದನೆ ಕೊಡಿಸಲಿ ಎಂದು ಸವಾಲು ಹಾಕಿದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಕೇಂದ್ರದಿಂದ ವಿಶೇಷ ಅನುದಾನ ಕೊಡಿಸುವ ಕಾರ್ಯವನ್ನು ರಾಜ್ಯ ಬಿಜೆಪಿ ನಾಯಕರು ಏಕೆ ಮಾಡುತ್ತಿಲ್ಲ. ತೋರಿಕೆಯ ಅಧ್ಯಯನ ಬಿಟ್ಟು, ರಾಜ್ಯಕ್ಕೆ ಒಳಿತನ್ನು ಮಾಡುವ ಬಗ್ಗೆ ಚಿಂತಸಲಿ ಎಂದು ಹೇಳಿದರು.