ಬಿಒಬಿ ಲಾಭ ಶೇ 48ರಷ್ಟು ಇಳಿಕೆ
ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಜೂನ್ ತ್ರೈಮಾಸಿಕದಲ್ಲಿ ₹1,783 ಕೋಟಿ ನಿವ್ವಳ ಲಾಭ ಗಳಿಸಿದೆ.ಆದರೆ, ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 48ರಷ್ಟು ಇಳಿಕೆ ಆಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ತಿಳಿಸಿದೆ.ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಬಡ್ಡಿ ವರಮಾನವು ಶೇ 10ರಷ್ಟು ಏರಿಕೆಯಾಗಿದ್ದು, ₹12,5

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಜೂನ್ ತ್ರೈಮಾಸಿಕದಲ್ಲಿ ₹1,783 ಕೋಟಿ ನಿವ್ವಳ ಲಾಭ ಗಳಿಸಿದೆ.ಆದರೆ, ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 48ರಷ್ಟು ಇಳಿಕೆ ಆಗಿದೆ ಎಂದು ಬ್ಯಾಂಕ್ ಷೇರುಪೇಟೆಗೆ ತಿಳಿಸಿದೆ.ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಬಡ್ಡಿ ವರಮಾನವು ಶೇ 10ರಷ್ಟು ಏರಿಕೆಯಾಗಿದ್ದು, ₹12,524 ಕೋಟಿ ಗಳಿಸಿದೆ. ಸಾಲ ನೀಡುವುದರಲ್ಲಿ ಶೇ 17ರಷ್ಟು ಬೆಳವಣಿಗೆ ದಾಖಲಿಸಿದೆ.ಎಫ್ಸಿಎನ್ಆರ್ (ಬಿ) ಠೇವಣಿ ಮೂಲಕ 2 ಬಿಲಿಯನ್ ಡಾಲರ್, ಬಾಹ್ಯ ವಾಣಿಜ್ಯ ಸಾಲದಿಂದ 1.5 ಬಿಲಿಯನ್ ಡಾಲರ್ ಮತ್ತು ಡಾಲರ್ನ ಬಾಂಡ್ಗಳಿಂದ (ಸಾಲಪತ್ರ) 1 ಬಿಲಿಯನ್ ಡಾಲರ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.ಬ್ಯಾಂಕ್ನ ವಸೂಲಾಗದ ಸಾಲದ ಸರಾಸರಿ ಪ್ರಮಾಣ ಶೇ 1.89ರಿಂದ ಶೇ 1.99ಕ್ಕೆ ಏರಿಕೆ ಆಗಿದೆ.ಯುಎಇ ಮೂಲದ ಎನ್ಎಂಸಿ ಸಮೂಹದೊಂದಿಗಿನ ದೀರ್ಘಕಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ಯರ್ಥ ಮಾಡಿಕೊಳ್ಳಲಾಗಿದ್ದು, ₹5,700 ಕೋಟಿ ಪಾವತಿಸಲಾಗಿದೆ. ಇದು ಲಾಭದ ಇಳಿಕೆಗೆ ಕಾರಣ ಎಂದು ಬ್ಯಾಂಕ್ ತಿಳಿಸಿದೆ.
Read the complete story at Prajavani