ಕಚೇರಿಗೆ ಶಾರ್ಟ್,ಟಿಶರ್ಟ್ ಉಡುಪು; ಜಪಾನ್ ಪುರುಷರಿಗೆ ಖುಷಿ, ಮಹಿಳೆಯರಿಗೆ ಮುಜುಗರ
ಟೋಕಿಯೊ: ಜಪಾನ್ನಲ್ಲಿ ಈಗ ಬೇಸಿಗೆ. ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹೀಗಾಗಿ ಕಚೇರಿಗೆ ಫಾರ್ಮಲ್ ಶರ್ಟ್, ಟೈ ಧರಿಸಿ ಬರುವ ಪುರುಷ ಉದ್ಯೋಗಿಗಳಿಗೆ ಟೋಕಿಯೊ ಮೆಟ್ರೊಪಾಲಿಟನ್ ಸರ್ಕಾರ ಟಿ–ಶರ್ಟ್, ಶಾರ್ಟ್ಗಳನ್ನು ಧರಿಸಿ ಬರಲು ಅನುಮತಿ ನೀಡಿದೆ. ಏಪ್ರಿಲ್ನಲ್ಲಿ ಟೋಕಿಯೊ ಗವರ್ನರ್ ಯುರಿಕೊ ಕೊಯಿಕಿ ‘ಟೋಕಿಯೊ ಕೂಲ್ ಬಝ್’ ಎನ್ನುವ ಅಭಿಯಾನವನ್ನು
ಟೋಕಿಯೊ: ಜಪಾನ್ನಲ್ಲಿ ಈಗ ಬೇಸಿಗೆ. ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹೀಗಾಗಿ ಕಚೇರಿಗೆ ಫಾರ್ಮಲ್ ಶರ್ಟ್, ಟೈ ಧರಿಸಿ ಬರುವ ಪುರುಷ ಉದ್ಯೋಗಿಗಳಿಗೆ ಟೋಕಿಯೊ ಮೆಟ್ರೊಪಾಲಿಟನ್ ಸರ್ಕಾರ ಟಿ–ಶರ್ಟ್, ಶಾರ್ಟ್ಗಳನ್ನು ಧರಿಸಿ ಬರಲು ಅನುಮತಿ ನೀಡಿದೆ. ಏಪ್ರಿಲ್ನಲ್ಲಿ ಟೋಕಿಯೊ ಗವರ್ನರ್ ಯುರಿಕೊ ಕೊಯಿಕಿ ‘ಟೋಕಿಯೊ ಕೂಲ್ ಬಝ್’ ಎನ್ನುವ ಅಭಿಯಾನವನ್ನು ಆರಂಭಿಸಿದ್ದರು. ಇದು ಸದ್ಯ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಎಸಿ ಬಳಕೆಯನ್ನು ಕಡಿಮೆ ಮಾಡಿ ವಿದ್ಯುತ್ ಉಳಿಸುವುದು ಮತ್ತು ನೌಕರರಿಗೆ ಆರಾಮದಾಯಕ ವಾತಾವರಣ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.ಕಳೆದ 4 ತಿಂಗಳಿನಿಂದ ಇದು ಜಾರಿಯಲ್ಲಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು, ಇದರಿಂದಾಗಿ ಖುಷಿಪಟ್ಟಿದ್ದು, ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಎಂದಿದ್ದಾರೆ. ಇನ್ನೂ ಕೆಲವರು ಪುರುಷರ ವಸ್ತ್ರಕ್ಕೆ ಮಾತ್ರ ನಿಯಮ ಬದಲಾವಣೆ ಮಾಡಲಾಗಿದೆ. ಆದರೆ ಮಹಿಳೆಯರು ಬಿಗಿ ಉಡುಪನ್ನೇ ಧರಿಸುತ್ತಿದ್ದಾರೆ ಎಂದಿದ್ದಾರೆ.ಮುಜುಗರ ತರುತ್ತಿದೆ ಎಂದ ಮಹಿಳೆಯರುಪುರುಷರ ಹೊಸ ಉಡುಗೆ ಕಂಡ ಮಹಿಳೆಯರು ದಂಗಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲ ಮಹಿಳೆಯರು, ಪುರುಷರು ಶಾರ್ಟ್ಸ್ ಧರಿಸಿ ಬರುವುದರಿಂದ ಅರ್ಧ ಕಾಲುಗಳು ಕಾಣಿಸುತ್ತಿರುತ್ತವೆ, ಅದಕ್ಕಿಂತ ಕಾಲುಗಳ ಮೇಲಿರುವ ದಪ್ಪ ಕೂದಲು ಮುಜುಗರ ಉಂಟುಮಾಡುತ್ತಿದೆ ಎಂದಿದ್ದಾರೆ.ಈ ಬಗ್ಗೆ ಬಿಬಿಸಿ ಜತೆ ಮಾತನಾಡಿರುವ ಟೋಕಿಯೊ ಮೆಟ್ರೊಪಾಲಿಟನ್ ಸರ್ಕಾರದ ಪರಿಸರ ಇಲಾಖೆಯ ಅಧಿಕಾರಿ ನೊಬೋರು ವಾತಾನಬೆ, ‘ಸೆಕೆಯಿಂದ ಪಾರಾಗಲು ಏನನ್ನು ಧರಿಸಬೇಕು ಎಂದು ಹೇಳುವ ಬದಲು ಜನರಿಗೆ ಬೇರೆ ಆಯ್ಕೆಗಳನ್ನು ನೀಡಬೇಕು. ಕೆಲಸದ ಉಡುಪು ಯಾರಿಗೂ ಆಕ್ಷೇಪಾರ್ಹವಾಗಿಲ್ಲದಿದ್ದರೆ ಯಾವುದೇ ಸಮಸ್ಯೆ ಇರಬಾರದು’ ಎಂದಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಜಪಾನ್ನ ಉದ್ಯೋಗಿಗಳು, ಅದರಲ್ಲೂ ಸ್ಟಾರ್ಟ್ಅಪ್ ಮತ್ತು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುವವರು ಕ್ಯಾಶುವಲ್ ಉಡುಪುಗಳನ್ನು ಹೆಚ್ಚು ಧರಿಸುತ್ತಿದ್ದಾರೆ. ಆದರೆ ಈ ವರ್ಷ ಟೋಕಿಯೊ ಸರ್ಕಾರ ತಂದ ಉಡುಪಿನ ಉಪಕ್ರಮವನ್ನು ಹೆಚ್ಚು ಜನರು ನೆಚ್ಚಿಕೊಂಡಿದ್ದಾರೆ. ಆದರೂ, ಕೆಲವರು ತಮ್ಮ ಕಾಲಿನ ರೋಮಗಳ ಬಗ್ಗೆ ಮುಜುಗರ, ಸಂಕೋಚವನ್ನು ಅನುಭವಿಸುತ್ತಿದ್ದಾರೆ.ಕಚೇರಿಗೆ ಶಾರ್ಟ್ಸ್ ಹಾಕಿಕೊಂಡು ಹೋಗಲು ಬಯಸುವ ಅನೇಕ ಜಪಾನಿ ಪುರುಷರು ತಮ್ಮ ಕಾಲುಗಳ ಕೂದಲನ್ನು ತೆಗೆಸಿಕೊಳ್ಳಲು ಕ್ಲಿನಿಕ್ಗಳಿಗೆ ಕ್ಯೂ ನಿಲ್ಲಲು ಪ್ರಾರಂಭಿಸಿದ್ದಾರೆ ಎಂದು ವೈದ್ಯರೊಬ್ಬರು ಬಿಬಿಸಿಗೆ ತಿಳಿಸಿದ್ದಾರೆ.2005ರಲ್ಲೇ ಆರಂಭವಾಗಿದ್ದ ಅಭಿಯಾನಗವರ್ನರ್ ಕೊಯಿಕೆ 2005ರಲ್ಲಿ ದೇಶದಲ್ಲಿ ವಿದ್ಯುತ್ ಸೇರಿದಂತೆ ಇತರ ಶಕ್ತಿಗಳ ಉಳಿತಾಯಕ್ಕಾಗಿ ‘ಕೂಲ್ ಬಝ್’ ಅಭಿಯಾನವನ್ನು ಆರಂಭಿಸಿದ್ದರು. ಕಚೇರಿಗಳಿಗೆ ಶಾರ್ಟ್, ಟೀ ಶರ್ಟ್ ಧರಿಸಿ ಬರುವಂತೆ ಪ್ರೋತ್ಸಾಹಿಸಿದ್ದರು. 2011ರಲ್ಲಿ ಭೂಕಂಪ, ಸುನಾಮಿ ಅಪ್ಪಳಿಸಿದ ಬಳಿಕ ಸರ್ಕಾರ ಇದೇ ಅಭಿಯಾನವನ್ನು ‘ಸೂಪರ್ ಕೂಲ್ ಬಝ್’ ಎಂದು ಹೆಸರಿಸಿ ಮನೆಗಳಿಗೂ ಉಡುಪಿನ ನಿಯಮವನ್ನು ವಿಸ್ತರಿಸಿತ್ತು. ಜಪಾನ್ನಲ್ಲಿ 40 ಡಿಗ್ರಿ ತಾಪಮಾನ ಜಪಾನ್ನಲ್ಲಿ ತಾಪಮಾನ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಹಲವರು ಹೀಟ್ ಸ್ಟ್ರೋಕ್ನಿಂದ ಮೃತಪಟ್ಟಿದ್ದಾರೆ. ಜುಲೈ 6–12ರ ಅವಧಿಯಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.ದೇಶದಾದ್ಯಂತ ಫ್ಯಾನ್ಗಳಿರುವ ಉಡುಪು, ಬಿಸಾಡಬಹುದಾದ ಒದ್ದೆ ಟವೆಲ್ಗಳು, ನೇರಳಾತೀತ ಕಿರಣ ಮತ್ತು ಬಿಸಿಯನ್ನು ತಡೆಯಬಲ್ಲ ಛತ್ರಿಗಳು ಮತ್ತು ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳುವ ಫ್ಯಾನ್ಗಳಿಗೆ ಬೇಡಿಕೆ ಹೆಚ್ಚಿದೆ.