ರೀಲ್ಸ್ ಬಿಟ್ಟು, ಕಸ ತೆರವುಗೊಳಿಸಿ: ಆರ್.ಅಶೋಕ
ಪ್ರಜಾವಾಣಿ ವಾರ್ತೆಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಬೈದು, ‘ರೀಲ್ಸ್’ ಮಾಡಿಕೊಂಡು ಬಿಟ್ಟಿ ಪ್ರಚಾರ ಪಡೆಯುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ರೀಲ್ಸ್ ಬಿಟ್ಟು, ಕಸ ತೆರವುಗೊಳಿಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ ಕುರಿತು ‘ಪ್ರಜಾವ

ಪ್ರಜಾವಾಣಿ ವಾರ್ತೆಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಬೈದು, ‘ರೀಲ್ಸ್’ ಮಾಡಿಕೊಂಡು ಬಿಟ್ಟಿ ಪ್ರಚಾರ ಪಡೆಯುವುದನ್ನೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ರೀಲ್ಸ್ ಬಿಟ್ಟು, ಕಸ ತೆರವುಗೊಳಿಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ.ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ‘ತ್ಯಾಜ್ಯದ ಆಗರ ಕೆ.ಆರ್.ಪುರ’ ಮತ್ತು ‘ಮಲ್ಲತಹಳ್ಳಿ: ಕಸದ ದುರ್ನಾತ’ ಎಂಬ ವರದಿಗಳನ್ನು ‘ಎಕ್ಸ್’ನಲ್ಲಿ ಅವರು ಹಂಚಿಕೊಂಡಿದ್ದಾರೆ.‘ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೇ, ಇತ್ತ ಕೆ.ಆರ್.ಪುರ, ದೇವಸಂದ್ರ, ರಾಮಮೂರ್ತಿನಗರದಿಂದ ಹಿಡಿದು ಅತ್ತ ಮಲ್ಲತ್ತಹಳ್ಳಿಯವರೆಗೆ ಇಡೀ ಬೆಂಗಳೂರು ಕಸದ ತಾಣವಾಗಿ ಮಾರ್ಪಟ್ಟಿದೆ. ರಸ್ತೆ ಬದಿಗಳಲ್ಲಿ ಗಬ್ಬು ನಾರುವ ತ್ಯಾಜ್ಯದ ರಾಶಿ, ಸಾಂಕ್ರಾಮಿಕ ರೋಗಗಳ ಭೀತಿ - ಇದೇನಾ ನಿಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು’ ಎಂದು ಪ್ರಶ್ನಿಸಿದ್ದಾರೆ.‘ಬೆಂಗಳೂರು ಅಭಿವೃದ್ಧಿ ಸಚಿವರು ರೀಲ್ಸ್ ಮಾಡುತ್ತಿದ್ದರೆ, ಜಿಬಿಎ ಅಧಿಕಾರಿಗಳು ಸಾರ್ವಜನಿಕರ ಫೋನ್ ಕರೆ ಸ್ವೀಕರಿಸಲೂ ಸಿದ್ಧರಿಲ್ಲ. 10-15 ದಿನಗಳಿಗೊಮ್ಮೆ ಕಸ ತೆರವುಗೊಳಿಸುವ ಪರಿಸ್ಥಿತಿ ಬಂದೊದಗಿದೆ ಎಂದರೆ ನಗರದ ಆಡಳಿತ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಬೆಂಗಳೂರನ್ನು ಸಾಲು ಸಾಲು ‘ಬ್ಲ್ಯಾಕ್ ಸ್ಪಾಟ್’ಗಳನ್ನಾಗಿ ಪರಿವರ್ತಿಸಿ, ಜನರನ್ನು ಸಾಂಕ್ರಾಮಿಕ ರೋಗಕ್ಕೆ ತಳ್ಳಿರುವ, ಕಾಂಗ್ರೆಸ್ ನೇತೃತ್ವದ ಈ ನಾಲಾಯಕ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಮುಖ್ಯಮಂತ್ರಿ ಶಿವಕುಮಾರ್ ಅವರೇ, ಪೊಳ್ಳು ಜಾಹೀರಾತುಗಳ ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಶೋಆಫ್ ಮಾಡುವುದನ್ನು ನಿಲ್ಲಿಸಿ. ತಕ್ಷಣವೇ ಕಸದ ಸಮಸ್ಯೆಯನ್ನು ಬಗೆಹರಿಸಿ, ರಾಜಧಾನಿಯ ಜನರಿಗೆ ಸ್ವಚ್ಛ ವಾತಾವರಣ ನೀಡಿ. ಕಸದ ಸಮಸ್ಯೆಯ ನಿರ್ಲಕ್ಷ್ಯ ಹೀಗೆ ಮುಂದುವರೆದರೆ, ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಎಚ್ಚರಿಸಿದ್ದಾರೆ.