ಚಿಂತಾಮಣಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಗುರುವಾರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಎಸ್ಎಫ್ಎಸ್ ಶಾಲೆ ಮಂಜುನಾಥ್, ಖಜಾಂಚಿಯಾಗಿ ವಾಣಿ ಶಾಲೆ ಮಂಜುನಾಥ್, ಸಹ ಕಾರ್ಯದರ್ಶಿ ಗ್ರಾಮಾಂತರ ಪ್ರೌಢಶಾಲೆ ಬುರಡಗುಂಟೆ ಮಂಜುನಾಥ್, ಗೌರವಾಧ್ಯಕ್ಷ ಬಾಲಕಿಯರ ಪ್ರೌಢಶಾಲೆಯ ಎಂ.ರಾಜಗೋಪಾಲ್, ಜಿಲ್ಲಾ ಪ್ರತಿನಿಧಿಯಾಗಿ

ಚಿಂತಾಮಣಿ: ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಗುರುವಾರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಎಸ್ಎಫ್ಎಸ್ ಶಾಲೆ ಮಂಜುನಾಥ್, ಖಜಾಂಚಿಯಾಗಿ ವಾಣಿ ಶಾಲೆ ಮಂಜುನಾಥ್, ಸಹ ಕಾರ್ಯದರ್ಶಿ ಗ್ರಾಮಾಂತರ ಪ್ರೌಢಶಾಲೆ ಬುರಡಗುಂಟೆ ಮಂಜುನಾಥ್, ಗೌರವಾಧ್ಯಕ್ಷ ಬಾಲಕಿಯರ ಪ್ರೌಢಶಾಲೆಯ ಎಂ.ರಾಜಗೋಪಾಲ್, ಜಿಲ್ಲಾ ಪ್ರತಿನಿಧಿಯಾಗಿ ಉಪೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ನರಸಿಂಹಪ್ಪ, ರಾಜ್ಯ ಪ್ರಚಾರ ಸಮಿತಿ ಸದಸ್ಯ ಶ್ರೀಧರ್ ಹಿರೇಮಠ್, ಪುನೀತ್ ಕುಮಾರ, ಜಿಲ್ಲಾ ಖಜಾಂಚಿ ಸುರೇಶ ಬಾಬು ಹಾಜರಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260727-16-2001774641
Read the complete story at Prajavani