ಅಗತ್ಯಕ್ಕಿಂತ ಹೆಚ್ಚೇ ಇವೆ: ಯುದ್ಧ ಸಾಮಗ್ರಿ ಕೊರತೆ ವರದಿ ತಳ್ಳಿ ಹಾಕಿದ ಟ್ರಂಪ್
ವಾಷಿಂಗ್ಟನ್: ಇರಾನ್ನೊಂದಿಗಿನ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಸೇನೆಯಲ್ಲಿ ಯುದ್ಧ ಸಾಮಗ್ರಿಗಳ (ಕ್ಷಿಪಣಿ ನಿರೋಧಕಗಳು) ಕೊರತೆ ಎದುರಾಗಿದೆ ಎಂಬ ವರದಿಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಯುದ್ಧ ಸಾಮಗ್ರಿ ಕೊರತೆಯು ಸೇನಾ ಕಾರ್ಯಾಚರಣೆಗೆ ಹಿನ್ನಡೆಯುಂಟುಮಾಡುತ್ತಿದೆ ಎಂಬ ವರದಿಗಳನ್ನು ನಿರಾಕರಿ

ವಾಷಿಂಗ್ಟನ್: ಇರಾನ್ನೊಂದಿಗಿನ ಸಂಘರ್ಷ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕ ಸೇನೆಯಲ್ಲಿ ಯುದ್ಧ ಸಾಮಗ್ರಿಗಳ (ಕ್ಷಿಪಣಿ ನಿರೋಧಕಗಳು) ಕೊರತೆ ಎದುರಾಗಿದೆ ಎಂಬ ವರದಿಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಯುದ್ಧ ಸಾಮಗ್ರಿ ಕೊರತೆಯು ಸೇನಾ ಕಾರ್ಯಾಚರಣೆಗೆ ಹಿನ್ನಡೆಯುಂಟುಮಾಡುತ್ತಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. 'ನಮ್ಮ ಬಳಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಆಯುಧಗಳಿವೆ. ಅಗತ್ಯಕ್ಕಿಂತಲೂ ಹೆಚ್ಚಿನ ಯುದ್ಧ ಸಾಮಗ್ರಿಗಳು ನಮ್ಮ ಬಳಿ ಇವೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ' ಎಂದಿದ್ದಾರೆ.ಸೇನಾಧಿಕಾರಿಗಳ ಕಳವಳ ಇತ್ತೀಚೆಗೆ ಇರಾನ್ ತನ್ನ ಕ್ಷಿಪಣಿ ದಾಳಿಯ ತಂತ್ರವನ್ನು ಬದಲಾಯಿಸಿದೆ. ಇದನ್ನು ತಡೆಯಲು ಅಮೆರಿಕ ಸೇನೆಯು ನಿರೀಕ್ಷೆಗಿಂತಲೂ ಹೆಚ್ಚಿನ ಕ್ಷಿಪಣಿಗಳನ್ನು ಬಳಸಬೇಕಾಗಿದೆ. ಇತ್ತೀಚೆಗೆ ಜೋರ್ಡಾನ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಮೂವರು ಅಮೆರಿಕನ್ ಸೈನಿಕರು ಮೃತಪಟ್ಟಿದ್ದು, ಸೇನಾಧಿಕಾರಿಗಳ ನಿದ್ರೆಗೆಡಿಸಿತ್ತು.ಯುದ್ಧ ಹೀಗೆಯೇ ಮುಂದುವರಿದರೆ ವೈರಿ ಪಡೆಗಳ ಕ್ಷಿಪಣಿಗಳನ್ನು ಹೊಡೆದುರುಳಿಸುವ 'ಪೇಟ್ರಿಯಾಟ್' ಕ್ಷಿಪಣಿಗಳ ದಾಸ್ತಾನು ಖಾಲಿಯಾಗಬಹುದು ಎಂದು ಅಮೆರಿಕದ ಸೇನಾ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿತ್ತು.ಯುದ್ಧ ಸಾಮಗ್ರಿಗಳ ಅಭಾವದ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧ ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆ ನಡೆಸುವ ಯೋಜನೆಯನ್ನು ಟ್ರಂಪ್ ಸದ್ಯಕ್ಕೆ ಮುಂದೂಡಿದ್ದಾರೆ ಎಂದು ವರದಿಯಾಗಿತ್ತು.ಆದರೆ, ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಬಳಿ ಸಾಕಷ್ಟು ಸಂಪನ್ಮೂಲಗಳಿವೆ. ಅಧ್ಯಕ್ಷರು ಯಾವುದೇ ಆದೇಶ ನೀಡಿದರೂ ಅದನ್ನು ಈಡೇರಿಸಲು ನಮ್ಮ ಸೇನೆ ಸಂಪೂರ್ಣ ಸಜ್ಜಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಇಲ್ಲಿಯವರೆಗೆ ಎಷ್ಟು ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬ ನಿಖರವಾದ ಲೆಕ್ಕಾಚಾರವನ್ನು ಬಹಿರಂಗಪಡಿಸುವುದು ದೇಶದ ಭದ್ರತೆಗೆ ಅಪಾಯ ತರಬಹುದು ಎಂದೂ ತಿಳಿಸಿದೆ.ಆಧಾರ: ಎಎನ್ಐ