ಆಸ್ಪತ್ರೆಯಿಂದ ಸೋನಂ ವಾಂಗ್ಚುಕ್ ಡಿಸ್ಚಾರ್ಜ್ – ರಾಜ್ಘಾಟ್ಗೆ ಆಗಮಿಸಿ ಮಹಾತ್ಮಾ ಗಾಂಧಿಗೆ ನಮನ
-ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇವಲ ಒಂದು ಆರಂಭವಷ್ಟೇ -ಲಡಾಖ್ಗೆ ವಾಪಸ್ ತೆರಳಲಿರುವ ಸೋನಂ-ಗೀತಾಂಜಲಿ ದಂಪತಿ ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ಅವರಿಂದು (ಜು.27) ಮೇದಾಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ರಾಜ್ಘಾಟ್ಗೆ (Rajghat) ಭೇಟಿ ನೀಡಿದರು. ಈ ವೇಳೆ ಮಾಹಾತ್ಮಾ ಗಾಂಧಿಗೆ (Mahatma Gandhi) ನಮನ ಸಲ್ಲಿಸಿದ್ದಾರ

-ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇವಲ ಒಂದು ಆರಂಭವಷ್ಟೇ -ಲಡಾಖ್ಗೆ ವಾಪಸ್ ತೆರಳಲಿರುವ ಸೋನಂ-ಗೀತಾಂಜಲಿ ದಂಪತಿ ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ಅವರಿಂದು (ಜು.27) ಮೇದಾಂತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ರಾಜ್ಘಾಟ್ಗೆ (Rajghat) ಭೇಟಿ ನೀಡಿದರು. ಈ ವೇಳೆ ಮಾಹಾತ್ಮಾ ಗಾಂಧಿಗೆ (Mahatma Gandhi) ನಮನ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಯನ್ನು ಸ್ವಾಗತಿಸುತ್ತೇನೆ. ಆದರೆ ಇದು ಕೇವಲ ಒಂದು ಆರಂಭವಷ್ಟೇ. ಇನ್ನೂ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳಾಗಬೇಕು. ಶೀಘ್ರದಲ್ಲೇ ಪ್ರತಿಭಟನಾಕಾರರ ಮೇಲಿನ ಕೇಸ್ಗಳನ್ನು ಹಿಂಪಡೆಯಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಲಾಠಿಚಾರ್ಜ್ ಮಾಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ VISITED RAJGHAT… before going home. Thank you Bapu, for the path you showed… We just learnt that it remains as relevant today as 100 years ago. No copyright, may share freely pic.twitter.com/YQRMlFZlyX — Sonam Wangchuk (@Wangchuk66) July 27, 2026 ಕಳೆದ 26 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ಚಳವಳಿ ಮುಕ್ತಾಯವಾದ ಬಳಿಕ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಲು ರಾಜಘಾಟ್ಗೆ ಭೇಟಿ ನೀಡುವುದಾಗಿ ಕೇಳಿಕೊಂಡಿದ್ದೆ. ಕಳೆದ ಐದಾರು ವರ್ಷಗಳಿಂದ ನಾವು ಲಡಾಖ್ನಲ್ಲಿ ಗಾಂಧೀಜಿಯವರ ಅಹಿಂಸಾ ಮಾರ್ಗವನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುತ್ತದೆಯೋ ಇಲ್ಲವೋ ಎಂಬ ಖಚಿತತೆ ಇರಲಿಲ್ಲ. ಆದರೆ ಈ ಬಾರಿ, ನೂರು ವರ್ಷಗಳ ಬಳಿಕವೂ ಗಾಂಧೀಜಿಯವರ ಮಾರ್ಗವು ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಪ್ರಸ್ತುತವಾಗಿದೆ ಎಂಬುದನ್ನು ಕಂಡು ನನಗೆ ಧೈರ್ಯ, ನೆಮ್ಮದಿ ಸಿಕ್ಕಿದೆ. ಅಲ್ಲದೆ, ಈ ಅಹಿಂಸಾ ಮಾರ್ಗವು ಮುಂದಿನ ನೂರು ಅಥವಾ ಸಾವಿರ ವರ್ಷಗಳವರೆಗೂ ದೇಶಕ್ಕೆ ಪ್ರಸ್ತುತವಾಗಿ ಮುಂದುವರಿಯಲಿದೆ ಎಂದು ಅಭಿಪ್ರಯಾಪಟ್ಟಿದ್ದಾರೆ.ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್ಟೇಬಲ್ – ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು ಯಾವುದೇ ಸಮಸ್ಯೆಗಳಿಗೆ ಪರಿಹಾರ ಅಥವಾ ಯಶಸ್ಸು ಸಿಕ್ಕಿದ್ದರೆ ಅದು ಬಂದೂಕಿನ ಬಲದಿಂದಾಗಲಿ ಅಥವಾ ಲಾಠಿ-ಕಲ್ಲುಗಳ ಬಳಕೆಯಿಂದಾಗಲಿ ಸಿಕ್ಕಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿಯೇ ನಾನು ಭಾರತದ ಜನರಿಗೆ ಮತ್ತು ಇಡೀ ಜಗತ್ತಿಗೆ, ತಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳನ್ನು ಮಹಾತ್ಮ ಗಾಂಧಿ ತೋರಿಸಿಕೊಟ್ಟ ಶಾಂತಿಯ ಮಾರ್ಗದ ಮೂಲಕವೇ ವ್ಯಕ್ತಪಡಿಸುವಂತೆ ವಿನಂತಿಸುತ್ತೇನೆ. ದೊರೆಯುವುದು ಖಚಿತ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಅದು ಎಂದಿಗೂ ವಿಫಲವಾಗುವುದಿಲ್ಲ. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿರಬಹುದು, ಆದರೆ ಶಾಂತಿಯುತ ಹೋರಾಟದಿಂದ ಕೊನೆಗೂ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.ಇದನ್ನೂ ಓದಿ: ರಾಜೀನಾಮೆ ಬಳಿಕ ಸಂಸತ್ ಭವನಕ್ಕೆ ಬಂದ ಧರ್ಮೇಂದ್ರ ಪ್ರಧಾನ್ಗೆ ಪೇಟ ತೊಡಿಸಿ ಅದ್ಧೂರಿ ಸ್ವಾಗತ