ನಾನು ನ್ಯೂಯಾರ್ಕ್ಗೆ ಬಂದೇ ಬರುತ್ತೇನೆ..: ಮಮ್ದಾನಿಗೆ ನೆತನ್ಯಾಹು ತಿರುಗೇಟು
ಟೆಲ್ ಅವಿವ್: ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಎಚ್ಚರಿಕೆಯ ನಡುವೆಯೂ, ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಾವು ನ್ಯೂಯಾರ್ಕ್ಗೆ ಬರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.ನೆತನ್ಯಾಹು ಒಬ್ಬ ಯುದ್ಧಾಪರಾಧಿ. ಅವರಿಗೆ ನ್ಯೂಯಾರ್ಕ್ನಲ್ಲಿ ಜಾಗವಿಲ್ಲ ಎಂದ

ಟೆಲ್ ಅವಿವ್: ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಅವರ ಎಚ್ಚರಿಕೆಯ ನಡುವೆಯೂ, ಮುಂಬರುವ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಾವು ನ್ಯೂಯಾರ್ಕ್ಗೆ ಬರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.ನೆತನ್ಯಾಹು ಒಬ್ಬ ಯುದ್ಧಾಪರಾಧಿ. ಅವರಿಗೆ ನ್ಯೂಯಾರ್ಕ್ನಲ್ಲಿ ಜಾಗವಿಲ್ಲ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಇತ್ತೀಚೆಗೆ ಹೇಳಿದ್ದರು. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ನೀಡಿರುವ ಬಂಧನ ವಾರಂಟ್ನಂತೆ ಅಮೆರಿಕ ಸರ್ಕಾರ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ನೆತನ್ಯಾಹು, 'ಇಸ್ರೇಲ್–ಅಮೆರಿಕ ನಡುವಿನ ಬಾಂಧವ್ಯ ಮತ್ತು ಈ ಯಹೂದಿ ಮಣ್ಣಿನ ಸತ್ಯವನ್ನು ಪ್ರಪಂಚಕ್ಕೆ ಸಾರಲು ನಾನು ನ್ಯೂಯಾರ್ಕ್ಗೆ ಬಂದೇ ಬರುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ತಿರುಗೇಟು ನೀಡಿದ್ದಾರೆ.ಮುಂದುವರಿದು, ಮೇಯರ್ ಮಮ್ದಾನಿ ಅವರು ನ್ಯೂಯಾರ್ಕ್ನಲ್ಲಿ ಯಹೂದಿಗಳ ವಿರುದ್ಧ ದ್ವೇಷ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ನೆತನ್ಯಾಹು ಆರೋಪಿಸಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್ನ ಪ್ರಾರ್ಥನಾ ಮಂದಿರದ (ಸಿನಗಾಗ್) ಹೊರಗೆ ಯಹೂದಿ ವ್ಯಕ್ತಿಯೊಬ್ಬನ ಮೇಲೆ ನಡೆದ ಹಲ್ಲೆಗೆ ಮೇಯರ್ ಅವರ ಭಾಷಣವೇ ಪ್ರಚೋದನೆ ಎಂದೂ ಅವರು ಆಪಾದಿಸಿದ್ದಾರೆ.ಅಕ್ಟೋಬರ್ 7ರಂದು ಇಸ್ರೇಲ್ ನಾಗರಿಕರ ಮೇಲೆ ನಡೆದ ಭೀಕರ ಹತ್ಯಾಕಾಂಡವನ್ನು ಬೆಂಬಲಿಸುವ ವ್ಯಕ್ತಿಗಳಿಂದ ನಾನು ಪಾಠ ಕಲಿಯಬೇಕಿಲ್ಲ. ನೈಜ ಯುದ್ಧ ಅಪರಾಧಿಗಳು ಹಮಾಸ್ ಉಗ್ರರು ಎಂದೂ ನೆತನ್ಯಾಹು ಕಿಡಿಕಾರಿದ್ದಾರೆ.ಮಮ್ದಾನಿ ಹೇಳಿದ್ದೇನು?ನೆತನ್ಯಾಹು ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಜಾರಿಗೊಳಿಸಿದ ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸಬೇಕೆಂದು ಮಮ್ದಾನಿ ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದರು.ನೆತನ್ಯಾಹು ಓರ್ವ ‘ಯುದ್ಧಾಪರಾಧಿ’ ಹಾಗೂ ಪ್ಯಾಲೆಸ್ಟೀನ್ ನಾಗರಿಕರ ವಿರುದ್ಧ ನಡೆದ ಜನಾಂಗೀಯ ನರಮೇಧದ ಸೂತ್ರಧಾರಿ ಎಂದೂ ಅವರು ಆರೋಪಿಸಿದ್ದರು.ನೆತನ್ಯಾಹು ವಿರುದ್ಧ ಐಸಿಸಿ ಬಂಧನ ವಾರಂಟ್ ಹೊರಡಿಸಿರುವುದಕ್ಕೆ ಸ್ಪಷ್ಟ ಕಾರಣಗಳಿವೆ. 73 ಸಾವಿರಕ್ಕೂ ಅಧಿಕ ಮಂದಿಯ ಕಗ್ಗೊಲೆಗೆ ನೆತನ್ಯಾಹು ಹೊಣೆಗಾರರಾಗಿದ್ದಾರೆ. ಅವರಿಂದಾಗಿ ಸಹಸ್ರಾರು ಮಕ್ಕಳು ಅಂಗವಿಕಲರಾಗಿದ್ದಾರೆ’ ಎಂದು ಮಮ್ದಾನಿ ಹೇಳಿದ್ದಾರೆ.ಒಂದು ವೇಳೆ ನೆತನ್ಯಾಹು ನ್ಯೂಯಾರ್ಕ್ಗೆ ಭೇಟಿ ನೀಡಿದಲ್ಲಿ ಅವರನ್ನು ಬಂಧಿಸಲು ನಗರಾಡಳಿತಕ್ಕೆ ಅಧಿಕಾರವಿದೆಯೇ ಎಂಬುದನ್ನು ತಾನು ಪರಿಶೀಲಿಸಿದ್ದೆ. ಆದರೆ ನನಗೆ ಕಾನೂನಾತ್ಮಕ ಅಧಿಕಾರವಿಲ್ಲ. ಹಾಗಾಗಿ ಈ ವಾರಂಟ್ ಅನ್ನು ಕಾರ್ಯಗತಗೊಳಿಸಲು ಅಮೆರಿಕದ ಫೆಡರಲ್ ಸರ್ಕಾರ ಐಸಿಸಿ ಜೊತೆ ಸಹಕರಿಸಬೇಕು ಎಂದು ಅವರು ಕರೆ ನೀಡಿದ್ದರು.ಇದೇ ವೇಳೆ ನ್ಯೂಯಾರ್ಕ್ಗೆ ಆಗಮಿಸಲಿರುವ ನೆತನ್ಯಾಹು ಅವರನ್ನು ನಗರಾಡಳಿತವು ಸ್ವಾಗತಿಸುವುದಿಲ್ಲ ಎಂದೂ ಅವರು ಹೇಳಿದ್ದರು.ಆಧಾರ: ಎಎನ್ಐ