‘ಈ ಗೆಲುವನ್ನು ಕಾರ್ಗಿಲ್ ಯೋಧರಿಗೆ ಅರ್ಪಿಸುತ್ತೇನೆ’ ಪಾಕ್ ಮಣಿಸಿದ ಜದುಮಣಿ ಹೇಳಿಕೆ
ಗ್ಲ್ಯಾಸ್ಗೋ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ (CWG) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಯೋಧ ಹಾಗೂ ಬಾಕ್ಸರ್ ಜದುಮಣಿ ಸಿಂಗ್ (Jadumani Singh) ಪಾಕಿಸ್ತಾನದ ಬಾಕ್ಸರ್ ವಿರುದ್ಧ ಐತಿಹಾಸಿಕ ಮತ್ತು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪುರುಷರ 55 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (ರೌಂಡ್ ಆಫ್ 16) ಜದುಮಣಿ ಸಿಂಗ್ ಅವರು

ಗ್ಲ್ಯಾಸ್ಗೋ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ (CWG) ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತೀಯ ಸೇನೆಯ ಯೋಧ ಹಾಗೂ ಬಾಕ್ಸರ್ ಜದುಮಣಿ ಸಿಂಗ್ (Jadumani Singh) ಪಾಕಿಸ್ತಾನದ ಬಾಕ್ಸರ್ ವಿರುದ್ಧ ಐತಿಹಾಸಿಕ ಮತ್ತು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪುರುಷರ 55 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (ರೌಂಡ್ ಆಫ್ 16) ಜದುಮಣಿ ಸಿಂಗ್ ಅವರು ಪಾಕಿಸ್ತಾನದ ಸುಮಾಮಾ ರೆಹಮಾನ್ ಅವರನ್ನು 5-0 ಅಂತರದ ನೇರ ಸೆಟ್ನಿಂದ ಗೆಲುವು ಸಾಧಿಸಿದರು. ಪ್ರಾರಂಭಿಕ ಸುತ್ತು: ಪಂದ್ಯದ ಆರಂಭಿಕ ಸುತ್ತಿನಲ್ಲಿ ಎಚ್ಚರಿಕೆಯ ಆಟವಾಡಿದ ಜದುಮಣಿ, ಎದುರಾಳಿ ರೆಹಮಾನ್ ಅವರ ಪಂಚ್ ಮತ್ತು ತಂತ್ರವನ್ನು ಸೂಕ್ಷ್ಮವಾಗಿ ಗಮನಿಸಿದರು. Big Rivalry. Bigger Statement A fearless display sees Jadumani Singh defeat Pakistan's Sumama Rehman and book his place in the Quarter-finals. #SonySportsNetwork #SonyLIV #Glasgow2026 #GlasgowMeinTiranga #Cheer4Bharat pic.twitter.com/g9ObLZDQTt— Sony Sports Network (@SonySportsNetwk) July 26, 2026 ಎರಡನೇ ಸುತ್ತಿನಲ್ಲಿ ಆಕ್ರಮಣಕಾರಿ ಆಟ: ಎರಡನೇ ಸುತ್ತಿನಿಂದ ಆಕ್ರಮಣಕಾರಿ ಶೈಲಿಗೆ ತಿರುಗಿದ ಜದುಮಣಿ, ಪ್ರಬಲ ಪಂಚ್ಗಳ ಮೂಲಕ ಪಾಕಿಸ್ತಾನಿ ಬಾಕ್ಸರ್ಗೆ ಆಘಾತ ನೀಡಿದರು. ಪರಿಸ್ಥಿತಿ ಎಷ್ಟರಮಟ್ಟಿಗಿತ್ತೆಂದರೆ, ರೆಫರಿಯು ಪಾಕ್ ಬಾಕ್ಸರ್ಗೆ 'ಸ್ಟ್ಯಾಂಡಿಂಗ್ ಎಂಟು ಕೌಂಟ್' ನೀಡಬೇಕಾಯಿತು. ಸಂಪೂರ್ಣ ಮೇಲುಗೈ: ಮೂರನೇ ಸುತ್ತಿನಲ್ಲಿ ತಮ್ಮ ವೇಗದ 'ಫುಟ್ವರ್ಕ್' ಹಾಗೂ ಕೌಂಟರ್ ಅಟ್ಯಾಕ್ ತಂತ್ರದಿಂದ ಸುಲಭ ಅಂಕ ಗಳಿಸಿದ ಜದುಮಣಿ, ಅಂತಿಮವಾಗಿ 5-0 ಅಂತರದಲ್ಲಿ ಜಯಭೇರಿ ಬಾರಿಸಿದರು. ಕ್ರೀಡಾಂಗಣದಲ್ಲಿದ್ದ ಭಾರತೀಯ ಬೆಂಬಲಿಗರು ‘ಭಾರತ್ ಮಾತಾ ಕೀ ಜೈ’ ಹಾಗೂ ‘ಇಂಡಿಯಾ.. ಇಂಡಿಯಾ’ ಎಂದು ಘೋಷಣೆ ಕೂಗುತ್ತಾ ಜದುಮಣೆ ಅವರನ್ನು ಹುರಿದುಂಬಿಸಿದರು. ಅವರು ಜುಲೈ 26ರ 'ಕಾರ್ಗಿಲ್ ವಿಜಯ್ ದಿವಸ್' ದಿನದಂದೇ ಈ ಗೆಲುವು ಸಾಧಿಸಿದ್ದರಿಂದ ತಮ್ಮ ಗೆಲುವನ್ನು ಕಾರ್ಗಿಲ್ ಯುದ್ಧದ ಭಾರತೀಯ ಯೋಧರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಇನ್ನೂ ವಿಶೇಷ ಅಂದರೆ, ಜದುಮಣಿ ಕೂಡ ಭಾರತೀಯ ಸೇನೆಯ ಭಾಗವಾಗಿದ್ದಾರೆ.ಕಾರ್ಗಿಲ್ ವಿಜಯ್ ದಿವಸ: ಯೋಧರ ಬೆನ್ನಿಗೆ ನಿಂತ ವೀರ ನಾರಿಯರ ಸಾಹಸಗಾಥೆಕಾಮನ್ವೆಲ್ತ್ನಲ್ಲಿ ಖಾತೆ ತೆರೆದ ಭಾರತ: ಪೋಲಿಯೊ ಪೀಡಿತ ಝಂಡು ಕುಮಾರ್ಗೆ ಕಂಚು‘ನನ್ನ ಈ ಗೆಲುವನ್ನು ಭಾರತದ ಕಾರ್ಗಿಲ್ ಯುದ್ಧದ ವೀರ ಯೋಧರಿಗೆ ಅರ್ಪಿಸುತ್ತೇನೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆದ್ದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಮುಂದಿನ ಕ್ವಾರ್ಟರ್ ಫೈನಲ್ನಲ್ಲಿಯೂ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವುದೇ ನನ್ನ ಮುಖ್ಯ ಗುರಿ’ ಎಂದು ಪಂದ್ಯದ ಬಳಿಕ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.